Test Ride: ಟೆಸ್ಟ್ ರೈಡ್‌ಗಾಗಿ ಬೈಕ್ ಹಿಡಿದುಕೊಂಡು ಹೋದವ ಬರಲೇ ಇಲ್ಲ… ಸಿಬಂದಿ ಕಂಗಾಲು
Team Udayavani, Nov 7, 2024, 5:04 PM IST
ಉತ್ತರಪ್ರದೇಶ: ವ್ಯಕ್ತಿಯೊಬ್ಬ ಬೈಕ್ ಟೆಸ್ಟ್ ಡ್ರೈವ್ ಗೆಂದು ತೆಗೆದುಕೊಂಡು ಹೋಗಿ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಆಗ್ರಾದ ಶೋರೂಮ್‌ನಲ್ಲಿ ಕಳೆದ ಶನಿವಾರ(ನ.3) ನಡೆದಿದ್ದು ಇದೀಗ ಪೊಲೀಸರು ಮೂರೂ ದಿನಗಳ ಬಳಿಕ ಆರೋಪಿಯನ್ನು ಪತ್ತೆ ಹಚ್ಚಿ ಬೈಕ್ ಸಮೇತ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಸಾಹಿಲ್ ಎನ್ನಲಾಗಿದ್ದು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಘಟನೆ ವಿವರ:
ಆರೋಪಿ ಸಾಹಿಲ್ ಉತ್ತರ ಪ್ರದೇಶದ ಆಗ್ರಾದಲ್ಲಿರುವ ಬೈಕ್ ಶೋರೂಮ್ ಗೆ ನವೆಂಬರ್ 3 ರಂದು ತೆರಳಿದ್ದಾನೆ ಅಲ್ಲದೆ ಅಲ್ಲಿರುವ ಬೈಕ್ ಗಳನ್ನು ನೋಡಿದ್ದಾನೆ ಇದಾದ ಬಳಿಕ ಒಂದು ಬೈಕ್ ಅನ್ನು ಆಯ್ಕೆ ಮಾಡಿ ತಂದೆಯನ್ನು ಕರೆದುಕೊಂಡು ಬರುವುದಾಗಿ ಹೋಗಿ ಸ್ವಲ್ಪ ಸಮಯದ ಬಳಿಕ ಮತ್ತೆ ತಂದೆಯ ಜೊತೆ ಶೋರೂಮ್ ಗೆ ಬಂದು ಸಿಬಂದಿ ಬಳಿ ಟೆಸ್ಟ್ ಡ್ರೈವ್ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾನೆ ಅದರಂತೆ ಸಿಬಂದಿ ಬೈಕ್ ಟೆಸ್ಟ್ ಡ್ರೈವ್ ಗೆ ಕೊಟ್ಟಿದ್ದಾರೆ ಅಲ್ಲದೆ ಸಿಬಂದಿ ಬಳಿ ಸಾಹಿಲ್ ನನ್ನ ತಂದೆ ಇಲ್ಲೇ ಇರುತ್ತಾರೆ ಎಂದು ಹೇಳಿ ಬೈಕ್ ಏರಿ ಹೋಗಿದ್ದಾನೆ.
ಕೆಲ ಅರ್ಧ ಗಂಟೆ ಕಳೆಯಿತು, ಒಂದು ಗಂಟೆ ಕಳೆಯಿತು ಟೆಸ್ಟ್ ಡ್ರೈವ್ ಗೆ ಹೋದ ವ್ಯಕ್ತಿ ವಾಪಸ್ಸಾಗಿಲ್ಲ ಇದರಿಂದ ಗಾಬರಿಗೊಂಡ ಸಿಬಂದಿ ಶೋರೂಮ್ ನಲ್ಲಿದ್ದ ಸಾಹಿಲ್ ನ ತಂದೆಯ ಬಳಿ ವಿಚಾರಿಸಿ ಮೊಬೈಲ್ ನಂಬರ್ ಕೇಳಿದ್ದಾರೆ ಈ ವೇಳೆ ತಂದೆ ಎಂದು ಹೇಳಿ ಕರೆ ತಂದ ವ್ಯಕ್ತಿ ನನಗೆ ಆತನ ಸರಿಯಾದ ಪರಿಚಯ ಇಲ್ಲ ಆತ ನನ್ನ ಕ್ಯಾಂಟೀನ್ ಗೆ ಚಹಾ ಕುಡಿಯಲು ಬರುತ್ತಿದ್ದ ಹಾಗೆ ನನ್ನ ಬಳಿ ಯಾವುದೋ ಒಂದು ಕೆಲಸವಿದೆ ಹೋಗಿ ಬರುವ ಎಂದು ನನ್ನನ್ನು ಕರೆತಂದಿದ್ದಾನೆ ನಾನು ಆತನ ತಂದೆಯಲ್ಲ ಎಂದು ಹೇಳಿದ್ದಾರೆ.
