Donald Trump Salary: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ

ಸಂಬಳ ಹೊರತುಪಡಿಸಿ ಅಧ್ಯಕ್ಷರಾದವರು ಗಮನಾರ್ಹ ಪ್ರಯೋಜನ ಪಡೆಯುತ್ತಾರೆ...

ನಾಗೇಂದ್ರ ತ್ರಾಸಿ, Nov 7, 2024, 3:59 PM IST

Donald Trump Salry: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ

ಹೈಪ್ರೊಫೈಲ್‌ ನ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ಜಯಭೇರಿ ಗಳಿಸುವ ಮೂಲಕ ಎರಡನೇ ಬಾರಿಗೆ ಅಧ್ಯಕ್ಷಗಾದಿ ಏರುವ ಸಿದ್ಧತೆಯಲ್ಲಿದ್ದಾರೆ. ಐಶಾರಾಮಿ, ಬಿಗಿ ಬಂದೋಬಸ್ತಿನ ಶ್ವೇತಭವನದಲ್ಲಿ ವಾಸ್ತವ್ಯ ಹೂಡಿ ಅಧಿಕಾರ ಚಲಾಯಿಸುವ ಅಮೆರಿಕ ಅಧ್ಯಕ್ಷರು ವಾರ್ಷಿಕ ಪಡೆಯುವ ಸಂಬಳ ಎಷ್ಟು? ಅವರಿಗೆ ಇರುವ ಸೌಲಭ್ಯಗಳೇನು ಎಂಬ ಮಾಹಿತಿಯ ವಿವರ ಇಲ್ಲಿದೆ…

ವಿಶ್ವದ ದೊಡ್ಡಣ್ಣ ಅಮೆರಿಕ ಅಧ್ಯಕ್ಷರು ವಾರ್ಷಿಕ ಪಡೆಯುವ ಸಂಬಳ 400,000 ಲಕ್ಷ ಡಾಲರ್!‌ (3,37,43,940.84 ಕೋಟಿ ರೂಪಾಯಿ). 2001ರಲ್ಲಿ ಅಮೆರಿಕ ಕಾಂಗ್ರೆಸ್‌ ಈ ಸಂಬಳವನ್ನು ನಿಗದಿಪಡಿಸಿದ್ದು, ಅಂದಿನಿಂದ ಈವರೆಗೂ ಯಾವುದೇ ಬದಲಾವಣೆಯಾಗಿಲ್ಲ. ಆದರೆ ಜಗತ್ತಿನಲ್ಲಿ ಅತೀ ಹೆಚ್ಚು ಸಂಬಳ ಪಡೆಯುವುದು ಸಿಂಗಾಪುರ ಪ್ರಧಾನಿ(ಲೀ ಸಿಯೆನ್‌ ಲೂಂಗ್)..ಅವರು ವಾರ್ಷಿಕವಾಗಿ ಅಂದಾಜು 1.6 ಮಿಲಿಯನ್‌ ಡಾಲರ್(13,50,14,400.00).

ಸಂಬಳ ಹೊರತುಪಡಿಸಿ ಅಧ್ಯಕ್ಷರಾದವರು ಗಮನಾರ್ಹ ಪ್ರಯೋಜನ ಪಡೆಯುತ್ತಾರೆ. ಅದರಲ್ಲಿ ಶ್ವೇತಭವನದ ವಾಸ, ಏರ್‌ ಫೋರ್ಸ್‌ ಒನ್‌ ಮತ್ತು ಮರೈನ್‌ ಒನ್‌ ಬಳಕೆಗೆ ಅವಕಾಶ, ಐಶಾರಾಮಿ ಲಿಮೊಸಿನ್‌ ಬುಲೆಟ್‌ ಪ್ರೂಪ್‌ ಕಾರು, ದಿನದ 24 ಗಂಟೆಗಳ ಕಾಲ ಸಿಐಎ ರಕ್ಷಣೆ…ಒಳಗೊಂಡಿದ್ದು, ಇವೆಲ್ಲವೂ ಸೇರಿ ವಾರ್ಷಿಕವಾಗಿ ಸಿಗುವ ಭತ್ಯೆ 5,69,000 ಡಾಲರ್!‌

ಅಮೆರಿಕ ಅಧ್ಯಕ್ಷರ ವೇತನದಲ್ಲಿ ಹಲವು ಭತ್ಯೆಗಳು ಮತ್ತು ಸಂಬಳಯೇತರ ಲಾಭಾಂಶ ಸೇರಿದೆ. ಆದರೂ ಜಾಗತಿಕವಾಗಿ ಹೋಲಿಸಿದಲ್ಲಿ ಅಮೆರಿಕದ ಅಧ್ಯಕ್ಷರ ವೇತನ ದೊಡ್ಡ ಮಟ್ಟ ತಲುಪಿಲ್ಲ ಎಂದು ವರದಿ ತಿಳಿಸಿದೆ.

