Stock Market: ಟ್ರಂಪ್ ಗೆಲುವಿನ ಎಫೆಕ್ಟ್-ಬಾಂಬೆ ಷೇರುಪೇಟೆ ಸೂಚ್ಯಂಕ 1 ಸಾವಿರ ಅಂಕ ಏರಿಕೆ!
ಭಾರತದ ಷೇರುಪೇಟೆ ಲಾಭಗಳಿಸುವಂತೆ ಮಾಡಿದೆ.
Team Udayavani, Nov 6, 2024, 3:38 PM IST
ಮುಂಬೈ: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷಗಾದಿಗೆ ಟ್ರಂಪ್ ಗೋ ಅಥವಾ ಕಮಲಾ ಹ್ಯಾರಿಸ್ ಗೋ ಎಂಬ ಜಿದ್ದಾಜಿದ್ದಿನ ನಡುವೆ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಭರ್ಜರಿ ಜಯಭೇರಿ ಬಾರಿಸುವ ಮೂಲಕ 2ನೇ ಬಾರಿ ಅಧ್ಯಕ್ಷ ಪಟ್ಟಕ್ಕೆ ಏರಲಿದ್ದಾರೆ ಎಂಬ ಸುದ್ದಿ ಬುಧವಾರ (ನ.06) ಮಧ್ಯಾಹ್ನ ಹೊರಬೀಳುತ್ತಿದ್ದಂತೆಯೇ ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಬರೋಬ್ಬರಿ 1,000 ಅಂಕಗಳ ಏರಿಕೆಯೊಂದಿಗೆ ವಹಿವಾಟು ನಡೆದಿದೆ.
ಅಧ್ಯಕ್ಷ ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದಾಗಿ ಟ್ರಂಪ್ ಘೋಷಿಸುತ್ತಿದ್ದಂತೆಯೇ ದಲಾಲ್ ಸ್ಟ್ರೀಟ್ ವಹಿವಾಟಿನ ಮೇಲೆ ಭರ್ಜರಿ ಪರಿಣಾಮ ಬೀರಿದೆ. ಷೇರುಪೇಟೆ ಸಂವೇದಿ ಸೂಚ್ಯಂಕ 1,055.31 ಅಂಕಗಳ ಏರಿಕೆಯೊಂದಿಗೆ 80,531.94 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ.
ಅದೇ ರೀತಿ ಎನ್ ಎಸ್ ಇ ನಿಫ್ಟಿ 311.95 ಅಂಕಗಳಲ್ಲಿ ಏರಿಕೆಯೊಂದಿಗೆ 24,525.25 ಅಂಕಗಳ ಗಡಿ ತಲುಪಿದೆ. ಅಮೆರಿಕ ಚುನಾವಣ ಫಲಿತಾಂಶದ ಪೂರ್ಣ ಚಿತ್ರಣ ಹೊರಬೀಳುತ್ತಿದ್ದಂತೆಯೇ ಷೇರುಪೇಟೆ ವಹಿವಾಟಿನಲ್ಲಿ ಭರ್ಜರಿ ಚೇತರಿಕೆ ಕಂಡುಬಂದಿದೆ.
ಸೂಚ್ಯಂಕ, ನಿಫ್ಟಿ ಏರಿಕೆಯಿಂದ ಐಟಿ, ಎಚ್ ಸಿಎಲ್ ಟೆಕ್, ಇನ್ಫೋಸಿಸ್, ಟೆಕ್ ಮಹೀಂದ್ರ ಮತ್ತು ವಿಪ್ರೋ ಷೇರುಗಳು ಲಾಭಗಳಿಸಿದೆ. ಟ್ರಂಪ್ ಗೆಲುವಿನ ಸುದ್ದಿ ಅಮೆರಿಕದ ಈಕ್ವಿಟಿ ಮಾರುಕಟ್ಟೆ ಚೇತರಿಕೆ ಕಂಡಿದ್ದು, ಭಾರತದ ಷೇರುಪೇಟೆ ಲಾಭಗಳಿಸುವಂತೆ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kaup: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನಾ ಸಭೆ
Haveri: ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಬಂಧನ
Moo Deng: ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆಲುವು… ನೀರಾನೆ ಮರಿಯ ಭವಿಷ್ಯ ನಿಜವಾಯ್ತು
Mangaluru: ಡಿ.28; ಮಂಗಳೂರು ಕಂಬಳ; ಪೂರ್ವಭಾವಿ ಸಭೆ
Tamil Nadu: ನಮಗೆ ಯಾರೇ ಎದುರಾಳಿಯಾದ್ರೂ 2026ರಲ್ಲಿ ಗೆಲ್ಲೋದು ನಾವೇ: ಡಿಸಿಎಂ ಉದಯನಿಧಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.