Padubidri: ಹೆಜಮಾಡಿ ಬಂದರು ಮೀನಮೇಷ ಎಣಿಕೆ
ಪೂರ್ಣಗೊಳ್ಳದ ಭೂಸ್ವಾಧೀನ; ಅರೆಬರೆ ಕಾಮಗಾರಿ; ಹೆಚ್ಚುವರಿ ಹಣ ಬಿಡುಗಡೆಗೆ ಶಾಸಕ ಗುರ್ಮೆ ಮನವಿ
Team Udayavani, Nov 6, 2024, 3:35 PM IST
ಪಡುಬಿದ್ರಿ: 180 ಕೋಟಿ ರೂ. ವೆಚ್ಚದ ಹೆಜಮಾಡಿ ಸರ್ವಋತು ಬಂದರು ಯೋಜನೆಯು ಇನ್ನೂ ಮೀನ-ಮೇಷ ಎಣಿಸುತ್ತಿದೆ. ಕರಾವಳಿ ಭಾಗದ ಮೀನುಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗೆ ಬಲವನ್ನು ತಂದುಕೊಡಬಲ್ಲ ಈ ಯೋಜನೆಯ ಕಾಮಗಾರಿಗಳು ಅರೆಬರೆಯಾಗಿದ್ದು, ಭೂಸ್ವಾಧೀನ ಪ್ರಕ್ರಿಯೆಯು ಇನ್ನೂ ಪೂರ್ಣಗೊಂಡಿಲ್ಲ. ಈ ಯೋಜನೆಗೆ ಹೆಚ್ಚುವರಿ ಹಣ ಬಿಡುಗಡೆ ಮಾಡಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಅವರು ಸೋಮವಾರ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.
ಕೇಂದ್ರ, ರಾಜ್ಯಗಳ 50:50 ಅನುಪಾತದ ಈ ಮಹತ್ವಾಕಾಂಕ್ಷಿ ಯೋಜನೆಗೆ 2021ರ ಜ. 19ರಂದು ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ಶಿಲಾನ್ಯಾಸ ಮಾಡಿದ್ದರು. ಯೋಜನೆಯಡಿ ಸರಕಾರದ ಸುಮಾರು 70 ಎಕ್ರೆ ಜಾಗದಲ್ಲಿ ಅರೆಬರೆ ಆವರಣ ಗೋಡೆ ಕಾಮಗಾರಿ, ಗೇಟು, ಭೂಮಿಯ ಸಮತಟ್ಟುಗೊಳಿಸುವಿಕೆ, ಆಂಶಿಕ ಧಕ್ಕೆ ಕಾಮಗಾರಿ, ಕಚ್ಚಾ ರಸ್ತೆ ನಿರ್ಮಾಣಗಳನ್ನು ಚೆನ್ನೈನ ಶ್ರೀಪತಿ ಎಸೋಸಿಯೇಟ್ಸ್ ಗುತ್ತಿಗೆದಾರ ಕಂಪೆನಿ ನಿರ್ವಹಿಸಿದೆ. ಡ್ರೆಜ್ಜಿಂಗ್, ಪೂರ್ಣ ಪ್ರಮಾಣದಲ್ಲಿ ನೀಲ ನಕಾಶೆಯಲ್ಲಿನ ಸಮಗ್ರ ಕಟ್ಟಡಗಳ ಕಾಮಗಾರಿ, ರಸ್ತೆ, ಆವರಣಗೋಡೆಗಳು ಇನ್ನೂ ಪೂರ್ಣಗೊಳ್ಳಬೇಕಿದೆ. ಅವರಿಗೂ ಸರಕಾರದಿಂದ ಸಿಗಬೇಕಾದ ಪಾವತಿ ಮೊತ್ತ ಈಗಾಗಲೇ 28 ಕೋಟಿಗಳಷ್ಟು ಬಾಕಿ ಇದೆ. ಸುಮಾರು 60-70ಶೇಕಡಾ ಪೂರ್ಣಗೊಂಡಿರುವುದಾಗಿ ಮೀನುಗಾರಿಕಾ ಇಲಾಖಾ ಅಧಿಕಾರಿಗಳು ಹೇಳುತ್ತಾರೆ.
ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿಲ್ಲ
ಈ ಯೋಜನೆಗಾಗಿ ಸುಮಾರು 12.20ಎಕ್ರೆ ಖಾಸಗಿ ಭೂಮಿಗಳ ಸ್ವಾಧೀನಕ್ಕಾಗಿ ಮೀಸಲಿಟ್ಟ 21 ಕೋಟಿ ರೂ. ಸದ್ಯ ಕುಂದಾಪುರದ ಸಹಾಯಕ ಕಮಿಶನರ್ ಕಚೇರಿಯಲ್ಲಿ ಜಮಾ ಆಗಿದೆ. ಈಗ ಯೋಜನಾ ವೆಚ್ಚ ಹೆಚ್ಚಾಗಿದ್ದು, ಇನ್ನೂ 21 ಕೋಟಿ ರೂ. ಮೊತ್ತಕ್ಕಾಗಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆಯನ್ನು ರವಾನಿಸಲಾಗಿದೆ. ಇದು ಬಿಡುಗಡೆಗೊಂಡ ಬಳಿಕಷ್ಟೇ ಭೂಮಿ ಕಳೆದುಕೊಳ್ಳುವವರಿಗೆ ಪರಿಹಾರಧನದ ಹಂಚಿಕೆಯಾಗಬೇಕು. ಆ ಬಳಿಕವೇ 2025ರಲ್ಲಿ ಹೆಜಮಾಡಿ ಮೀನುಗಾರಿಕಾ ಬಂದರು ಪೂರ್ಣಗೊಳ್ಳಬಹುದು ಎನ್ನುತ್ತಾರೆ ಮೀನುಗಾರಿಕಾ ಹಾಗೂ ಬಂದರು ಇಲಾಖಾ ಜಂಟಿ ನಿರ್ದೇಶಕ ವಿವೇಕ್ ಆರ್. ತಿಳಿಸಿದ್ದಾರೆ.
ಕಾಮಗಾರಿ ಪೂರ್ಣಗೊಳಿಸಿ: ಶಾಸಕ ಗುರ್ಮೆ ಮನವಿ
ಬಂದರು ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಹೆಜಮಾಡಿ ಮತ್ತು ಸುತ್ತಮುತ್ತಲಿನ ಮೀನುಗಾರರಿಗೆ ತೊಂದರೆ ಆಗುತ್ತಿದೆ. ಹೀಗಾಗಿ ತಕ್ಷಣ ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡಿ ಹೆಜಮಾಡಿ ಬಂದರಿನ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಬೇಕು ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಮೀನುಗಾರಿಕಾ ಇಲಾಖಾ ಮುಖ್ಯ ಕಾರ್ಯದರ್ಶಿ ಅಜಯ್ ನಾಗಭೂಷಣ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಮೀನುಗಾರಿಕಾ ಕಾರ್ಯದರ್ಶಿ ಅವರು ಕೂಡಲೇ ಕಾಮಗಾರಿಯನ್ನು ಕೈಗೊಳ್ಳುವ ಬಗ್ಗೆ ಭರವಸೆಯನ್ನೂ ಶಾಸಕರಿಗೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.