Sydney Thunder: ಡೇವಿಡ್ ವಾರ್ನರ್‌ಗೆ 6 ವರ್ಷಗಳ ಬಳಿಕ ನಾಯಕತ್ವ!
Team Udayavani, Nov 7, 2024, 9:07 AM IST
ಸಿಡ್ನಿ: ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್ ವಾರ್ನರ್ ಬಿಗ್ ಬಾಶ್ ಲೀಗ್‌ನಲ್ಲಿ ಮರಳಿ ಸಿಡ್ನಿ ಥಂಡರ್ಸ್ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ.
ಇದರೊಂದಿಗೆ ಅವರಿಗೆ 6 ವರ್ಷಗಳ ಬಳಿಕ ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ತಂಡವೊಂದರ ನಾಯಕತ್ವ ಲಭಿಸಿದಂತಾಗಿದೆ. 2018ರ ಕೇಪ್‌ಟೌನ್ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪ ಮಾಡಿದ್ದ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಡೇವಿಡ್ ವಾರ್ನರ್‌ಗೆ, ಕ್ರಿಕೆಟ್ ಆಸ್ಟ್ರೇಲಿಯಾ ಯಾವುದೇ ತಂಡಗಳ ನಾಯಕತ್ವ ವಹಿಸದಂತೆ ಆಜೀವ ನಿಷೇಧ ಹೇರಿತ್ತು. ಜೊತೆಗೆ ಕ್ರಿಕೆಟ್ ಆಡದಂತೆ ಒಂದು ವರ್ಷ ನಿಷೇಧಿಸಲಾಗಿತ್ತು.
ಇತ್ತೀಚೆಗಷ್ಟೇ ಕಳೆದ ತಿಂಗಳು ಕ್ರಿಕೆಟ್ ಆಸ್ಟ್ರೇಲಿಯಾ ವಾರ್ನರ್ ನಾಯಕತ್ವದ ಮೇಲಿನ ಆಜೀವ ನಿಷೇಧ ಶಿಕ್ಷೆಯನ್ನು ತೆರವುಗೊಳಿಸಿತ್ತು. ಎಲ್ಲ ಮಾದರಿಯ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಿದಾಯ ಹೇಳುವ ಮುನ್ನ ಅವರಿಗೆ ನಾಯಕತ್ವದ ಅವಕಾಶವೊಂದನ್ನು ನೀಡುವುದು ಕ್ರಿಕೆಟ್ ಆಸ್ಟ್ರೇಲಿಯಾದ ಉದ್ದೇಶ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dharwad: ವಾಗ್ವಾದ ನಡೆದು ಎರಡು ಸುತ್ತು ಫೈರಿಂಗ್: ನಾಲ್ವರು ವಶಕ್ಕೆ
BBK11: ನಿಮ್ಮ ಸಹವಾಸನೇ ಬೇಡ.. ಎಲ್ಲದಕ್ಕೂ ಫುಲ್ ಸ್ಟಾಪ್ ಎಂದ ಮೋಕ್ಷಿತಾ; ಒಂಟಿಯಾದ ಮಂಜು
Waqf Land Issue: ಯಾವುದೇ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ: ಡಿಕೆ ಶಿವಕುಮಾರ್
Jammu-Kashmir: ಕುಪ್ವಾರದಲ್ಲಿ ಸೇನಾ ಕಾರ್ಯಾಚರಣೆ… ಉಗ್ರನ ಹ*ತ್ಯೆ, ಶಸ್ತ್ರಾಸ್ತ್ರ ವಶ
Bidar; ಕಲಾ ಬಿದರಿ ಸಂಗಮ-2024ಕ್ಕೆ ಚಾಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.