Kaup ಒಳಚರಂಡಿ ಸಮಸ್ಯೆ ಪರಿಹಾರಕ್ಕೆ ವಿಶೇಷ ಸಭೆ

ಪುರಸಭೆ ಸಾಮಾನ್ಯ ಸಭೆಯಲ್ಲಿ ಉದಯವಾಣಿ ಸುದಿನ ವರದಿ ಪ್ರತಿಧ್ವನಿ; ಪರಿಹಾರದ ವೇದಿಕೆ ಸಿದ್ಧಪಡಿಸಲು ಸೂಚನೆ; ಹಣದ ಕೊರತೆಯಿಲ್ಲ, ಜಾಗದ ಕೊರತೆ ಮಾತ್ರ; ಜನರ ತಪ್ಪು ತಿಳಿವಳಿಕೆ ಸರಿಪಡಿಸಿ; ರಾಜಕೀಯ ಬೇಡ; ಶಾಸಕ ಗುರ್ಮೆ

Team Udayavani, Nov 8, 2024, 3:43 PM IST

10

ಕಾಪು: ಕಾಪು ಪಟ್ಟಣವನ್ನು ಕಾಡುತ್ತಿರುವ ಕೊಳಚೆ ನೀರಿನ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಒಳಚರಂಡಿ ಯೋಜನೆಯ ಅನುಷ್ಠಾನದ ಕುರಿತು ಚರ್ಚಿಸುವುದಕ್ಕಾಗಿ ವಿಶೇಷ ಸಭೆ ಕರೆಯಲು ಗುರುವಾರ ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು.

ಪುರಸಭೆಯಾಗಿ, ತಾಲೂಕು ಕೇಂದ್ರವಾಗಿ ಮೇಲ್ದರ್ಜೆಗೇರಿರುವ ಕಾಪು ಪೇಟೆಯಲ್ಲಿ ಒಳಚರಂಡಿ ಯೋಜನೆಯ ಘಟಕ ಮತ್ತು ಎಸ್‌ಟಿಪಿ / ಯುಜಿಡಿ ಸೌಲಭ್ಯಗಳಿಲ್ಲದೇ ಪೇಟೆ ಮತ್ತು ಸುತ್ತಮುತ್ತಲಿನ ತ್ಯಾಜ್ಯ ಮತ್ತು ಮಲಿನ ನೀರು ಬೀಡುಬದಿ, ಕಲ್ಯ ಪರಿಸರ, ಭಾರತ್‌ ನಗರ ಸಹಿತ ವಿವಿಧ ಕೃಷಿ ಪ್ರದೇಶ ಮತ್ತು ಜನವಸತಿ ಪ್ರದೇಶಗಳಿಗೆ ಹರಿದು ಹೋಗುತ್ತಿದೆ. ಪೇಟೆಗೆ ಒಳಚರಂಡಿ ವ್ಯವಸ್ಥೆ ಬೇಕು ಎಂಬ ಬಗ್ಗೆ ಉದಯವಾಣಿ ಸುದಿನದಲ್ಲಿ ವಿಶೇಷ ಸರಣಿ ಪ್ರಕಟವಾಗಿತ್ತು. ಇದರಲ್ಲಿ ಎಲ್ಲಿ ಮತ್ತು ಹೇಗೆ ಎಸ್‌ಟಿಪಿ ಸ್ಥಾಪಿಸಬಹುದು ಎಂಬ ಬಗ್ಗೆಯೂ ಸಲಹೆಗಳನ್ನು ನೀಡಲಾಗಿತ್ತು. ಈ ವರದಿಗಳು ಗುರುವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲೂ ಪ್ರತಿಧ್ವನಿಸಿದವು.

