ʼಅಮರನ್‌’ ಫೋನ್‌ ನಂಬರ್‌ ಸೀನ್; ಸಾಯಿಪಲ್ಲವಿ ನಂಬರ್‌ ಎಂದು ವಿದ್ಯಾರ್ಥಿಗೆ ನೂರಾರು ಕಾಲ್ಸ್

Team Udayavani, Nov 7, 2024, 4:25 PM IST

ʼಅಮರನ್‌’ ಫೋನ್‌ ನಂಬರ್‌ ಸೀನ್; ಸಾಯಿಪಲ್ಲವಿ ನಂಬರ್‌ ಎಂದು ವಿದ್ಯಾರ್ಥಿಗೆ ನೂರಾರು ಕಾಲ್

ಚೆನ್ನೈ: ದೀಪಾವಳಿ ಹಬ್ಬಕ್ಕೆ ರಿಲೀಸ್‌ ಆದ ಕಾಲಿವುಡ್‌ನ ʼಅಮರನ್‌ʼ (Amaran) ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ.

ಶಿವಕಾರ್ತಿಕೇಯನ್ (Sivakarthikeyan), ಸಾಯಿ ಪಲ್ಲವಿ (Sai Pallavi) ʼಅಮರನ್‌ʼ ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಅಭಿನಯ, ಕಥೆ, ಮೇಕಿಂಗ್‌ ಸೇರಿದಂತೆ ʼಅಮರನ್‌ʼ ಎಲ್ಲಾ ವಿಭಾಗದಲ್ಲೂ ಮೋಡಿ ಮಾಡಿದೆ.

ಮೇಜರ್ ಮುಕುಂದ್ ವರದರಾಜನ್ ಪಾತ್ರಕ್ಕೆ ಶಿವಕಾರ್ತಿಕೇಯನ್ ಜೀವ ತುಂಬಿದ್ದಾರೆ. ಇತ್ತ ಸಾಯಿಪಲ್ಲವಿ ಅವರ ಮುದ್ದಾದ ಅಭಿನಯ ಪ್ರೇಕ್ಷಕರ ಮನಗೆದ್ದಿದೆ.

ʼಅಮರನ್‌ʼ ಸಿನಿಮಾದಲ್ಲಿನ ಒಂದು ದೃಶ್ಯ ಚೆನ್ನೈ ಮೂಲಕ ವಿದ್ಯಾರ್ಥಿಯೊಬ್ಬನಿಗೆ ಇಕ್ಕಟ್ಟಿನ ಪರಿಸ್ಥಿತಿಯನ್ನು ತಂದಿಟ್ಟಿರುವ ಬಗ್ಗೆ ʼದಿ ಹಿಂದೂʼ ವರದಿ ಮಾಡಿದೆ.

ಏನಿದು ಘಟನೆ?: ʼಅಮರನ್‌ʼ ಸಿನಿಮಾದಲ್ಲಿ ಮೇಜರ್ ಮುಕುಂದ್ ವರದರಾಜನ್ ಅವರ ಪತ್ನಿಯ ಪಾತ್ರದಲ್ಲಿ ಸಾಯಿಪಲ್ಲವಿ (ಇಂಧೂ ರೆಬೆಕ್ಕಾ ವರ್ಗೀಸ್) ಕಾಣಿಸಿಕೊಂಡಿದ್ದಾರೆ.  ಸಿನಿಮಾದಲ್ಲಿ ಸಾಯಿಪಲ್ಲವಿ ಕಾಗದವೊಂದರಲ್ಲಿ ತಮ್ಮ ಮೊಬೈಲ್‌ ನಂಬರ್‌ ವೊಂದನ್ನು ಬರೆದು ಶಿವಕಾರ್ತಿಕೇಯನ್ ಅವರ ಬಳಿ ಎಸೆಯುವ ದೃಶ್ಯವಿದೆ. ಈ ಕಾಗದದಲ್ಲಿ ಎರಡು ನಂಬರ್‌ ಇರುತ್ತದೆ.

ಈ ನಂಬರ್‌ ಈಗ ವಿದ್ಯಾರ್ಥಿಗೆ ತಲೆ ನೋವಿನ ವಿಷಯವಾಗಿ ಕಾಡಿದೆ. ಅಸಲಿಗೆ ವಿಷಯ ಏನಂದರೆ ಕಾಗದದಲ್ಲಿ ಸಾಯಿಪಲ್ಲವಿ ಬರೆದ ನಂಬರ್‌ ಗಳಿಗೆ ಪ್ರೇಕ್ಷಕರು ಕರೆ ಮಾಡಿದ್ದಾರೆ. ಇದರಲ್ಲಿ ಒಂದು ನಂಬರ್‌ ಚಾಲ್ತಿಯಲ್ಲಿ ಇಲ್ಲ. ಆದರೆ ಇನ್ನೊಂದು ನಂಬರ್‌ ಚೆನ್ನೈನ ವಿದ್ಯಾರ್ಥಿ ವಾಗೀಶನ್ ವಿವಿ ಎನ್ನುವವನದ್ದು.

