Waqf issue: ಬಿಜೆಪಿ ಅಧಿಕಾರದಲ್ಲಿದ್ದಾಗ ಕತ್ತೆ ಕಾಯಿತಿದ್ದರಾ?: ಪ್ರಿಯಾಂಕ್ ಖರ್ಗೆ
Team Udayavani, Nov 7, 2024, 2:54 PM IST
ಕಲಬುರಗಿ: ವಕ್ಪ್ ತೆಗಿಯಬೇಕೆಂದು ಬಿಜೆಪಿಯವರು ಹೇಳ್ತಾರಲ್ಲ, ಒಂದೂವರೆ ವರ್ಷದ ಹಿಂದೆ ಬಿಜೆಪಿ ಸರ್ಕಾರವೇ ಇತ್ತು. ಆಗ ಇವರು ಕತ್ತೆ ಕಾಯುತ್ತಿದ್ದರಾ? ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೇ ಇದೆಲ್ಲಾ ನೆನಪಾಗುತ್ತಾ ಎಂದು ಸಚಿವ ಪ್ರಿಯಾಂಕ್ ಖರ್ಗೆ ಗುಡುಗಿದರು.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಗುರುವಾರ (ನ.07) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಚೆಯಿಂದಲೂ ರೈತರಿಗೆ ನೋಟಿಸ್ ಬಂದಿವೆ. ಎಲೆಕ್ಷನ್ ಬಂದಾಗ ಇದನ್ನ ದೊಡ್ಡ ಇಶ್ಯು ಮಾಡಿದ್ದಾರೆ. ನಾಚಿಕೆಯಾಗಲ್ವಾ ನಿಮಗೆ? ವಕ್ಪ್ ಆಸ್ತಿಯನ್ನು ಜಿಐಎಸ್ ಮ್ಯಾಪ್ ಮಾಡಿಸುತ್ತಿರುವುದು ಯಾರು? ಬಿಜೆಪಿಯವರೇ ಮಾಡುತ್ತಿರುವುದು. ಇದಕ್ಕೆ ಶೋಭಾ ಕರಂದ್ಲಾಜೆ ಎನು ಹೇಳುತ್ತಾರೆ. ಅವಾಗ ಯಾಕೆ ಶೋಭಾ ಅವರು ಪ್ರತಿಭಟನೆ ಮಾಡಿಲ್ಲ ಎಂದು ಪ್ರಶ್ನಿಸಿದರು.
ಜಿಐಎಸ್ ಮ್ಯಾಪಿಂಗ್ ಗೆ 330 ಕೋಟಿ ಖರ್ಚು ಮಾಡಿದ್ದು ಬಿಜೆಪಿಯ ಕೇಂದ್ರ ಸರ್ಕಾರ. ಆವಾಗ ಇವರಿಗೆ ಇದರ ಅರಿವಿತ್ತಲ್ಲ. ಈಗ್ಯಾಕೆ ಇಂತಹ ಡ್ರಾಮಾಗಳನ್ನು ಮಾಡಿ ರೈತರನ್ನು, ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.
ವಕ್ಪ್ ಆಸ್ತಿ ಸಂರಕ್ಷಣೆಗೆ ಹಣ ಖರ್ಚು ಮಾಡಿದ್ದು ಬಿಜೆಪಿಯವರು. ಕೇಂದ್ರದಲ್ಲಿ ಬಿಜೆಪಿ ಸರ್ಕಾರಕ್ಕೆ 11 ವರ್ಷವಾಯಿತು, ಇನ್ನೂ ಯಾಕ್ ಬ್ಯಾನ್ ಮಾಡಿಲ್ಲ? ಕಾಂಗ್ರೆಸ್ ಆಧಿಕಾರದಲ್ಲಿದ್ದ ರಾಜ್ಯಗಳಲ್ಲಿ ಮಾತ್ರವೇ ನಿಮಗೆ ವಕ್ಫ್ ರದ್ದುವಿಚಾರ ಹೊಳೆಯುತ್ತದೇನು ಎಂದು ಕಟುಕಿದರು.