ಖರ್ಚಿನ ಭತ್ಯೆ( Expense Allowance): ಅಮೆರಿಕ ಅಧ್ಯಕ್ಷರು ಅಧಿಕೃತ ಹಾಗೂ ವೈಯಕ್ತಿಕ ಖರ್ಚಿಗಾಗಿ ವಾರ್ಷಿಕ 50,000 ಡಾಲರ್‌ (42,18, 400 ರೂಪಾಯಿ ) ತೆರಿಗೆ ರಹಿತ ಭತ್ಯೆ ಪಡೆಯುತ್ತಾರೆ.

ಪ್ರಯಾಣ ಮತ್ತು ಮನರಂಜನೆ ಭತ್ಯೆ(Travel and Entertainment): ಅಧ್ಯಕ್ಷರ ಪ್ರಯಾಣಕ್ಕಾಗಿ 1,00,000 ಡಾಲರ್(84,36,447.82 ರೂಪಾಯಿ) ಭತ್ಯೆ ಹಾಗೂ 19,000 ಡಾಲರ್‌(16,02,992) ಮನರಂಜನಾ ಭತ್ಯೆ ಪಡೆಯುತ್ತಾರೆ.

ಶ್ವೇತಭವನ ಪುನರ್‌ ಅಲಂಕಾರ(White House Redecoration): ಅಧ್ಯಕ್ಷರಾಗಿ ಪ್ರಮಾನವಚನ ಸ್ವೀಕರಿಸಿದ ನಂತರ ಅಧ್ಯಕ್ಷರಿಗೆ ಶ್ವೇತಭವನದ ಪುನರ್‌ ಅಲಂಕಾರಕ್ಕಾಗಿ 100,000 ಡಾಲರ್‌ ನೀಡಲಾಗುತ್ತದೆ.

ಮಾಜಿ ಅಧ್ಯಕ್ಷರಿಗೆ ಸಿಗುವ ಪಿಂಚಣಿ ಮತ್ತು ಸಾರಿಗೆ ಸೌಲಭ್ಯ ಏನು?:

ಹಾಲಿ ಅಧ್ಯಕ್ಷರು ಮಾಜಿಯಾದ ನಂತರವೂ ಕೂಡಾ ಪಿಂಚಣಿ ಸೇರಿದಂತೆ ಹಲವಾರು ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಮಾಜಿ ಅಧ್ಯಕ್ಷರು ವಾರ್ಷಿಕವಾಗಿ 2,30,000 ಡಾಲರ್‌(1,94,03,122.00 ರೂಪಾಯಿ) ಪಿಂಚಣಿ ಪಡೆಯುತ್ತಾರೆ. ಅದೇ ರೀತಿ ಆರೋಗ್ಯ ಸೌಲಭ್ಯ, ಕಚೇರಿ ತೆರೆಯಲು ಹಣಕಾಸಿನ ನೆರವು, ಅಷ್ಟೇ ಅಲ್ಲ ಮಾಜಿ ಅಧ್ಯಕ್ಷರು ಪ್ರಯಾಣಕ್ಕಾಗಿ ಅಧಿಕೃತವಾಗಿ ಭತ್ಯೆಯನ್ನು ಪಡೆಯುವ ಸೌಲಭ್ಯ ಇದೆ.

ಟಾಪ್ ನ್ಯೂಸ್

Amith-sha

Fight Terrorism: ಶೀಘ್ರವೇ ರಾಷ್ಟ್ರೀಯ ಭಯೋತ್ಪಾದನೆ ವಿರೋಧಿ ನೀತಿ ಬಿಡುಗಡೆ: ಅಮಿತ್‌ ಶಾ

Karkala: ಮಾನಸಿಕ ಖಿನ್ನತೆಯಿಂದ ಮಹಿಳೆ ಆತ್ಮಹ*ತ್ಯೆ

Karkala: ಮಾನಸಿಕ ಖಿನ್ನತೆಯಿಂದ ಮಹಿಳೆ ಆತ್ಮಹ*ತ್ಯೆ

Rahul Gandhi: ನಾನು ಉದ್ಯಮ ವಿರೋಧಿಯಲ್ಲ, ಏಕಸ್ವಾಮ್ಯದ ವಿರೋಧಿ

Rahul Gandhi: ನಾನು ಉದ್ಯಮ ವಿರೋಧಿಯಲ್ಲ, ಏಕಸ್ವಾಮ್ಯದ ವಿರೋಧಿ

CJI ಜತೆ ಎಐ ಚರ್ಚೆ: ಗಲ್ಲು ಶಿಕ್ಷೆ ಕುರಿತ ಪ್ರಶ್ನೆಗೆ ಎಐ ವಕೀಲನ ಉತ್ತರ!

CJI ಜತೆ ಎಐ ಚರ್ಚೆ: ಗಲ್ಲು ಶಿಕ್ಷೆ ಕುರಿತ ಪ್ರಶ್ನೆಗೆ ಎಐ ವಕೀಲನ ಉತ್ತರ!