ಸಿನಿಮಾ ನೋಡಿದವರು ಕಾಗದದಲ್ಲಿನ ನಂಬರ್‌ ನಿಜವಾಗಿಯೂ ಸಾಯಿಪಲ್ಲವಿ ಅವರ ನಂಬರ್‌ ಆಗಿದೆ ಅಥವಾ ಮೇಜರ್ ಮುಕುಂದ್ ವರದರಾಜನ್ ಅವರ ಪತ್ನಿ ಇಂಧೂ ರೆಬೆಕ್ಕಾ ವರ್ಗೀಸ್ ಅವರ ನಂಬರ್‌ ಆಗಿರಬಹುದೆಂದು ನೂರಾರು ಕರೆಗಳನ್ನು ಮಾಡಿದ್ದಾರೆ.

ಎಲ್ಲ ಕರೆಗಳಿಗೆ ಉತ್ತರಿಸಿ ಉತ್ತರಿಸಿ ವಾಗೀಶನ್ ಸುಸ್ತಾಗಿದ್ದಾನೆ. ಇದಲ್ಲದೆ ಟ್ರೂ ಕಾಲರ್‌ನಲ್ಲಿ ಯಾರೋ ಕಿಡಿಗೇಡಿಗಳು ವಾಗೀಶನ್ ಅವರ ನಂಬರ್‌ ಗೆ ರೆಬೆಕ್ಕಾ ಅವರ ಹೆಸರು ಸೇರಿಸಿ ಎಡಿಟ್‌ ಮಾಡಿದ್ದಾರೆ. ಇದು ವಾಗೀಶನ್ ಮತ್ತಷ್ಟು ಸಂಕಷ್ಟ ತಂದಿಟ್ಟಿದೆ.

ಸದ್ಯ ವಾಗೀಶನ್ ತನ್ನ ಈ ಸಂಖ್ಯೆಯನ್ನು ಬ್ಯಾಂಕ್‌ ಹಾಗೂ ಇತರೆ ದಾಖಲೆಗಳಿಗೆ ನೀಡಿದ್ದು, ತಕ್ಷಣಕ್ಕೆ ಬದಲು ಮಾಡಲು ಆಗುತ್ತಿಲ್ಲ.

ಇನ್ನೊಂದೆಡೆ ಪೋನ್‌ ನಂಬರ್‌ ಎಸೆಯುವ ದೃಶ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಟಾಪ್ ನ್ಯೂಸ್

ಕರಾವಳಿಯ ಹೆದ್ದಾರಿ ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರ ಸಚಿವರನ್ನು ಭೇಟಿಯಾದ ಸಂಸದರ ತಂಡ

ಕರಾವಳಿಯ ಹೆದ್ದಾರಿ ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರ ಸಚಿವರನ್ನು ಭೇಟಿಯಾದ ಸಂಸದರ ತಂಡ

Tollywood: ನಾಗಚೈತನ್ಯ – ಶೋಭಿತಾ ವಿವಾಹ; ಇಲ್ಲಿದೆ ಸೆಲೆಬ್ರಿಟಿ ಗೆಸ್ಟ್‌ ಲಿಸ್ಟ್

Tollywood: ನಾಗಚೈತನ್ಯ – ಶೋಭಿತಾ ವಿವಾಹ; ಇಲ್ಲಿದೆ ಸೆಲೆಬ್ರಿಟಿ ಗೆಸ್ಟ್‌ ಲಿಸ್ಟ್

1-104

Bengal; 104 ವರ್ಷದ ವೃದ್ಧನಿಗೆ ಕೊನೆಗೂ ಜೈಲು ವಾಸದಿಂದ ಮುಕ್ತಿ!!

fadnavis

Mahayuti; ಮತ್ತೊಮ್ಮೆ ಮಹಾ ಸಿಎಂ ಆಗಿ ದೇವೇಂದ್ರ ಫಡ್ನವಿಸ್ ಆಯ್ಕೆ

TV Actor: ಕಾಡಿದ ಕ್ಯಾನ್ಸರ್ 45ರ ಹರೆಯದಲ್ಲಿ ಇಹಲೋಕ ತ್ಯಜಿಸಿದ ಜನಪ್ರಿಯ ನಟ

TV Actor: ಕಾಡಿದ ಕ್ಯಾನ್ಸರ್ 45ರ ಹರೆಯದಲ್ಲಿ ಇಹಲೋಕ ತ್ಯಜಿಸಿದ ಜನಪ್ರಿಯ ನಟ

Stock Market: ಷೇರುಪೇಟೆ ಸೂಚ್ಯಂಕ, ನಿಫ್ಟಿ ಜಿಗಿತ; ಲಾಭ-ನಷ್ಟ ಕಂಡ ಷೇರು ಯಾವುದು?

