Udupi: ಮುನಿಯಾಲ್ ಅಯುರ್ವೇದ ಕಾಲೇಜಿಗೆ ರಾಷ್ಟ್ರ ಮಟ್ಟದಲ್ಲಿ “ಎ’ ಗ್ರೇಡ್
Team Udayavani, Nov 7, 2024, 6:05 PM IST
ಉಡುಪಿ: ನ್ಯಾಷನಲ್ ಕಮಿಷನ್ ಫಾರ್ ಇಂಡಿಯನ್ ಸಿಸ್ಟಂ ಆಫ್ ಮೆಡಿಸಿನ್ (ಭಾರತೀಯ ಚಿಕಿತ್ಸಾ ಪದ್ಧತಿ ರಾಷ್ಟ್ರೀಯ ಆಯೋಗ) ನಡೆಸಿದ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ (ಭಾರತೀಯ ಗುಣವತ್ತಾ ಪರಿಷತ್) ಮೌಲ್ಯಾಂಕನದಲ್ಲಿ ಮಣಿಪಾಲದಲ್ಲಿರುವ ಮುನಿಯಾಲ್ ಆಯುರ್ವೇದ ಕಾಲೇಜು ರಾಷ್ಟ್ರಮಟ್ಟದಲ್ಲಿ “ಎ’ಗ್ರೇಡ್ ಪಡೆದಿದೆ.
ಈ ಮೌಲ್ಯಾಂಕನವು ಶೈಕ್ಷಣಿಕ ಗುಣಮಟ್ಟ, ಶಿಕ್ಷಕರ ಕ್ಷಮತೆ, ವಿದ್ಯಾರ್ಥಿಗಳ ಕಾರ್ಯ ಕ್ಷಮತೆ, ಸಂಶೋಧನೆ ಹಾಗೂ ಉತ್ಕೃಷ್ಟ ಗ್ರಂಥ ಪ್ರಕಟನೆಗಳು ಮತ್ತು ಅಳವಡಿಸಿಕೊಂಡ ನೂತನ ಕಲಿಕಾ ವಿಧಾನಗಳು ಮೊದಲಾದ ಮಾನದಂಡಗಳ ಆಧಾರದಲ್ಲಿ ನಡೆಸಲ್ಪಡುತ್ತದೆ. ಜೀವಿಗಳನ್ನು ಕಾಡುವ ಕಷ್ಟಸಾಧ್ಯ ಕಾಯಿಲೆಗಳಿಗೆ ಸಂಸ್ಥೆಯ ನೂತನ ಔಷಧಗಳ ಆವಿಷ್ಕಾರ ಹಾಗೂ ಆ ಸಂಶೋಧನೆಗಳ ರಕ್ಷಣೆಗೆ ದೊರೆತ 20 ವರ್ಷಗಳ 17 ಅಮೆರಿಕದ ಪೇಟೆಂಟ್‌ಗಳು ಸಂಸ್ಥೆಯ ರಾಷ್ಟ್ರಮಟ್ಟದ ಪ್ರಗತಿಗೆ ತನ್ನ ಕೊಡುಗೆ ನೀಡಿದೆ.
ದೇಶದಲ್ಲಿರುವ 500ಕ್ಕೂ ಹೆಚ್ಚಿನ ಆಯುರ್ವೇದ ಕಾಲೇಜುಗಳ ನಡುವೆ ಮೊದಲ ಹಂತದ ಮೌಲ್ಯಾಂಕನದಲ್ಲಿಯೇ “ಎ’ ಗ್ರೇಡ್ ಪಡೆದದ್ದು ಸಂಸ್ಥೆಯ ಗುಣಮಟ್ಟದ ಶಿಕ್ಷಣಕ್ಕೆ ದ್ಯೋತಕವಾಗಿದೆ.
ಆಯುರ್ವೇದದ ಬೋಧನೆ, ಸಂಶೋಧನೆ ಹಾಗೂ ಚಿಕಿತ್ಸಾ ಕ್ಷೇತ್ರಗಳಲ್ಲಿ ಇನ್ನಷ್ಟು ಸಾಧನೆ ಮಾಡಲು ಸ್ಫೂರ್ತಿಯಾಗಿದೆ ಎಂದು 80 ವರ್ಷಗಳಿಂದ ಆಯುರ್ವೇದ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಯ ಅಧ್ಯಕ್ಷ ಡಾ| ಎಂ. ವಿಜಯಭಾನು ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Udupi: ಗೀತೆಯ ಸಂದೇಶ ಪ್ರತೀ ಮನೆಯನ್ನೂ ಪ್ರವೇಶಿಸಲಿ: ಕಾಂಚಿ ಶ್ರೀ
Udupi: ಎಂಜಿಎಂ ಕಾಲೇಜಿನಲ್ಲಿ ನ.29 ರಿಂದ ಡಿ.1ವರೆಗೆ ಅಮೃತ ಮಹೋತ್ಸವ ಸಂಭ್ರಮ
Udupi: ಗೀತಾರ್ಥ ಚಿಂತನೆ-100: ಸತ್ತಾಗ ದುಃಖ, ಸಾಯುತ್ತಿರುವಾಗಲ್ಲ!
Udupi: ಕಾಂಚೀ ಶ್ರೀಗಳಿಂದ ಶ್ರೀಕೃಷ್ಣ ಮುಖ್ಯಪ್ರಾಣ, ಅನಂತೇಶ್ವರ, ಚಂದ್ರೇಶ್ವರ ದರ್ಶನ
MUST WATCH
ಹೊಸ ಸೇರ್ಪಡೆ
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.