Bhairathi Ranagal; ಶಿವಣ್ಣ ಡ್ರೀಮ್ ಪ್ರಾಜೆಕ್ಟ್ ಭೈರತಿ ಮೈಲುಗಲ್!
Team Udayavani, Nov 8, 2024, 10:36 AM IST
ಶಿವರಾಜ್‌ಕುಮಾರ್ ಅವರನ್ನು ಮಾಸ್ ಅವತಾರದಲ್ಲಿ ನೋಡುವುದೆಂದರೆ ಅವರ ಅಭಿಮಾನಿಗಳಿಗೆ ಎಲ್ಲಿಲ್ಲದ ಖುಷಿ. ಏಕೆಂದರೆ ರೋಷ, ಆವೇಶ, ಅಬ್ಬರ ಎಲ್ಲವನ್ನು ಶಿವಣ್ಣ ತಮ್ಮ ಮುಖದ ಮೇಲಿನ ಭಾವನೆಗಳಲ್ಲಿ ಪ್ರದರ್ಶಿಸುವ ರೀತಿಯೇ ಮಾಸ್ ಪ್ರಿಯರಿಗೆ ಖುಷಿ ಕೊಡುತ್ತದೆ. ಈಗ ಅಂತಹ ಭರಪೂರ ಖುಷಿಗೆ ಸಿನಿಮಾವೊಂದು ಕಾರಣವಾಗಲಿದೆ. ಅದು “ಭೈರತಿ ರಣಗಲ್’.
ಫಸ್ಟ್‌ಲುಕ್, ಟೀಸರ್‌ನಲ್ಲೇ ಮೋಡಿ ಮಾಡಿದ್ದ ಭೈರತಿ ಈಗ ಟ್ರೇಲರ್‌ನಲ್ಲಿ ಮತ್ತೂಂದು ಹಂತದ ಹವಾ ಸೃಷ್ಟಿ ಮಾಡಿದೆ. ಟ್ರೇಲರ್ ನೋಡಿದವರಿಗೆ ಚಿತ್ರದಲ್ಲೊಂದು ಭರ್ಜರಿಯಾದ ಮಾಸ್ ಎಲಿಮೆಂಟ್ಸ್ ಇರುವುದು ಎದ್ದು ಕಾಣುತ್ತದೆ. ಅದಕ್ಕೆ ಪೂರಕವಾಗಿ ಇಡೀ ಸಿನಿಮಾವನ್ನು ತುಂಬಾನೇ ರಗಡ್ ಆಗಿರುವ
ಕ್ಯಾನ್ವಾಸ್‌ನಲ್ಲಿ ಕಟ್ಟಿಕೊಡಲಾಗಿದೆ. ಕನ್ನಡ ಚಿತ್ರರಂಗದ ಅನೇಕ ಮುಂಚೂಣಿ ನಟರು “ಭೈರತಿ’ಯಲ್ಲಿ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. “ನಾನು ತಾಳ್ಮೆ ಕಳೆದುಕೊಂಡಾಗೆಲ್ಲ ತುಂಬಾ ಜನ ತಲೆ ಕಳೆದುಕೊಂಡಿದ್ದಾರೆ’ ಎಂಬ ಡೈಲಾಗ್‌ಗೆ ಮಾಸ್ ಪ್ರಿಯರು ಫಿದಾ ಆಗಿದ್ದಾರೆ.
