Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Team Udayavani, Nov 8, 2024, 2:48 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಬೀದಿನಾಯಿಗೆ ಊಟ ಹಾಕುತ್ತಿದ್ದ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಯತ್ನಿಸಿರುವ ಘಟನೆ ಎಚ್ಎಎಲ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈ ಸಂಬಂಧ ನಾಲ್ವರ ಮೇಲೆ ಪ್ರಕರಣ ದಾಖಲಾಗಿದೆ. ಬಸವನಗರದ ಆ್ಯನಿ ಕೆ.ಜಾರ್ಜ್ ದೂರಿನಂತೆ ಗುರುರಾಜ ಲೇಔಟ್ ನಿವಾಸಿ ನಂದಿನಿ ಹಾಗೂ ಅವರ ಪತಿ, ಸಿಂಧು ಹಾಗೂ ಅವರ ಪತಿ ಸೇರಿ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಬಳಿಕ ಆರೋಪಿಗಳನ್ನು ಠಾಣೆಗೆ ಕರೆತಂದು ಹೇಳಿಕೆ ದಾಖಲಿಸಿ ಕೊಂಡು, ಠಾಣಾ ಜಾಮೀನು ನೀಡಿ ಕಳುಹಿಸಲಾಗಿದೆ. ಗುರುರಾಜ ಲೇಔಟ್ನ 6ನೇ ಕ್ರಾಸ್ನಲ್ಲಿ ನಾಲ್ಕು ಬೀದಿ ನಾಯಿಗಳಿಗೆ ಕಳೆದ 10 ವರ್ಷಗಳಿಂದ ನಿತ್ಯ ರಾತ್ರಿ ಊಟ ಹಾಕಲು ಹೋಗುತ್ತಿದ್ದೆ. ನ.5ರಂದು ನಾಯಿಗಳಿಗೆ ಊಟ ಹಾಕಲು ಹೋದಾಗ, ವ್ಯಕ್ತಿಯೊಬ್ಬ ಬೈಕ್ ಕೀ ಕಸಿದುಕೊಂಡು ನಿಂದಿಸಿ, ಮೊಬೈಲ್ ಕಸಿದು ಕೊಂಡಿದ್ದಾರೆ ಎಂದು ಆ್ಯನಿ ದೂರಿನಲ್ಲಿ ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೆ, ಸ್ಥಳದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಸ್ಟಿಕ್ ತೆಗೆದುಕೊಂಡು ತನ್ನ ಮೇಲೆ ಹಲ್ಲೆ ನಡೆಸಲು ಆರೋಪಿಗಳು ಮುಂದಾಗಿದ್ದರು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.