Supreme Court: ಟ್ರೈನಿ ವೈದ್ಯೆ ಹತ್ಯೆ ಕೇಸು ಬೇರೆ ರಾಜ್ಯಕ್ಕೆ ವರ್ಗಾಯಿಸಲು ಸುಪ್ರೀಂ ನಕಾರ

Supreme Court: ಟ್ರೈನಿ ವೈದ್ಯೆ ಹತ್ಯೆ ಕೇಸು ಬೇರೆ ರಾಜ್ಯಕ್ಕೆ ವರ್ಗಾಯಿಸಲು ಸುಪ್ರೀಂ ನಕಾರ

Maharashtra: ಕ್ವಿಂಟಲ್‌ ಈರುಳ್ಳಿಗೆ5,400 ರೂ.: 5 ವರ್ಷದಲ್ಲೇ ಗರಿಷ್ಠ!

Maharashtra: ಕ್ವಿಂಟಲ್‌ ಈರುಳ್ಳಿಗೆ5,400 ರೂ.: 5 ವರ್ಷದಲ್ಲೇ ಗರಿಷ್ಠ!

Ranji Trophy: ಶ್ರೇಯಸ್‌ ಅಯ್ಯರ್‌ ದ್ವಿಶತಕ

Ranji Trophy: ಶ್ರೇಯಸ್‌ ಅಯ್ಯರ್‌ ದ್ವಿಶತಕ; ಬೃಹತ್‌ ಮೊತ್ತದತ್ತ ಮುಂಬಯಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರೀಲ್‌ನಿಂದ ರಿಯಲ್‌ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ‌ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!

ರೀಲ್‌ನಿಂದ ರಿಯಲ್‌ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ‌ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!

ಅಮೇರಿಕವನ್ನು ಅಭಿನಂದಿಸುವ ಮೊದಲು ಭಾರತೀಯರು ಕಲಿಯಬೇಕಾದ ರಾಜಕೀಯ ಪಾಠ…

Explainer:ಅಮೇರಿಕವನ್ನು ಅಭಿನಂದಿಸುವ ಮೊದಲು ಭಾರತೀಯರು ಕಲಿಯಬೇಕಾದ ರಾಜಕೀಯ ಪಾಠ…

Kannada-Horata

Golden Jubliee: ಕನ್ನಡಕ್ಕೆ ಹೋರಾಡುತ್ತಲೇ ಇರಬೇಕಾದ ಸ್ಥಿತಿ ಬಾರದಿರಲಿ

US Result: ಭಾರತೀಯ ಮೂಲದ ಉಷಾ ಚಿಲುಕುರಿ ಪತಿ ಜೆಡಿ ವಾನ್ಸ್ ಉಪಾಧ್ಯಕ್ಷ ಪಟ್ಟ…ಟ್ರಂಪ್

US Result: ಭಾರತೀಯ ಮೂಲದ ಉಷಾ ಚಿಲುಕುರಿ ಪತಿ ಜೆಡಿ ವಾನ್ಸ್ ಉಪಾಧ್ಯಕ್ಷ…ಟ್ರಂಪ್

Stock Market: ಟ್ರಂಪ್‌ ಗೆಲುವಿನ ಎಫೆಕ್ಟ್-ಬಾಂಬೆ ಷೇರುಪೇಟೆ ಸೂಚ್ಯಂಕ 1 ಸಾವಿರ ಅಂಕ ಏರಿಕೆ!

Stock Market: ಟ್ರಂಪ್‌ ಗೆಲುವಿನ ಎಫೆಕ್ಟ್-ಬಾಂಬೆ ಷೇರುಪೇಟೆ ಸೂಚ್ಯಂಕ 1 ಸಾವಿರ ಅಂಕ ಏರಿಕೆ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

arest

Mangaluru: ಮಾದಕ ವಸ್ತು ಗಾಂಜಾ ಸೇವನೆ ಪ್ರತ್ಯೇಕ ಪ್ರಕರಣದಲ್ಲಿ ಮೂವರು ವಶಕ್ಕೆ

crime

Puttur: ಕಾರು ತಡೆಬೇಲಿ ಸಹಿತ ಹಲವು ವಾಹನಗಳಿಗೆ ಢಿಕ್ಕಿ

12

Mangaluru: ಅಕ್ರಮ ಮರಳುಗಾರಿಕೆ; ದೋಣಿಗಳು ವಶಕ್ಕೆ

fraudd

Puttur: ಲಕ್ಕಿ ಡ್ರಾ ನಂಬಿ ಹಣ ಕಳೆದುಕೊಂಡ ಕೂಲಿ ಕಾರ್ಮಿಕ

Amith-sha

Fight Terrorism: ಶೀಘ್ರವೇ ರಾಷ್ಟ್ರೀಯ ಭಯೋತ್ಪಾದನೆ ವಿರೋಧಿ ನೀತಿ ಬಿಡುಗಡೆ: ಅಮಿತ್‌ ಶಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.