Mullikatte: ಟ್ರಕ್ ಬೇ, ವಿಶ್ರಾಂತಿ ಕೊಠಡಿ ಆರಂಭಕ್ಕೆ ಗ್ರಹಣ
ಪೂರ್ಣಗೊಂಡು ಕೆಲ ವರ್ಷಗಳೇ ಕಳೆದರೂ ತೆರೆಯಲಿಲ್ಲ; ಮರವಂತೆ ಬೀಚ್ ಬಳಿ ಲಾರಿಗಳ ನಿಲುಗಡೆ; ಪ್ರವಾಸಿಗರಿಗೆ ಅಡ್ಡಿ
Team Udayavani, Nov 7, 2024, 2:47 PM IST
ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರ ಮುಳ್ಳಿಕಟ್ಟೆಯಲ್ಲಿ ಘನ ವಾಹನ ಸವಾರರು, ಸರಕು ಸಾಗಾಟದ ಲಾರಿ, ಇನ್ನಿತರ ವಾಹನಗಳ ಚಾಲಕರು, ನಿರ್ವಾಹಕರು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಟ್ರಕ್ ಬೇ, ಸಾರ್ವಜನಿಕ ಶೌಚಾಲಯ, ವಿಶ್ರಾಂತಿ ಕೊಠಡಿಯನ್ನು ನಿರ್ಮಿಸಿ, ಕೆಲ ವರ್ಷಗಳೇ ಕಳೆದರೂ, ಇನ್ನೂ ಇದರ ಉದ್ಘಾಟನೆಗೆ ಕಾಲ ಕೂಡಿ ಬಂದಿಲ್ಲ.
ಕುಂದಾಪುರ – ಬೈಂದೂರು ಹೆದ್ದಾರಿಯ ಮುಳ್ಳಿಕಟ್ಟೆ – ತ್ರಾಸಿ ನಡುವಿನ ಮೊವಾಡಿ ಕ್ರಾಸ್ ಬಳಿ ಹೆದ್ದಾರಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಐಆರ್‌ಬಿ ಸಂಸ್ಥೆಯವರು ಲಾರಿ ಚಾಲಕರು, ನಿರ್ವಾಹಕರು ಹಾಗೂ ಸಾರ್ವಜನಿಕರಿಗಾಗಿ ಟ್ರಕ್ ಬೇ, ವಿಶ್ರಾಂತಿ ಕೊಠಡಿ, ಶೌಚಾಲಯವನ್ನು ನಿರ್ಮಿಸಿದ್ದಾರೆ. ಅದರ ಕಾಮಗಾರಿ ಪೂರ್ಣಗೊಂಡು ವರ್ಷಗಳೇ ಕಳೆದರೂ, ಇನ್ನೂ ಇದರ ಪ್ರಯೋಜನ ಲಾರಿ ಚಾಲಕ, ನಿರ್ವಾಹಕರಿಗೆ ಆಗಲಿ ಅಥವಾ ಸಾರ್ವಜನಿಕರಿಗೆ ಆಗಲಿ ಸಿಕ್ಕಿಲ್ಲ. ಈಗಲೂ ಮುಚ್ಚಿದ ಸ್ಥಿತಿಯಲ್ಲಿಯೇ ಇದೆ.
ನೀರು, ವಿದ್ಯುತ್ ಸಂಪರ್ಕವಿಲ್ಲ…
ಕಾಮಗಾರಿ ಪೂರ್ಣಗೊಂಡ ಬಳಿಕ ಕೆಲ ದಿನ ತೆರೆದುಕೊಂಡಿತ್ತು. ಆದರೆ ಶೌಚಾಲಯ, ಸ್ನಾನಗೃಹಕ್ಕೆ ಬಳಸಲು ನೀರಿನ ಸಂಪರ್ಕವನ್ನೇ ಕಲ್ಪಿಸದ ಕಾರಣ, ಗಬ್ಬೆದ್ದು, ದುರ್ನಾತ ಬೀರುವಂತಾಗಿತ್ತು. ಇದಲ್ಲದೆ ಇದಕ್ಕೆ ಯಾವುದೇ ವಿದ್ಯುತ್ ಸಂಪರ್ಕವೂ ಕಲ್ಪಿಸಿಲ್ಲ. ಇದಾದ 15 ದಿನಗಳಲ್ಲೇ ಮುಚ್ಚಲಾಗಿತ್ತು. ಅಲ್ಲಿಂದ ಈವರೆಗೆ ಬಾಗಿಲು ತೆರೆದೇ ಇಲ್ಲ. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರ, ಕಾಮಗಾರಿಯ ಗುತ್ತಿಗೆ ವಹಿಸಿಕೊಂಡ ಐಆರ್‌ಬಿ ಸಂಸ್ಥೆಯವರು ಮುತುವರ್ಜಿ ವಹಿಸಬೇಕಾಗಿದೆ.
