ಕಂಬಳ ಋತು ಆರಂಭಕ್ಕೆ ದಿನಗಣನೆ: ಪಿಲಿಕುಳದಿಂದ ಚಾಲನೆ

ಈ ಬಾರಿ 25 ಕಂಬಳ ನಿಗದಿ - ನ. 9ಕ್ಕೆ ಆರಂಭವಾಗಿ ಎಪ್ರಿಲ್‌ 19ಕ್ಕೆ ಮುಕ್ತಾಯ

Team Udayavani, Nov 7, 2024, 7:25 AM IST

ಕಂಬಳ ಋತು ಆರಂಭಕ್ಕೆ ದಿನಗಣನೆ: ಪಿಲಿಕುಳದಿಂದ ಚಾಲನೆ

ಮಂಗಳೂರು: ಕರಾವಳಿಯ ಪರಂಪರೆ ಹಾಗೂ ಪ್ರಮುಖ ಜಾನಪದ ಕ್ರೀಡೆಯಾಗಿರುವ “ಕಂಬಳ’ ಋತು ಆರಂಭಕ್ಕೆ ಇನ್ನು ದಿನಗಣನೆ.

ನ.9ರಂದು ಪಣಪಿಲ ಕಂಬಳ ನಡೆಯಲಿದ್ದು, ಇದರಲ್ಲಿ ಸಬ್‌ ಜೂನಿಯರ್‌ ಹಾಗೂ ಜೂನಿಯರ್‌ ಕೋಣಗಳು ಮಾತ್ರ ಭಾಗವಹಿಸಲಿವೆ. ಆದರೆ ನ.17ರ ಪಿಲಿಕುಳ ಕಂಬಳದಲ್ಲಿ ಸೀನಿಯರ್‌ ಕೋಣಗಳು ಭಾಗವಹಿಸುವ ಕಾರಣದಿಂದ ಕಂಬಳದ ಋತು ಆ ದಿನದಿಂದ ಆರಂಭ ಎನ್ನಲಾಗುತ್ತಿದೆ.

ಹಲವಾರು ಅಡೆತಡೆಯ ಮಧ್ಯೆಯೂ ಈ ಬಾರಿ “ಸರಕಾರಿ’ ಪ್ರಾಯೋಜಕತ್ವದಲ್ಲಿ ಪಿಲಿಕುಳ ಕಂಬಳ 10 ವರ್ಷಗಳ ಬಳಿಕ ನಡೆಯುವುದು ವಿಶೇಷ.

ಬೆಂಗಳೂರು ಕಂಬಳದ ಬಗ್ಗೆ ಅನಿಶ್ಚಿತತೆ ಇದ್ದರೂ, ಇದೇ ಮೊದಲ ಬಾರಿಗೆ ಶಿವಮೊಗ್ಗ ಕಂಬಳ ಕೂಡ ಈ ಬಾರಿ ಆಯೋಜನೆಯಾಗಿರುವುದು ಮತ್ತೊಂದು ವಿಶೇಷ.

ಜಿಲ್ಲಾ ಕಂಬಳ ಸಮಿತಿ ನೇತೃತ್ವದಲ್ಲಿ ಈ ಬಾರಿ 25 ಆಧುನಿಕ ಕಂಬಳಗಳು ಆಯೋಜನೆಗೊಂಡಿವೆ. ಉಳಿದಂತೆ ಕುಂದಾಪುರ, ಬೈಂದೂರು, ಬಾರಕೂರು ವ್ಯಾಪ್ತಿಯ ಸುತ್ತಮುತ್ತ ಸುಮಾರು 70ರಿಂದ 120 ಸಾಂಪ್ರದಾಯಿಕ ಕಂಬಳ ಈ ಬಾರಿ ನಡೆಯಲಿದೆ.