ನಾಮನಿರ್ದೇಶಿತ ಸದಸ್ಯ ಅಮೀರ್‌ ಮೊಹಮ್ಮದ್‌ ಮಾತನಾಡಿ, ಕೊಳಚೆ ನೀರಿನ ನಿರ್ವಹಣೆಯಾಗದೇ ಜನರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಉದಯವಾಣಿಯಲ್ಲಿ ವಿಶೇಷ ಸರಣಿ ಪ್ರಕಟವಾಗಿದೆ. ಕೊಳಚೆ ಸಮಸ್ಯೆ ನಿವಾರಣೆಗೆ ಅನುದಾನದ ಕೊರತೆಯಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇಲ್ಲಿ ನಾವು ರಾಜಕೀಯ ಪ್ರೇರಿತ ವಿರೋಧ ಮಾಡುವುದು ಬೇಡ. ಎಲ್ಲರೂ ಒಂದಾಗಿ ವಿಶೇಷ ಆಸಕ್ತಿ ವಹಿಸಿ, ಕ್ರಮ ತೆಗೆದುಕೊಳ್ಳಬೇಕಿದೆ. ಶಾಸಕರು ಕೂಡಾ ಈ ವಿಚಾರದಲ್ಲಿ ಮುತುವರ್ಜಿ ವಹಿಸಬೇಕಿದೆ ಎಂದರು

ಸದಸ್ಯ ಅರುಣ್‌ ಶೆಟ್ಟಿ ಪಾದೂರು ಮಾತನಾಡಿ, ಕೊಳಚೆ ನೀರಿನ ನಿರ್ವಹಣೆ ಮತ್ತು ಎಸ್‌ಟಿಪಿ ರಚನೆ ನಮ್ಮೆಲ್ಲರ ಕರ್ತವ್ಯ. ಈ ವಿಚಾರದಲ್ಲಿ ನಾವು ರಾಜಕೀಯ ಬಿಟ್ಟು ಒಂದಾಗಿ ಯೋಚಿಸಬೇಕು. ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಜಾಗದ ಕೊರತೆಯಿದೆ. ಈಗಿನ ತಾಂತ್ರಿಕತೆಯನ್ನು ಬಳಸಿಕೊಂಡು ಅತ್ಯಾಧುನಿಕ ಮಾದರಿಯಲ್ಲಿ ಎಸ್‌ಟಿಪಿ ಘಟಕ ನಿರ್ಮಿಸಬಹುದಾಗಿದೆ. ಘಟಕ ಸ್ಥಾಪನೆಗೆ ಪುರಸಭೆ ಸದಸ್ಯರಿಂದಲೇ ವಿರೋಧ ವ್ಯಕ್ತವಾಗಿತ್ತು. ಜನರ ವಿರೋಧಕ್ಕೂ ಮೊದಲು ನಾವು ಈ ಬಗ್ಗೆ ಚರ್ಚೆ ನಡೆಸಬೇಕಿದೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶುದ್ಧೀಕರಣ ಘಟಕಕ್ಕೆ ಜಾಗ ಗೊತ್ತುಪಡಿಸೋಣ ಎಂದರು.

ಸದಸ್ಯ ಅನಿಲ್‌ ಕುಮಾರ್‌ ಮಾತನಾಡಿ, ಉದಯವಾಣಿಯಲ್ಲಿ ಕೊಳಚೆ ನೀರಿನಿಂದ ಆಗುತ್ತಿರುವ ಸಮಸ್ಯೆಗಳು ಮಾತ್ರವಲ್ಲ, ಅದನ್ನು ಬಗೆಹರಿಸಬಹುದಾದ ಪರಿಹಾರ ಮಾರ್ಗಗಳ ಬಗ್ಗೆಯೂ ಸಲಹೆ ನೀಡಿದ್ದಾರೆ. ಈ ಬಗ್ಗೆ ಪುರಸಭೆ ಸದಸ್ಯರೆಲ್ಲರೂ ಏಕಮನಸ್ಸಿನಿಂದ ಒಂದಾಗಿ ನಿರ್ಧಾರ ತೆಗೆದುಕೋಳ್ಳುವ ಅಗತ್ಯವಿದೆ ಎಂದರು.

ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಉಪಾಧ್ಯಕ್ಷೆ ಸರಿತಾ ಶಿವಾನಂದ್‌ ಉಪಸ್ಥಿತರಿದ್ದರು.