ಸಾಸ್ತಾನ- ಶಿರೂರು ನಡುವೆ ಎಲ್ಲೂ ಸಾರ್ವಜನಿಕ ಶೌಚಾಲಯವೇ ಇಲ್ಲ
ಶೀಘ್ರ ವ್ಯವಸ್ಥೆ ಮಾಡಲಿ
ರಾಷ್ಟ್ರೀಯ ಹೆದ್ದಾರಿ 66 ರ ಮುಳ್ಳಿಕಟ್ಟೆ ವಿಶ್ರಾಂತಿ ವಲಯದ ಕಟ್ಟಡ ನಿರ್ಮಾಣವಾಗಿ, ಕಟ್ಟಡದ ಟೈಲ್ಸ್ ಎಲ್ಲ ಕಿತ್ತು ಹೋಗಿದ್ದರೂ, ವಾಹನ ಸವರರಿಗೆ ಮಾತ್ರ ಇನ್ನೂ ಅನುಕೂಲವಾಗಿಲ್ಲ. ಸಾಸ್ತಾನ ಟೋಲ್‌ಗೇಟ್ ಬಿಟ್ಟರೆ ಶಿರೂರು ಟೋಲ್ ಗೇಟ್‌ವರೆಗೆ ಮಧ್ಯೆ ಎಲ್ಲೂ ಶೌಚಾಲಯ, ವಿಶ್ರಾಂತಿ ಕೊಠಡಿಯೇ ಇಲ್ಲ. ಇದನ್ನಾದರೂ ಆದಷ್ಟು ಬೇಗ ತೆರೆದು, ವಾಹನ ಸವಾರರಿಗೆ ಅನುಕೂಲ ಮಾಡಿಕೊಡಲಿ.
-ಮಂಜುನಾಥ ಪೂಜಾರಿ ನಾವುಂದ, ಸಾರ್ವಜನಿಕರು
ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದೆ
ತ್ರಾಸಿ – ಮರವಂತೆ ಬೀಚ್ ಬದಿ ಲಾರಿ, ಇನ್ನಿತರ ಯಾವುದೇ ವಾಹನಗಳನ್ನು ನಿಲ್ಲಿಸದಂತೆ ಈಗಾಗಲೇ ಕ್ರಮಕೈಗೊಳ್ಳಲಾಗಿದೆ. ಮುಳ್ಳಿಕಟ್ಟೆಯಲ್ಲಿ ವಿಶ್ರಾಂತಿ ವಲಯವನ್ನು ತೆರೆಯುವಂತೆ, ಅಲ್ಲಿ ವಾಹನಗಳನ್ನು ನಿಲ್ಲಿಸಲು ವ್ಯವಸ್ಥೆ ಕಲ್ಪಿಸುವಂತೆ ಪ್ರವಾಸೋದ್ಯಮ ಇಲಾಖೆಯಿಂದ ಮಾತ್ರವಲ್ಲದೆ ಜಿಲ್ಲಾಧಿಕಾರಿಗಳಿಂದಲೂ ಮೂರು ಬಾರಿ ಹೆದ್ದಾರಿ ಪ್ರಾಧಿಕಾರದವರಿಗೆ ಪತ್ರ ಬರೆದಿದ್ದೇವೆ.
– ಕುಮಾರ್ ಸಿ.ಯು., ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ ಉಡುಪಿ
ಬೀಚ್ ಬಳಿ ನಿಲುಗಡೆ; ಪ್ರವಾಸಿಗರಿಗೆ ಕಿರಿಕಿರಿ
ಇಲ್ಲಿನ ಟ್ರಕ್ ಬೇ ಇನ್ನೂ ಆರಂಭಗೊಳ್ಳದ ಕಾರಣ ತ್ರಾಸಿ, ಮರವಂತೆ ಕಡಲ ತೀರದಲ್ಲಿಯೇ ಲಾರಿ, ಟ್ರಕ್‌ಗಳನ್ನು ನಿಲ್ಲಿಸಿ, ಚಾಲಕರು, ನಿರ್ವಾಹಕರು ವಿಶ್ರಾಂತಿ ಪಡೆಯುತ್ತಿದ್ದಾರೆ. ಬಹುತೇಕರು ಬೀಚ್‌ಗೆ ಅಡ್ಡಲಾಗಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಹೆದ್ದಾರಿಯಲ್ಲಿ ವಾಹನಗಳಲ್ಲಿ ಸಂಚರಿಸುವವರಿಗೆ ಕಡಲ ಸೌಂದರ್ಯವನ್ನು ಆಸ್ವಾದಿಸಲು ಸಾಧ್ಯವಾಗುತ್ತಿಲ್ಲ. ಇಲ್ಲಿಗೆ ಬರುವ ಪ್ರವಾಸಿಗರಿಗೆ, ವಾಹನಗಳಲ್ಲಿ ಸಂಚರಿಸುವವರಿಗೆ ತೊಂದರೆ ಆಗಬಾರದು ಅನ್ನುವ ನಿಟ್ಟಿನಲ್ಲಿ ಲಾರಿ, ಟ್ರಕ್ ಚಾಲಕರು, ನಿರ್ವಾಹಕರಿಗೆ ಅನುಕೂಲವಾಗುವಂತೆ ಮುಳ್ಳಿಕಟ್ಟೆಯಲ್ಲಿ ವಿಶ್ರಾಂತಿ ಕೊಠಡಿ, ಶೌಚಾಲಯ, ಸ್ನಾನ ಗೃಹದ ಕೊಠಡಿ ನಿರ್ಮಿಸಿದೆ. 2021ರ ಜೂನ್‌ನಲ್ಲೇ ಇದರ ಬಹುತೇಕ ಕಾಮಗಾರಿ ಪೂರ್ಣಗೊಂಡರೂ, ಉದ್ಘಾಟನೆಗೆ ಮಾತ್ರ ಮೀನ ಮೇಷ ಎಣಿಸುತ್ತಿರುವುದು ವ್ಯವಸ್ಥೆಯ ನಿರ್ಲಕ್ಷéಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.