ಕಂಬಳಕ್ಕೆ ಸುದೀರ್ಘ‌ ವರ್ಷಗಳ ಇತಿಹಾಸವಿದೆ. ಆರಂಭದಲ್ಲಿ ಕಂಬಳಗಳು ದೇವಾಲಯಗಳ ಆಶ್ರಯದಲ್ಲಿ ನಡೆಯುತ್ತಿದ್ದವು. ಈಗ ಅಂತಹ ಕಂಬಳಗಳನ್ನು “ದೇವರ ಕಂಬಳ’ ಎಂದು ಕರೆಯಲಾಗುತ್ತದೆ. ಬಳಿಕ ಅರಸೊತ್ತಿಗೆಯ ಕಾಲದಲ್ಲಿ ಕಂಬಳಗಳು ಅರಸು ಕಂಬಳಗಳಾದವು. ಮೂಲ್ಕಿ ಅರಸರ ಕಂಬಳ, ಬಂಗಾಡಿ ಅರಸರ ಕಂಬಳ ಎಂದು ಗುರುತಿಸಲ್ಪಟ್ಟವು. ಸ್ವತಂತ್ರ ಭಾರತ ಅಸ್ತಿತ್ವಕ್ಕೆ ಬಂದ ಬಳಿಕ ಶ್ರೀಮಂತ ಕೃಷಿಕರು ನಡೆಸುತ್ತಿದ್ದ ಗುತ್ತುಬಾರಿಕೆಯ ಕಂಬಳಗಳು ಪ್ರಚಲಿತಕ್ಕೆ ಬಂದವು. ಭೂ ಸುಧಾರಣೆ ಕಾಯಿದೆ ಜಾರಿ ಬಳಿಕ ಇವು ಆರ್ಥಿಕ ಕಾರಣದಿಂದಾಗಿ ಮುಂದುವರಿಯಲಿಲ್ಲ. ಮಾಗಣೆ ಕಂಬಳಗಳೂ ಸ್ಥಗಿತಗೊಂಡವು. ಈ ಹಂತದಲ್ಲಿ ಸ್ಥಳೀಯವಾಗಿ ಕಂಬಳಾಸಕ್ತರು ಸೇರಿ ಕಂಬಳ ಸಮಿತಿಗಳನ್ನು ರಚಿಸಿ ಕಂಬಳ ಕೂಟಗಳನ್ನು ಸಂಘಟಿಸಿದರು. ಈ ಹಂತದಲ್ಲಿ ಜಾನಪದ ಕ್ರೀಡೆ ಕಂಬಳ ಸಾರ್ವಜನಿಕ ಕಂಬಳವಾಗಿ ಪರಿವರ್ತನೆಗೊಂಡಿತು.

“ತುಳುನಾಡ ವ್ಯಾಪ್ತಿಯಲ್ಲಿ 25 ಕಂಬಳ ಕೂಟಗಳು’
ಕಂಬಳ ತೀರ್ಪುಗಾರರ ಸಮಿತಿ ಸಂಚಾಲಕ ವಿಜಯ್‌ ಕುಮಾರ್‌ ಕಂಗಿನಮನೆ ಅವರ ಪ್ರಕಾರ “ಪ್ರಸ್ತುತ ದ. ಕ., ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳು ಸೇರಿದ ತುಳುನಾಡ ವ್ಯಾಪ್ತಿಯಲ್ಲಿ 25 ಕಂಬಳ ಕೂಟಗಳಿವೆ. ಇವೆಲ್ಲವೂ ಸಾರ್ವಜನಿಕ ನೆಲೆಯಲ್ಲಿ ನಡೆಸಲ್ಪಡುತ್ತವೆ. ಕಂಬಳ ಕೂಟಗಳ ಹಿಂದೆ ಧಾರ್ಮಿಕ ಭಾವನೆ ಇಂದಿಗೂ ಉಳಿದುಕೊಂಡಿವೆ. ಆದಕಾರಣವೇ ಲಾಭಕ್ಕಾಗಿ ಕಂಬಳ ಕೂಟವನ್ನು ಯಾರೂ ಸಂಘಟಿಸುವುದಿಲ್ಲ. ಜತೆಗೆ ಕಂಬಳದಲ್ಲಿ ಜಾತಿ ಮತ ಭೇದಗಳ ಪರದೆಯೇ ಇಲ್ಲ. ತುಳುನಾಡಿನಲ್ಲಿ 300ಕ್ಕೂ ಅಧಿಕ ಮಂದಿ ಓಟದ ಕೋಣಗಳ ಮಾಲಕರಿದ್ದಾರೆ. 150ಕ್ಕೂ ಅಧಿಕ ಮಂದಿ ಕೋಣಗಳನ್ನು ಓಡಿಸುವವರಿದ್ದಾರೆ. ಕಂಬಳ ಕೂಟದಲ್ಲಿ ಇತರ ಕೆಲಸ ಕಾರ್ಯಗಳನ್ನು ಅಂದರೆ ಕೋಣಗಳನ್ನು ಕರೆಗೆ ಇಳಿಸುವ, ಕೋಣಗಳನ್ನು ಬಿಡಿಸುವ ಕೆಲಸಗಳಲ್ಲಿ ಸಾವಿರಾರು ಮಂದಿ ಇದ್ದಾರೆ. ತುಳುನಾಡಿನಲ್ಲಿ ಲಕ್ಷಾಂತರ ಮಂದಿ ಕಂಬಳ ವೀಕ್ಷಕರಿದ್ದಾರೆ. ವಾರ್ಷಿಕವಾಗಿ ಲಕ್ಷಾಂತರ ರೂ. ಖರ್ಚು ಮಾಡಿ ಓಟದ ಕೋಣಗಳನ್ನು ಸಾಕುವವರಿದ್ದಾರೆ’ ಎನ್ನುತ್ತಾರೆ.