ಚುನಾವಣೆ, ರಾಜಕೀಯ ಬಿಟ್ಟು ಎಲ್ಲರೂ ಸೇರಿ ಜಾಗ ಗುರುತಿಸಿ: ಗುರ್ಮೆ ಸಲಹೆ
ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಮಾತನಾಡಿ, ನಮ್ಮ ಮನೆಯಂಗಳದಿಂದ ಕೊಳಚೆ ನೀರು ಹೋಗಬೇಕು ಎನ್ನುವುದು ಬೇಡಿಕೆ. ಇಲ್ಲಿನ ಮೂಲ ಸಮಸ್ಯೆಯೆಂದರೆ ಜಾಗದ ಕೊರತೆ. ಈ ವಿಚಾರದಲ್ಲಿ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ? ಎಂಬ ಪ್ರಶ್ನೆ ಉದ್ಭವಿಸಿದೆ. ಪುರಸಭೆ ಸದಸ್ಯರೆಲ್ಲರೂ ಜತೆ ಸೇರಿ ಒಂದು ನಿರ್ದಿಷ್ಟ ಜಾಗವನ್ನು ಗೊತ್ತುಪಡಿಸಿ, ಅದನ್ನು ನಿರ್ಣಯಿಸಬೇಕಿದೆ. ಜಾಗ ಹುಡುಕಿ, ನನ್ನ ಬಳಿಗೆ ಬನ್ನಿ. ನಾವೆಲ್ಲರೂ ಜತೆ ಸೇರಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಸ್‌ಟಿಪಿ ಘಟಕ ನಿರ್ಮಾಣ ಮಾಡೋಣ. ಚುನಾವಣೆ, ರಾಜಕೀಯ ಇವೆಲ್ಲವನ್ನೂ ಬದಿಗಿಟ್ಟು ಈ ಬಗ್ಗೆ ನಾವು ಯೋಚಿಸಬೇಕಿದೆ ಎಂದರು.

ಕೊಳಚೆ ನೀರು ಶುದ್ದೀಕರಣ ಘಟಕ ಸ್ಥಾಪಿಸಿ, ಅದನ್ನು ಮರು ಬಳಕೆಗೆ ಯೋಗ್ಯವನ್ನಾಗಿಸಿ ಕೊಳ್ಳಬಹುದಾಗಿದೆ. ಪ್ರತೀ ಪುರಸಭೆ ವ್ಯಾಪ್ತಿಯಲ್ಲಿಯೂ ಎಸ್‌ಟಿಪಿ ಘಟಕ ನಿರ್ಮಾಣದ ಬಗ್ಗೆ ರಾಷ್ಟ್ರೀಯ ಹಸಿರು ಪೀಠ ಕೂಡಾ ಈ ಬಗ್ಗೆ ಸೂಚನೆ ನೀಡಿದೆ. ಎಸ್‌ಟಿಪಿ ಘಟಕಗಳು ಇಲ್ಲದಿರುವ ಪುರಸಭೆಗೆ ಸರಕಾರದ ಅನುದಾನ ಕೂಡಾ ಕಡಿತವಾಗುತ್ತದೆ. ಮುಂದೆ ಇದನ್ನು ಸರಿಪಡಿಸಲು ಕಷ್ಟ ಪಡಬೇಕಾಗುತ್ತದೆ. ಹಾಗಾಗಿ ಸದಸ್ಯರೆಲ್ಲರೂ ಜತೆಗೂಡಿ ಒಂದೆರಡು ಜಾಗವನ್ನು ಗುರುತಿಸುವ ಪ್ರಯತ್ನ ನಡೆಸಬೇಕು. ಈ ವಿಚಾರದಲ್ಲಿ ಚರ್ಚಿಸಲು ತಹಶೀಲ್ದಾರ್‌, ಎಸಿ, ಡಿಸಿ ಅವರ ಜತೆಗೂ ವಿಶೇಷ ಸಭೆ ನಡೆಸಲು ಸಿದ್ಧನಿದ್ದೇನೆ ಎಂದರು.

