Theft: ವಿದ್ಯಾಗಣಪತಿ, ಸುಬ್ರಹ್ಮಣ್ಯ ದೇಗುಲಗಳ ಹುಂಡಿ ಹಣ, 5 ಚಿನ್ನದ ತಾಳಿ ಬೊಟ್ಟು ಕಳವು
Team Udayavani, Nov 7, 2024, 10:51 AM IST
ಕೆ.ಆರ್.ಪುರ: ಶ್ರೀವಿದ್ಯಾಗಣಪತಿ, ವರಸಿದ್ಧಿ ವಿನಾಯಕ ಸುಬ್ರಹ್ಮಣ್ಯ ದೇವಸ್ಥಾನದ ಹುಂಡಿ ಹೊಡೆದು ನಗದು ದೋಚಿ ಪರಾರಿಯಾಗಿರುವ 2 ಪ್ರತ್ಯೇಕ ಘಟನೆ ರಾಮಮೂರ್ತಿ ನಗರ ಪೊಲೀಸ್ ವ್ಯಾಪ್ತಿಯಲ್ಲಿ ನಡೆದಿದೆ.
ಕೆಂಪುಬಣ್ಣದ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ವಿಜಿನಾಪುರದ ಎಫ್ಸಿಐ ಗೋದಾಮಿನ ಮುಖ್ಯ ರಸ್ತೆಯಲ್ಲಿರುವ ವಿದ್ಯಾಗಣಪತಿ ದೇವಸ್ಥಾನದ ಬಾಗಿಲು ಮುರಿದು ಮಂಗಳವಾರ ತಡರಾತ್ರಿ 1:15ಕ್ಕೆ ಒಳ ನುಗ್ಗಿದ್ದಾರೆ. ಹುಂಡಿ ತೆಗೆದುಕೊಂಡು ಹೋಗಿ, ಅದರಲ್ಲಿದ್ದ ಹಣ ಕಳವು ಮಾಡಿ, ಖಾಲಿ ಹುಂಡಿ ಪಕ್ಕದ ಗ್ಯಾಸ್ ಗೋಡನ್ ಬಳಿ ಎಸೆದಿದ್ದಾರೆ. ಹುಂಡಿಯಲ್ಲಿ 1.5 ಲಕ್ಷ ರೂ. ಸಂಗ್ರಹವಾಗಿತ್ತು ಎನ್ನಲಾಗಿದೆ.
ಅದೇ ವಾಹನದಲ್ಲಿ ಮತ್ತೆ 1.57ಕ್ಕೆ ಬಂದ ದುಷ್ಕರ್ಮಿಗಳು, ಪಕ್ಕದ ರಸ್ತೆಯ ವಿನಾಯಕ ಸುಬ್ರಹ್ಮಣ್ಯ ರಸ್ತೆಯಲ್ಲಿರುವ ದೇವಸ್ಥಾನದ ಡೋರ್, ಹುಂಡಿ ಒಡೆದು ನಗದು, ಐದು ಚಿನ್ನದ ತಾಳಿ ಬೊಟ್ಟು ಕಳವು ಮಾಡಿ ಪರಾರಿಯಾಗಿದ್ದಾರೆ. ಮೂರ್ನಾಲ್ಕು ದಿನಗಳ ಹಿಂದಷ್ಟೇ ಹುಂಡಿಯಲ್ಲಿದ್ದ ಹಣ ತೆಗೆಯಲಾಗಿತ್ತು. ಭಾನುವಾರ ಮತ್ತು ಮಂಗಳವಾರ ಹೆಚ್ಚು ಭಕ್ತರು ದೇಗುಲಕ್ಕೆ ಬಂದಿದ್ದು, 30 ಸಾವಿರ ರೂ. ಹಣ ಸಂಗ್ರಹವಾಗಿರಬಹುದು ಎಂದು ದೇಗುಲದ ಅರ್ಚಕರು ಹೇಳಿದ್ದಾರೆ.
ಕಳವು ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.