ಈ ಋತುವಿನ (2024-25)ಕಂಬಳದ ದಿನಾಂಕ
ನ.9: ಪಣಪಿಲ
ನ.17: ಪಿಲಿಕುಳ
ನ.23: ಕೊಡಂಗೆ
ನ.30: ಕಕ್ಕೆಪದವು
ಡಿ.7: ಹೊಕ್ಕಾಡಿ
ಡಿ.14: ಬಾರಾಡಿ
ಡಿ.22: ಮೂಲ್ಕಿ
ಡಿ.28: ಮಂಗಳೂರು
ಡಿ.29: ಬಳ್ಳಮಂಜ
ಜ.4: ಮಿಯ್ಯಾರು
ಜ.11:ನರಿಂಗಾನ
ಜ.18: ಅಡ್ವೆ
ಜ.25: ಮೂಡುಬಿದಿರೆ
ಫೆ.1: ಐಕಳ
ಫೆ.8: ಜಪ್ಪು
ಫೆ.15: ತಿರುವೈಲುಗುತ್ತು
ಫೆ.22: ಕಟಪಾಡಿ
ಮಾ.1: ಪುತ್ತೂರು
ಮಾ.8: ಬಂಟ್ವಾಳ
ಮಾ.15: ಬಂಗಾಡಿ
ಮಾ.22: ಉಪ್ಪಿನಂಗಡಿ
ಮಾ.29: ವೇಣೂರು
ಎ.5: ಬಳ್ಕುಂಜೆ
ಎ.12: ಗುರುಪುರ
ಎ.19: ಶಿವಮೊಗ್ಗ

“ಕಂಬಳ ತುಳುನಾಡಿನ ಉಸಿರು’
ಕರಾವಳಿಯ ಶ್ರದ್ಧಾ ಭಕ್ತಿಯ ಕಂಬಳದ ಋತು ಆರಂಭವಾಗುತ್ತಿದೆ. ಈ ವರ್ಷ 25 ಕಂಬಳ ನಡೆಯಲಿದೆ. ಕೋಣಗಳ ಯಜಮಾನರು, ಓಟಗಾರರು, ವ್ಯವಸ್ಥಾಪಕರು ಎಲ್ಲ ರೀತಿಯ ಸಿದ್ಧತೆ ನಡೆಸುತ್ತಿದ್ದಾರೆ. ತುಳುನಾಡಿನ ಮಣ್ಣಿನ ಗೌರವ ಪಡೆದ ಹಾಗೂ ದೇವರ ಅನುಗ್ರಹದ ಕಂಬಳ ಕರೆಯಲ್ಲಿ ಕೋಣಗಳ ಸೊಗಸಾದ ಓಟ ಕಾಣುವ ತವಕ ಎಲ್ಲೆಲ್ಲೂ ಶುರುವಾಗಿದೆ. ಕಂಬಳ ಕೇವಲ ಕ್ರೀಡೆಯಲ್ಲ. ಇದು ತುಳುನಾಡಿನ ಉಸಿರು.
-ಐಕಳಬಾಳ ದೇವೀಪ್ರಸಾದ್‌ ಶೆಟ್ಟಿ, ಅಧ್ಯಕ್ಷರು, ಜಿಲ್ಲಾ ಕಂಬಳ ಸಮಿತಿ

