Mangaluru: ರಾಷ್ಟ್ರೀಯ ಟಿ.ಬಿ. ನಿರ್ಮೂಲನ ಕಾರ್ಯಕ್ರಮ: ಎಂಆರ್‌ಪಿಎಲ್‌ನಿಂದ 1 ಕೋ.ರೂ.ದೇಣಿಗೆ
Team Udayavani, Nov 6, 2024, 7:16 PM IST
ಮಂಗಳೂರು: ದೇಶವನ್ನು 2025ರ ವೇಳೆಗೆ ಕ್ಷಯರೋಗ ಮುಕ್ತಗೊಳಿಸುವ ಕಾರ್ಯಕ್ರಮದ ಭಾಗವಾಗಿ ಎಂಆರ್‌ಪಿಎಲ್ ವತಿಯಿಂದ ರಾಷ್ಟ್ರೀಯ ಟಿ.ಬಿ. ನಿರ್ಮೂಲನ ಕಾರ್ಯಕ್ರಮಕ್ಕೆ ಸಿಬಿ- ನ್ಯಾಟ್ (ಕ್ಯಾಟ್ರಡ್ಜ್ ಬೇಸ್ಡ್ ನ್ಯೂಕ್ಲಿಕ್ ಆ್ಯಸಿಡ್ ಆ್ಯಂಪ್ಲಿಫಿಕೇಶನ್ ಟೆಸ್ಟ್) ಯಂತ್ರಗಳನ್ನು ಖರೀದಿಗೆ 1 ಕೋಟಿ ರೂ. ಮೊತ್ತದ ದೇಣಿಗೆ ನೀಡಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬೇಡಿಕೆ ಮೇರೆಗೆ ಈ ದೇಣಿಗೆ ನೀಡಿದ್ದು, ಇದರಿಂದ ಎರಡೂ ಜಿಲ್ಲೆಗಳು ತಲಾ ಎರಡು ಯಂತ್ರಗಳನ್ನು ಹೊಂದಲು ಸಾಧ್ಯವಾಗಲಿದೆ. ಇದು ಟಿ.ಬಿ. ಪತ್ತೆ ಹಚ್ಚುವಲ್ಲಿ ಮತ್ತು ಚಿಕಿತ್ಸೆ ನೀಡುವಲ್ಲಿ ಸ್ಥಳೀಯ ಆರೋಗ್ಯ ಇಲಾಖೆಗೆ ನೆರವಾಗಲಿದ್ದು, ಜತೆಗೆ ಮೂಲ ಸೌಕರ್ಯವನ್ನೂ ಹೆಚ್ಚಿಸಲಿದೆ.
ಎಂಆರ್‌ಪಿಎಲ್‌ನ ಸಿಎಸ್‌ಆರ್ ಯೋಜನೆಯ ಆರೋಗ್ಯ ಸುರಕ್ಷಾ ಕಾರ್ಯಕ್ರಮದಡಿ ದೇಣಿಗೆ ನೀಡಲಾಗಿದೆ.
ಎಂಆರ್‌ಪಿಎಲ್‌ನ ಮಹಾ ಪ್ರಬಂಧಕ (ಸಿಎಸ್‌ಆರ್) ಬಿ.ಪ್ರಶಾಂತ್ ಬಾಳಿಗ ಅವರು ಈ ಕುರಿತು ಪತ್ರವನ್ನು ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎಚ್.ಆರ್. ತಿಮ್ಮಯ್ಯ ಅವರಿಗೆ ಹಸ್ತಾಂತರಿಸಿದರು. ಎಂಆರ್‌ಪಿಎಲ್ ಅಧಿಕಾರಿಗಳಾದ ಡಾ| ಝಾಹಿದ್ ಅಲಿ ಖಾನ್, ಡಾ| ಅರವಿಂದನ್ ಮತ್ತು ಸ್ಟೀವನ್ ಪಿಂಟೋ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.