Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Team Udayavani, Nov 8, 2024, 1:02 AM IST
ಬೆಂಗಳೂರು: ಯಾವುದೇ ತಪ್ಪು ನಡೆದರೂ ಮುಸ್ಲಿಮರೇ ಕಾರಣ ಎಂದು ಅವರು (ಬಿಜೆಪಿ ನಾಯಕರು) ಬಿಂಬಿಸುತ್ತಿದ್ದಾರೆ. ಮುಸ್ಲಿಮರನ್ನು ಗುರಿ ಮಾಡುವುದು
ಬಿಟ್ಟರೆ ಯಾವ ಸದುದ್ದೇಶವೂ ಅವರಿಗಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಪಕ್ಷ ಬಿಜೆಪಿಯ ವಿರುದ್ಧ ವಾಗ್ಧಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ವಕ್ಫ್ ಆಸ್ತಿ ವಿಚಾರದಲ್ಲಿ ಅನೇಕ ಚರ್ಚೆಗಳಾಗಿವೆ. ಈ ಹಿಂದೆ ಅನೇಕ ದಾನಗಳಾಗಿವೆ. ಆದರೆ ಈ ವಿಷಯವನ್ನು ಕೋಮುವಾದದ ದೃಷ್ಟಿಯಿಂದ ನೋಡುತ್ತಿದ್ದಾರೆ. ಅದು ಸರಿಯಲ್ಲ. ಇದರ ಹಿಂದಿರುವ ಉದ್ದೇಶ ದ್ವೇಷ ಹೆಚ್ಚು ಮಾಡುವುದಾಗಿದೆ ಅಷ್ಟೇ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.