ಕಳೆದ ಋತುವಿನ ಕಂಬಳ
ಕಂಬಳದ 2023-24ರ ಋತು 2023ರ ನ.18ಕ್ಕೆ ಕಕ್ಕೆಪದವು “ಸತ್ಯ ಧರ್ಮ’ ಕಂಬಳದಿಂದ ಆರಂಭವಾಗಿ ಎ.12ರ ಗುರುಪುರದ “ಮೂಳೂರು – ಅಡ್ಡೂರು’ ಕಂಬಳದವರೆಗೆ ಒಟ್ಟು 24 ಕಂಬಳ ನಡೆದಿತ್ತು. ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆದ ರಾಜ-ಮಹಾರಾಜ ಕಂಬಳ ಸಾಕಷ್ಟು ಜನಮೆಚ್ಚುಗೆ ಪಡೆದಿತ್ತು. ಮೂಡುಬಿದಿರೆ ಕಂಬಳದಲ್ಲಿ ಗರಿಷ್ಠ 278 ಜತೆ ಕೋಣಗಳು ಭಾಗವಹಿಸಿದ್ದುದು ದಾಖಲೆಯಾಗಿತ್ತು. ಮಿಯ್ಯಾರು ಕಂಬಳದಲ್ಲಿ 230, ಬಾರಾಡಿ ಬೀಡು 208, ನರಿಂಗಾನ ಕಂಬಳದಲ್ಲಿ 204 ಜತೆ ಕೋಣಗಳು ಭಾಗವಹಿಸಿವೆ.

ಹಗ್ಗ ಹಿರಿಯ ವಿಭಾಗದಲ್ಲಿ ಕೋಣಗಳ ಮಾಲಕರಾದ ನಂದಳಿಕೆ ಶ್ರೀಕಾಂತ್‌ ಭಟ್‌, ಕಿರಿಯ ವಿಭಾಗದಲ್ಲಿ ಸುರತ್ಕಲ್‌ ಪಾಂಚಜನ್ಯ ಯೋಗೀಶ್‌ ಪೂಜಾರಿ, ನೇಗಿಲು ಹಿರಿಯ ವಿಭಾಗದಲ್ಲಿ ಬೋಳದ ಗುತ್ತು ಸತೀಶ್‌ ಶೆಟ್ಟಿ, ಕಿರಿಯ ವಿಭಾಗದಲ್ಲಿ ಮುನಿಯಾಲು ಉದಯ್‌ ಕುಮಾರ್‌ ಶೆಟ್ಟಿ, ಕನೆಹಲಗೆ, ಅಡ್ಡಹಲಗೆ ವಿಭಾಗದಲ್ಲಿ ಬೋಳಾರ ತ್ರಿಶಾಲ್‌ ಕೆ.ಪೂಜಾರಿ ಚಾಂಪಿಯನ್‌.

ಕಳೆದ ಋತುವಿನ ಮಿಂಚಿನ ಓಟಗಾರರು
*ಹಗ್ಗ ಹಿರಿಯ ವಿಭಾಗ: ಬಂಬ್ರಾಣಬೈಲು ವಂದಿತ್‌ ಶೆಟ್ಟಿ
*ಹಗ್ಗ ಕಿರಿಯ ವಿಭಾಗ: ಭಟ್ಕಳ ಶಂಕರ ನಾಯ್ಕ
*ನೇಗಿಲು ಹಿರಿಯ ವಿಭಾಗ: ಪೆಂರ್ಗಾಲು ಕೃತಿಕ್‌ ಗೌಡ
*ನೇಗಿಲು ಕಿರಿಯ ವಿಭಾಗ: ಮಾಸ್ತಿಕಟ್ಟೆ ಸ್ವರೂಪ್‌
*ಕನೆಹಲಗೆ ವಿಭಾಗ: ಬೈಂದೂರು ಮಹೇಶ್‌ ಪೂಜಾರಿ ಹಾಗೂ ತೆಕ್ಕಟ್ಟೆ ಸುಧೀರ್‌ ದೇವಾಡಿಗ
*ಅಡ್ಡ ಹಲಗೆ ವಿಭಾಗ: ಭಟ್ಕಳ ಹರೀಶ್‌

ಟಾಪ್ ನ್ಯೂಸ್

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ

Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ

Anwar-Manippady

Mangaluru: ವಕ್ಫ್‌ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ

Pocso

Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ

1-doct

Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ : ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !

Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.