Stock Market: ಷೇರುಪೇಟೆ ಸೂಚ್ಯಂಕ, ನಿಫ್ಟಿ ಜಿಗಿತ; ಲಾಭ-ನಷ್ಟ ಕಂಡ ಷೇರು ಯಾವುದು?

1-raga

UP; ಹಿಂಸಾಚಾರ ಪೀಡಿತ ಸಂಭಾಲ್ ಗೆ ತೆರಳುತ್ತಿದ್ದ ರಾಹುಲ್ ಗಾಂಧಿ ನಿಯೋಗಕ್ಕೆ ತಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tollywood: ನಾಗಚೈತನ್ಯ – ಶೋಭಿತಾ ವಿವಾಹ; ಇಲ್ಲಿದೆ ಸೆಲೆಬ್ರಿಟಿ ಗೆಸ್ಟ್‌ ಲಿಸ್ಟ್

Tollywood: ನಾಗಚೈತನ್ಯ – ಶೋಭಿತಾ ವಿವಾಹ; ಇಲ್ಲಿದೆ ಸೆಲೆಬ್ರಿಟಿ ಗೆಸ್ಟ್‌ ಲಿಸ್ಟ್

Tollywood: ‘ಪುಷ್ಪ-3ʼ ಟೈಟಲ್‌ ರಿವೀಲ್..‌ ವಿಲನ್‌ ಆಗಿ ಅಬ್ಬರಿಸಲಿದ್ದಾರೆ ಈ ಖ್ಯಾತ ನಟ

Tollywood: ‘ಪುಷ್ಪ-3ʼ ಟೈಟಲ್‌ ರಿವೀಲ್..‌ ವಿಲನ್‌ ಆಗಿ ಅಬ್ಬರಿಸಲಿದ್ದಾರೆ ಈ ಖ್ಯಾತ ನಟ

Silk Smitha – Queen of the South; ಬರುತ್ತಿದೆ ಸಿಲ್ಕ್‌ ಸ್ಮಿತಾ ಬಯೋಪಿಕ್

Silk Smitha – Queen of the South; ಬರುತ್ತಿದೆ ಸಿಲ್ಕ್‌ ಸ್ಮಿತಾ ಬಯೋಪಿಕ್

Auto Draft

Suriya 45: ಮುಹೂರ್ತದಲ್ಲಿ ಸೂರ್ಯ 45

suhan-news

Producer: ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗಲೇ ಕುಸಿದು ಬಿದ್ದು ಖ್ಯಾತ ನಿರ್ಮಾಪಕ ಮೃ*ತ್ಯು

MUST WATCH

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

udayavani youtube

60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

ಹೊಸ ಸೇರ್ಪಡೆ

5

Bantwal: ತುಂಬೆ ಹೆದ್ದಾರಿಯಲ್ಲಿ ನೀರು; ಪೆರಾಜೆ ರಿಕ್ಷಾ ನಿಲ್ದಾಣಕ್ಕೆ ಹಾನಿ

ಕರಾವಳಿಯ ಹೆದ್ದಾರಿ ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರ ಸಚಿವರನ್ನು ಭೇಟಿಯಾದ ಸಂಸದರ ತಂಡ

ಕರಾವಳಿಯ ಹೆದ್ದಾರಿ ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರ ಸಚಿವರನ್ನು ಭೇಟಿಯಾದ ಸಂಸದರ ತಂಡ

4

Subramanya: ಸಿದ್ಧಗೊಳ್ಳುತ್ತಿವೆ ಬೆತ್ತದ ತೇರು

1-ckm

Thirthahalli: ಡಿ.7 ರಂದು 18ನೇ ವರ್ಷದ ಸುಬ್ರಹ್ಮಣ್ಯ ಷಷ್ಠಿ ದೀಪೋತ್ಸವ, ಜಾತ್ರ ಮಹೋತ್ಸವ

3

Gundlupete: ಟಿಪ್ಪರ್ ಹರಿದು ಕೇರಳ ಮೂಲದ ಬೈಕ್ ಸವಾರನ‌ ಕಾಲು ನಜ್ಜುಗುಜ್ಜು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.