ವಕ್ಪ್ ವಿಚಾರವಾಗಿ ರಾಜ್ಯ ಜೆಪಿಸಿ ಸಮಿತಿ ಭೇಟಿಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, ಜಂಟಿ ಪಾರ್ಲಿಮೆಂಟ್ ಸಮಿತಿ ಎಂದರೇನು? ಕಮಿಟಿಯ ಎಲ್ಲಾ ಸದಸ್ಯರು ಬರಬೇಕಲ್ವಾ? ಬರೀ ಅಧ್ಯಕ್ಷರು ಮಾತ್ರ ಬಂದಿದ್ದಾರೆ. ಅವರ ಜೊತೆ ಯಾರಿದ್ದಾರೆ ಬಿಜೆಪಿಯ ಮಾಜಿ ಎಂಪಿ ಇದ್ದಾರೆ. ಅವರಿಗೂ ಸಮಿತಿಗೂ ಏನು ಸಂಬಂಧ? ನಿಮ್ಮ ನಾಟಕ ಅರ್ಥವಾಗುವುದಿಲ್ಲವೆ? ಉಪ ಚುನಾವಣೆಗಳಲ್ಲಿ ನೀವು ಹೀಗೆ ಅರ್ಥಹೀನವಾಗಿ ನಡೆದುಕೊಂಡರೆ ನಿಮ್ಮ ಸಿದ್ಧಾಂತಕ್ಕೇನು ಅರ್ಥ ಎಂದು ವಾಗ್ದಾಳಿ ನಡೆಸಿದರು.
ಲೋಕಾಯುಕ್ತ ತನಿಖೆ; ಬಿಜೆಪಿ ವ್ಯಂಗ್ಯಕ್ಕೆ ತಿರುಗೇಟು
ಲೋಕಾಯುಕ್ತ ಒಂದು ಸಂವಿಧಾನತ್ಮಕ ಸಂಸ್ಥೆ. ಸಿಎಂ ಉತ್ತರ ನೀಡಿದ್ದಾರೆ. ತನಿಖೆ ಸರಿಯಾಗಿ ನಡೆಯುತ್ತಿದೆ. ಬಿಜೆಪಿಯವರು ಸಿಬಿಐ ಎನ್ನುತ್ತಾರಲ್ಲ, ಹಿಂದೆ ನಾವು ಅಧಿಕಾರದಲ್ಲಿ ಸಿಬಿಐಗೆ ಎಷ್ಟು ಕೇಸ್ ಕೊಟ್ಟಿದ್ದೆವು ಅವು ಏನ್ ಆಯಿತು. ಸುಮ್ನೆ ಸಿಬಿಐ ಸಿಬಿಐ ಎಂದು ಬಾಯಿ ಬಡಕೊಂಡರೆ ಹೇಗೆ ಎಂದು ಪ್ರಿಯಾಂಕ್ ತಿರುಗೇಟು ನೀಡಿದರು.
ಅಬಕಾರಿ ಇಲಾಖೆಯಲ್ಲಿ ಬಹ್ಮಾಂಡ ಭ್ರಷ್ಟಚಾರ ವಿಚಾರವಾಗಿ ಮಾತನಾಡಿದ ಅವರು, ಇದಕ್ಕೆ ಅಬಕಾರಿ ಸಚಿವರೇ ಉತ್ತರ ನೀಡಿದ್ದಾರೆ. ಈ ಪ್ರಕರಣದಲ್ಲಿ ನಾವು ಜಾರಿಕೊಂಡು ಹೊಗಲ್ಲ ಏನಾದರೂ ದಾಖಲೆ ಇದ್ದರೆ ಕೊಡಲಿ. ಸ್ವತಃ ಸಚಿವರೇ ದಾಖಲೆ ಕೊಡಿ ಎಂದಿದ್ದಾರೆ. ಅದು ಬಿಟ್ಟು ಪ್ರತಿಭಟನೆ ಮಾಡುತ್ತೇನೆಂದರೆ ಮಾಡಲಿ. ಪ್ರಜಾಪ್ರಭುತ್ವದಲ್ಲಿ ಎಲ್ಲದಕ್ಕೂ ಅವಕಾಶವಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.