ಹಾವೇರಿ: ಸಿದ್ದು ಅದೃಷ್ಟದ ಸಿಎಂ, ಬಿಎಸ್‌ವೈ ಹೋರಾಟ ಮಾಡಿ ಅಧಿಕಾರಕ್ಕೆ ಬಂದವರು-ವಿಜಯೇಂದ್ರ
Team Udayavani, Nov 7, 2024, 4:20 PM IST
■ ಉದಯವಾಣಿ ಸಮಾಚಾರ
ಹಾವೇರಿ/ಸವಣೂರು: ಸಿಎಂ ಸಿದ್ದರಾಮಯ್ಯ ಆರೋಪಿ ಸ್ಥಾನದಲ್ಲಿದ್ದು ಕೆಲಸ ನಿರ್ವಹಿಸುತ್ತಿದ್ದಾರೆ. ಮಾನ್ಯ ಸಿದ್ದರಾಮಯ್ಯನವರೇ ಯಡಿಯೂರಪ್ಪ ಕುರಿತು ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಎಚ್ಚರಿಕೆ ನೀಡಿದರು.
ಸವಣೂರಿನಲ್ಲಿ ಬುಧವಾರ ರೋಡ್ ಶೋ ನಡೆಸಿ ಮಾತನಾಡಿದ ಅವರು, ಯಡಿಯೂರಪ್ಪ 30-40 ವರ್ಷಗಳಿಂದ ಸುದೀರ್ಘ ಹೋರಾಟ ಮಾಡಿ ಬಡವರು, ರೈತರ ಪರವಾಗಿ ಧ್ವನಿ ಎತ್ತಿ ಸರ್ವರಿಗೂ ಸಮಪಾಲು, ಸಮಬಾಳು ಎಂಬಂತೆ ಸರ್ವತೋಮುಖ ಅಭಿವೃದ್ಧಿಯ ಆಡಳಿತ ನೀಡಿದ್ದಾರೆ.ಸಿದ್ದರಾಮಯ್ಯರಂತೆ ಅದೃಷ್ಟದ ಮುಖ್ಯಮಂತ್ರಿಗಳಲ್ಲ.
ಸಿದ್ದರಾಮಯ್ಯ ಬಡವರು, ರೈತರ ಪರವಾಗಿ ಹೋರಾಟ ಮಾಡಿಲ್ಲ, ಚಳವಳಿ ಮಾಡಿದವರಲ್ಲ. ಯಡಿಯೂರಪ್ಪ ಸರ್ಕಾರ ಕೊಟ್ಟ ಭಾಗ್ಯಲಕ್ಷ್ಮೀ ಯೋಜನೆಯನ್ನು ಸಿದ್ದರಾಮಯ್ಯ ಸರ್ಕಾರ ಸ್ಥಗಿತಗೊಳಿಸಿದೆ. ಕಾಂಗ್ರೆಸ್ ಸರ್ಕಾರ ಬಡವರ ವಿರೋಧಿ . ಕಾಂಗ್ರೆಸ್ ಪಕ್ಷದ್ದು ರೈತ ವಿರೋಧಿ ನೀತಿ.
ಅಭಿವೃದ್ಧಿ ಶೂನ್ಯ ಸರ್ಕಾರವಾಗಿದ್ದು, ಬದುಕಿದ್ದೂ ಸತ್ತಂತಿದೆ. ಈ ಭ್ರಷ್ಟ ಸರ್ಕಾರವನ್ನು ಎಷ್ಟು ಬೇಗ ಕಿತ್ತೆಸೆಯುತ್ತೇವೋ ಅಷ್ಟು ಒಳ್ಳೆಯದು ಎಂದರು. ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳ ಶಾಸಕರಿಗೆ ಅಭಿವೃದ್ಧಿ ಕಾರ್ಯ ನಡೆಸಲು ಸಾಧ್ಯವಾಗುತ್ತಿಲ್ಲ ಎಂಬ
ಬೇಸರವಿದೆ. ಭ್ರಷ್ಟಾಚಾರ ರಹಿತ ಆಡಳಿತ ನೀಡುವುದಾಗಿ ತಿಳಿಸಿ ರಾಜ್ಯದಲ್ಲಿ ಅ ಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಎರಡು ವರ್ಷಗಳಲ್ಲಿ ಯಾವುದೇ ಹೊಸ ಯೋಜನೆ, ಅಭಿವೃದ್ಧಿ ಕಾರ್ಯ ಘೋಷಿಸಿಲ್ಲ.
ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಟಾಳ್ಕರ್ ಆಪ್ತ ಸಹಾಯಕನ ಬೆದರಿಕೆಯಿಂದ ಸರ್ಕಾರಿ ನೌಕರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೂಡಾ ಹಗರಣ, ವಾಲ್ಮೀಕಿ ನಿಗಮದ ಹಗರಣ ಬಹಿರಂಗವಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Encounter: ಛತ್ತೀಸ್‌ಗಢದಲ್ಲಿ ಭಧ್ರತಾ ಪಡೆ ಗುಂಡೇಟಿಗೆ ಎಂಟು ನಕ್ಸಲರು ಹತ
Champions Trophy: ವಿರಾಟ್, ರೋಹಿತ್ ಕುರಿತು ಮಹತ್ವದ ಹೇಳಿಕೆ ನೀಡಿದ ಕೋಚ್ ಗಂಭೀರ್
OPL vs CM: ನ.15, 16ಕ್ಕೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಆರ್.ಅಶೋಕ್ ಭವಿಷ್ಯ
U-19 T20 World Cup Final: ಚಾಂಪಿಯನ್ ಭಾರತವೇ ಫೇವರಿಟ್
Union Budget: ತೆರಿಗೆ ಮಿತಿ ಹೆಚ್ಚಳ, 1 ಕೋಟಿ ಜನರಿಗೆ ಅನುಕೂಲ: ನಿರ್ಮಲಾ ಸೀತಾರಾಮನ್