ಅನುದಾನ ಈಗಾಗಲೇ ಮೀಸಲಿದೆ
ಎಸ್‌ಟಿಪಿ ರಚನೆಗೆ ಅನುದಾನದ ಕೊರತೆಯಿಲ್ಲ. ಆದರೆ ಜಾಗದ ಕೊರತೆಯಿದೆ. ಆದರೆ ಪುರಸಭೆ ಹೆಸರಿನಲ್ಲಿ ಸರಕಾರಿ ಜಾಗವಿಲ್ಲ. ಯಾವುದಾರರೂ ಸರಕಾರಿ ಜಾಗ, ಕಂದಾಯ ಇಲಾಖೆಗೆ ಸಂಬಂಧಪಟ್ಟ ಜಾಗ ಇದೆಯೇ ಎಂದು ಗುರುತಿಸುವಂತೆ ತಹಶೀಲ್ದಾರ್‌ ಅವರಿಗೂ ಪತ್ರ ಬರೆಯಲಾಗಿದೆ. ಸದಸ್ಯರು ಖಾಸಗಿ ಜಾಗವೇನಾದರೂ ಇದ್ದರೆ ಅದನ್ನು ಒದಗಿಸಿದರೆ, ಸರಕಾರಿ ದರಪಟ್ಟಿಯಂತೆ ಖರೀದಿಸಿ ಕೊಳಚೆ ನೀರು ಶುದ್ದೀಕರಣ ಘಟಕ ಸ್ಥಾಪಿಸಬಹುದಾಗಿದೆ. ಸದಸ್ಯರು ನಮ್ಮೊಂದಿಗೆ ಪೂರ್ಣ ರೀತಿಯಲ್ಲಿ ಸಹಕರಿಸಿದರೆ ತತ್‌ಕ್ಷಣ ಈ ಬಗ್ಗೆ ಕಾರ್ಯೋನ್ಮುಖರಾಗಲು ಸಾಧ್ಯವಿದೆ ಎಂದು ಪುರಸಭೆ ಮುಖ್ಯಾಧಿಕಾರಿ ನಾಗರಾಜ್‌ ಸಿ. ಹೇಳಿದರು.

ಕಾಪು ಸಮಸ್ಯೆಗೆ ಇದು ಪರಿಹಾರ
– ಕಾಪು ಪೇಟೆಗೆ 10 ಸಾವಿರ ಲೀಟರ್‌ ಸಾಮರ್ಥ್ಯದ ಎಸ್‌ಟಿಪಿ ಸಾಕಾಗುತ್ತದೆ. ನೂತನ ಎಸ್‌ಬಿಆರ್‌ ಟೆಕ್ನಾಲಜಿ ಬಳಿಸಿದರೆ ಕೇವಲ 30-40 ಸೆಂಟ್ಸ್‌ ಜಾಗದಲ್ಲೇ ಸ್ಥಾಪಿಸಬಹುದು. ನಗರ ಮಧ್ಯದಲ್ಲಿದ್ದರೂ ಯಾವುದೇ ಸಮಸ್ಯೆ ಇರುವುದಿಲ್ಲ.
– ಪಾಂಗಾಳ ಅಥವಾ ಮಲ್ಲಾರು ಸೇತುವೆ ಬಳಿ ಜಾಗ ಬಳಸಬಹುದು.
– ಈಗಾಗಲೇ ಹತ್ತಾರು ಎಕರೆ ಕೃಷಿ ಭೂಮಿ ತ್ಯಾಜ್ಯ ನೀರಿನಿಂದ ಹಾಳಾಗಿದೆ. ಅದರಲ್ಲಿ ಒಂದು ಎಕರೆಯನ್ನು ಸರಿಯಾಗಿ ಬಳಸಿದರೆ ಉಳಿದ ಜಾಗದ ಮಾಲಿನ್ಯವನ್ನು ಕಡಿಮೆ ಮಾಡಬಹುದು.

 

ಟಾಪ್ ನ್ಯೂಸ್

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!

1-qweewqe

TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ

1-ewewqe

Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

de

Malpe ಸೀವಾಕ್‌ ಸಮುದ್ರತೀರದಲ್ಲಿ ಮೃತದೇಹ ಪತ್ತೆ

sand

Bramavara: ಬೆಣ್ಣೆಕುದ್ರು; ಮರಳು ಅಕ್ರಮ ಸಾಗಾಟ

crime

Brahmavara: ಯಡ್ತಾಡಿ; ಬೈಕ್‌ ಅಪಘಾತ

byndoor

Udupi: ಬೈಕಿಗೆ ಕಾರು ಢಿಕ್ಕಿ; ಸವಾರನಿಗೆ ಗಾಯ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

POlice

Kasaragod: ರೈಲುಗಾಡಿಗೆ ಕಲ್ಲು ತೂರಾಟ; ಪ್ರಯಾಣಿಕನಿಗೆ ಗಾಯ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

de

Malpe ಸೀವಾಕ್‌ ಸಮುದ್ರತೀರದಲ್ಲಿ ಮೃತದೇಹ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.