“ಭೈರತಿ ರಣಗಲ್ ಸಣ್ಣ ಕಥೆಯನ್ನು ಇಲ್ಲಿ ಬೆಳೆಸಿದ್ದಾರೆ. ಯಾಕೆ ಅವನು ಭೈರತಿ ರಣಗಲ್ ಆಗುತ್ತಾನೆ. ಜನರಿಗೆ ಯಾಕೆ ಅವನನ್ನು ಕಂಡರೆ ಅಷ್ಟು ಪ್ರೀತಿ ಎಂದು ಹೇಳಲಾಗಿದೆ. ಹೆಚ್ಚು ಆಡಂಬರವಿಲ್ಲದೆ, ಸರಳವಾಗಿ ಈ ವಿಷಯವನ್ನು ಹೇಳಲಾಗಿದೆ. ಇಲ್ಲಿ ಎಷ್ಟು ಮಾತು ಬೇಕೋ, ಅಷ್ಟಿದೆ. ಬಹಳ ಚೆನ್ನಾಗಿ ಕಥೆ ಮಾಡಿಕೊಂಡಿದ್ದಾರೆ ನರ್ತನ್’ ಎನ್ನುವುದು ಶಿವಣ್ಣನ ಮಾತು.
ಶಿವರಾಜ್‌ಕುಮಾರ್ ಅವರ ಕಾಸ್ಟೂಮ್, ಅದರ ಹಿನ್ನೆಲೆ, ಶಿವಣ್ಣ ಗ್ಯಾಂಗ್‌ಸ್ಟರ್ ಆಗಿದ್ದು ಹೇಗೆ, ಬ್ಲಾಕ್ ಡ್ರೆಸ್ ಯಾಕೆ ಸೇರಿದಂತೆ ಹಲವು ಅಂಶಗಳಿಗೆ ಇಲ್ಲಿ ಉತ್ತರ ಸಿಗಲಿದೆ. ಮಫ್ತಿ ಚಿತ್ರದ ಶಿವರಾಜಕುಮಾರ್ ಅವರ ಭೈರತಿ ರಣಗಲ್ ಪಾತ್ರ ಇನ್ನು ಎಲ್ಲರ ಮನದಲ್ಲಿದೆ. ಆ ಪಾತ್ರವನ್ನು ಕೇಂದ್ರವಾಗಿಟ್ಟುಕೊಂಡು ಈ ಚಿತ್ರದ ಕಥೆ ಮಾಡಲಾಗಿದೆಯಂತೆ.
ನ.10ರಂದು ಪ್ರೀ ರಿಲೀಸ್ ಇವೆಂಟ್
ಚಿತ್ರದ ಪ್ರೀ ರಿಲೀಸ್ ಇವೆಂಟ್ ಅನ್ನು ಚಿತ್ರತಂಡ ನ.10ಕ್ಕೆ ಆಯೋಜಿದ್ದು, ನಗರದ ನಂದಿ ಲಿಂಕ್ ಮೈದಾನದಲ್ಲಿ ಅದ್ಧೂರಿಯಾಗಿ ಈ ಕಾರ್ಯಕ್ರಮ ನಡೆಯಲಿದೆ. ಕನ್ನಡ ಚಿತ್ರರಂಗದ ಅನೇಕ ಕಲಾವಿದರು ಭಾಗಿಯಾಗಲಿದ್ದಾರೆ.
ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rakesh Adiga: ನಾನು ಮಿಡಲ್ ಕ್ಲಾಸ್ ಹುಡುಗ ಮರ್ಯಾದೆ ಉಳಿಸಿ!
Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ
BBK11: ಎದ್ದು ಬಿದ್ದು ಟಾಸ್ಕ್ ಸೋತ ಹನುಮಂತು: ರಿಯಲ್ ಹುಲಿ ನೀವೇ ಎಂದ ಸಹಸ್ಪರ್ಧಿ
Sandalwood: 99 ರೂಪಾಯಿಗೆ ಆರಾಮ್ ಸಿನಿಮಾ: ಅರವಿಂದ ಸ್ವಾಮಿ ಹೊಸ ಪ್ಲ್ರಾನ್
Darshan; ಭರ್ಜರಿ ಓಪನಿಂಗ್ ನಿರೀಕ್ಷೆಯಲ್ಲಿ ನವಗ್ರಹ: ರೀರಿಲೀಸ್ ಚಿತ್ರದಲ್ಲಿ ದರ್ಶನ್ ಹವಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.