Ghaati: ಸ್ವೀಟಿ ಅಲ್ಲ ಘಾಟಿ; ಫಸ್ಟ್‌ಲುಕ್‌ನಲ್ಲಿ ಅನುಷ್ಕಾ ಸಿನಿಮಾ
Team Udayavani, Nov 8, 2024, 11:31 AM IST
“ಬಾಹುಬಲಿ’ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟಕ್ಕೆ ಬೆಳೆದವರು ನಟಿ ಅನುಷ್ಕಾ ಶೆಟ್ಟಿ. ಕನ್ನಡದ ಈ ನಟಿ, ಭವಿಷ್ಯ ಕಂಡುಕೊಂಡಿದ್ದು ತೆಲುಗು ಚಿತ್ರರಂಗದಲ್ಲಿ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ, ತಮ್ಮ ವೃತ್ತಿ ಜೀವನದಲ್ಲಿ ಉತ್ತುಂಗದಲ್ಲಿದ್ದ ಅನುಷ್ಕಾ, ಕ್ರಮೇಣ ಸಿನಿಮಾಗಳಿಂದ ವಿಮುಖರಾಗಿದ್ದು ಅವರ ಅಭಿಮಾನಿಗಳಿಗೆ ಬೇಸರದ ಸಂಗತಿಯಾಗಿತ್ತು.
“ನಿಶ್ಯಬ್ದಮ್’ ಸಿನಿಮಾ ನಂತರ ಮೂರು ವರ್ಷ ಯಾವುದೇ ಸಿನಿಮಾ ಮಾಡಿರಲಿಲ್ಲ. ಅವರ ಹಿಂದಿನ ಸಿನಿಮಾ “ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ’ ಕಳೆದ ವರ್ಷ ಬಿಡುಗಡೆಯಾಗಿತ್ತಾದರೂ, ಅಷ್ಟೇನು ಸದ್ದು ಮಾಡಿರಲಿಲ್ಲ. ಈಗ ಹೊಸ ಸಿನಿಮಾ ಮೂಲಕ ಮತ್ತೆ ಪ್ರೇಕ್ಷಕರೆ ದುರು ಬಂದಿದ್ದಾರೆ ನಟಿ ಅನುಷ್ಕಾ.
ಅವರ ಹೊಸ ಚಿತ್ರದ ಹೆಸರು “ಘಾಟಿ’. ಕ್ರಿಷ್ ಜಾಗರ್ಲಮುಡಿ ನಿರ್ದೇಶನದಲ್ಲಿ ಬರುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾವಿದು. ಅನುಷ್ಕಾ ಶೆಟ್ಟಿ ಅವರ ಜನ್ಮದಿನದಂದು “ಘಾಟಿ’ ಚಿತ್ರದ ಅವರ ಫಸ್ಟ್ ಲುಕ್ ಟೀಸರ್ ಬಿಡುಗಡೆಗೊಂಡಿದೆ.
ಟೀಸರ್‌ನಲ್ಲಿ ಹಣೆಯ ಮೇಲೆ ಬೊಟ್ಟು, ಮೂಗಿನಲ್ಲಿ ನತ್ತು, ಭಂಗಿ ಸೇದುತ್ತಿರುವ ಅನುಷ್ಕಾ ಅವರ ದೃಶ್ಯ ಪ್ರೇಕ್ಷಕರಲ್ಲಿ ಹೊಸ ಕೌತುಕ ಸೃಷ್ಟಿಸಿದೆ. “ವಿಕ್ಟಿಮ್, ಕ್ರಿಮಿನಲ್, ಲೆಜೆಂಡ್’ ಎಂಬ ಅಡಿಬರಹ ಪೋಸ್ಟರ್‌ನಲ್ಲಿ ಕಾಣಸಿಗುತ್ತದೆ. ಸಸ್ಪೆನ್ಸ್ ಥ್ರಿಲ್ಲರ್ ಜಾನರ್‌ನಲ್ಲಿ ಸಿನಿಮಾ ಮೂಡಿಬರಲಿದೆ. ಸದ್ಯ ಚಿತ್ರೀಕರಣದ ಅಂತಿಮ ಹಂತದಲ್ಲಿದೆ ಚಿತ್ರತಂಡ. ಫಸ್ಟ್ ಫ್ರೆಮ್ ಎಂಟರ್‌ಟೈನ್ ಮೆಂಟ್ ಬ್ಯಾನರ್‌ನಡಿ ರಾಜೀವ್ ರೆಡ್ಡಿ, ಸಾಯಿ ಬಾಬು ಜಾಗರ್ಲಮುಡಿ ಚಿತ್ರವನ್ನು ನಿರ್ಮಿಸಿದ್ದಾರೆ. ಮನೋಜ್ ರೆಡ್ಡಿ ಛಾಯಾಗ್ರಹಣ, ನಾಗವೆಳ್ಳಿ ವಿದ್ಯಾ ಸಾಗರ್ ಅವರ ಸಂಗೀತ “ಘಾಟಿ’ ಚಿತ್ರಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kollywood: ಧನುಷ್ – ಐಶ್ವರ್ಯಾ ವಿಚ್ಚೇದನ ಪ್ರಕರಣ; ನ.27ಕ್ಕೆ ಅಂತಿಮ ತೀರ್ಪು
Tollywood: ನಾನು ಸಿಂಗಲ್ ಅಲ್ಲ.. ರಶ್ಮಿಕಾ ಜತೆಗಿನ ಸಂಬಂಧ ದೃಢಪಡಿಸಿದ್ರಾ ದೇವರಕೊಂಡ?
Malayalam Actor: ಶ್ವಾಸಕೋಶದ ಕಾಯಿಲೆ; ಖ್ಯಾತ ನಟ ಮೇಘನಾಥನ್ ನಿಧನ
Kollywood: ಯೂಟ್ಯೂಬ್ ವಿಮರ್ಶೆ ಬ್ಯಾನ್ ಮಾಡಲು ತಮಿಳು ನಿರ್ಮಾಪಕರ ಸಂಘ ಆಗ್ರಹ
Ram Charan: ಅಯ್ಯಪ್ಪನ ಮಾಲೆ ಧರಿಸಿ ದರ್ಗಾಕ್ಕೆ ಭೇಟಿ ಕೊಟ್ಟ ರಾಮ್ ಚರಣ್; ಭಾರೀ ಟೀಕೆ
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.