ವ್ಯಕ್ತಿಯ ಮಾತು ಕೇಳಿ ಗಾಬರಿಗೊಂಡ ಸಿಬಂದಿಗೆ ತಾನು ಮೋಸ ಹೋಗಿರುವುದು ಗೊತ್ತಾಗುತ್ತಿದ್ದಂತೆ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕೇಸು ದಾಖಲಿಸಿಕೊಂಡ ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ತಂಡ ರಚಿಸಿ ಆರೋಪಿಯ ಪತ್ತೆಗೆ ಜಾಲ ಬಿಸಿದ್ದು ಅದರಂತೆ ನವೆಂಬರ್ 6 ರಂದು ಆರೋಪಿ ಸಾಹಿಲ್ ನನ್ನ ಪೊಲೀಸರು ಬಂಧಿಸಿ ಆತನ ಬಳಿಯಿದ್ದ ಬೈಕ್ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ ಈ ವೇಳೆ ತನಗೆ ಸ್ಪೋರ್ಟ್ಸ್ ಬೈಕ್ ಖರೀದಿಸುವ ಅಸೆ ವ್ಯಕ್ತಪಡಿಸಿದ್ದು ಆದರೆ ತನ್ನಲ್ಲಿ ಅಷ್ಟೊಂದು ಹಣ ಇಲ್ಲದ ಕಾರಣ ಈ ಕೃತ್ಯಕ್ಕೆ ಇಳಿದಿರುವುದಾಗಿ ಹೇಳಿಕೊಂಡಿದ್ದಾನೆ.
ಇದನ್ನೂ ಓದಿ: Suniel Shetty: ಆ್ಯಕ್ಷನ್ ದೃಶ್ಯದ ಚಿತ್ರೀಕರಣದ ವೇಳೆ ಅವಘಡ; ಸುನಿಲ್ ಶೆಟ್ಟಿಗೆ ಗಂಭೀರ ಗಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಉದ್ಧವ್ ಸೇನೆ ಪ್ರಣಾಳಿಕೆ: ಬಾಲಕರಿಗೂ ಉಚಿತ ಶಿಕ್ಷಣ!
Fight Terrorism: ಶೀಘ್ರವೇ ರಾಷ್ಟ್ರೀಯ ಭಯೋತ್ಪಾದನೆ ವಿರೋಧಿ ನೀತಿ ಬಿಡುಗಡೆ: ಅಮಿತ್ ಶಾ
Rahul Gandhi: ನಾನು ಉದ್ಯಮ ವಿರೋಧಿಯಲ್ಲ, ಏಕಸ್ವಾಮ್ಯದ ವಿರೋಧಿ
CJI ಜತೆ ಎಐ ಚರ್ಚೆ: ಗಲ್ಲು ಶಿಕ್ಷೆ ಕುರಿತ ಪ್ರಶ್ನೆಗೆ ಎಐ ವಕೀಲನ ಉತ್ತರ!
Supreme Court: ಟ್ರೈನಿ ವೈದ್ಯೆ ಹತ್ಯೆ ಕೇಸು ಬೇರೆ ರಾಜ್ಯಕ್ಕೆ ವರ್ಗಾಯಿಸಲು ಸುಪ್ರೀಂ ನಕಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.