Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ
Team Udayavani, Nov 8, 2024, 1:07 PM IST
ಬಳ್ಳಾರಿ: “ನಿಮಗೆ ಕೈ ಮುಗಿದು ಕೇಳುತ್ತೇನೆ, ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು” ಇದು ಸಂಡೂರು ಉಪಚುನಾವಣೆ ಪ್ರಚಾರದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ ಮಾತು.
ಬನ್ನಿಹಟ್ಟಿ ಸಮಾವೇಶದಲ್ಲಿ ಶುಕ್ರವಾರ (ನ.08) ಭಾಷಣ ಮಾಡಿದ ಅವರು, ಇದು ಉಪಚುನಾವಣೆ ಆದರೂ ಬಹಳ ಮಹತ್ವದ ಚುನಾವಣೆ. ಬಿಜೆಪಿಯವರು ಸುಳ್ಳು ಹೇಳಿ, ಹಣ ಖರ್ಚು ಮಾಡಿ ಸಂಡೂರು ಗೆಲ್ಲಲು ಯೋಜನೆ ಮಾಡಿದ್ದಾರೆ ಎಂದರು.
ಜನಾರ್ದನ ರೆಡ್ಡಿ ಯಾರು, ಏನು ಎಂದು ನಿಮಗೆಲ್ಲಾ ಗೊತ್ತಿದೆ. ಬಳ್ಳಾರಿಯನ್ನ ರಿಪಬ್ಲಿಕ್ ಬಳ್ಳಾರಿ ಮಾಡದಂತವರು. ಅಕ್ರಮ ಗಣಿಗಾರಿಕೆ ಮಾಡಿ ಲೂಟಿ ಮಾಡಿದಂತವರು. ಈ ಚುನಾವಣೆಯಲ್ಲಿ ಗೆಲ್ಲಿಸುತ್ತೇವೆಂದು ಜವಾಬ್ದಾರಿ ತಗೊಂಡಿದ್ದಾರೆ. ಜನಾರ್ದನ ರೆಡ್ಡಿ ಮತ್ತು ಬ್ರದರ್ಸ್ ಸೇರಿ ಬಳ್ಳಾರಿ ಜಿಲ್ಲೆಯನ್ನ ಲೂಟಿ ಮಾಡುತ್ತಿದ್ದರು. ರೆಡ್ಡಿ ಬ್ರದರ್ಸ್, ರಾಮುಲು ಸೇರಿ ಇಲ್ಲಿ ಬಡತನ ಇದೆ, ಶೋಷಣೆ ಇತ್ತು. ಅವರ ಪಟಾಲಂ ಬಳ್ಳಾರಿ ಜಿಲ್ಲೆಯನ್ನ ಹಾಳು ಮಾಡಿದ್ದಾರೆ, ಅಕ್ರಮ ಗಣಿಗಾರಿಕೆ ಮಾಡಿದ್ದಾರೆ, ಗುಡ್ಡಗಳನ್ನು ನೆಲಸಮ ಮಾಡುತ್ತಿದ್ದಾರೆಂದು ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದೆವು. ಇವರ ಕಪಿ ಮುಷ್ಟಿಯಿಂದ ಬಳ್ಳಾರಿಯನ್ನ ತಪ್ಪಿಸಬೇಕಿತ್ತು. ನಾನೊಮ್ಮೆ ಅಲ್ಲಿಪುರಕ್ಕೆ ಬಂದಿದ್ದೆ. ಯಾರದೋ ಮನೆಯಲ್ಲಿ ನೀರು ಕುಡಿಯುವುದಕ್ಕೆ ಹೋಗಿದ್ದೆ. ಆಗ ಆ ಮನೆಯವರು ನೀವು ಬಂದಿದ್ದು ಯಾರಿಗೂ ಹೇಳಬೇಡಿ ಸರ್ ಎಂದಿದ್ರು. ಅವರು ಬೇಕಾ ಮತ್ತೇ? ಅವರ ಅಭ್ಯರ್ಥಿ ಗೆಲ್ಲಬೇಕಾ ಮತ್ತೆ ಎಂದ ಸಿಎಂ ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
MUST WATCH
ಹೊಸ ಸೇರ್ಪಡೆ
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.