Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Team Udayavani, Nov 8, 2024, 4:26 PM IST
ಮುದ್ದೇಬಿಹಾಳ: ರೈತರು, ಮಠಗಳ ಆಸ್ತಿಯ ಪಹಣಿಯಲ್ಲಿ ವಕ್ಫ್ ಆಸ್ತಿ, ಕರ್ನಾಟಕ ಸರ್ಕಾರ ಎಂದು ದಾಖಲಾಗಿ ರಾಜ್ಯಾದ್ಯಂತ ವಿವಾದ ಸೃಷ್ಟಿಯಾಗಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ವಕ್ಫ್ ಸಚಿವ ಜಮೀರ್‌ಅಹ್ಮದ್ ನೇರ ಕಾರಣರಾಗಿದ್ದಾರೆ ಎಂದು ಮಾಜಿ ಶಾಸಕ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ತೀವ್ರ ವಾಗ್ಧಾಳಿ ನಡೆಸಿದ್ದಾರೆ.
ಶುಕ್ರವಾರ(ನ.8) ಇಲ್ಲಿನ ತಹಶೀಲ್ದಾರ್ ಕಚೇರಿ ಎದುರು ರೈತರು ನಡೆಸುತ್ತಿರುವ ಧರಣಿಗೆ ಬೆಂಬಲ ಸೂಚಿಸಲು ಬಂದಾಗ ಮಾತನಾಡಿದ ಅವರು, ಸಿದ್ದರಾಮಯ್ಯನವರ ಮೇಲೆ ಮುಡಾ ಹಗರಣದ ತೂಗುಗತ್ತಿ ಯಾವಾಗ ಪ್ರಾರಂಭವಾಯಿತೋ ಆವಾಗಿನಿಂದ ಅವರಿಗೆ ಬುದ್ದಿಭ್ರಮಣೆ ಆದಂತೆ ಕಾಣುತ್ತಿದೆ. ಅವರು ತೆಗೆದುಕೊಳ್ಳುವ ತೀರ್ಮಾನಗಳು ಆಶ್ಚರ್ಯ ಉಂಟು ಮಾಡುತ್ತಿವೆ. ಹಿಂದಿದ್ದ ಸಿದ್ದರಾಮಯ್ಯ ಇವತ್ತು ಉಳಿದಿಲ್ಲ ಎಂದರು.
ಸಿದ್ದರಾಮಯ್ಯ ಯಾವತ್ತು ಮುಡಾ ಹಗರಣದಲ್ಲಿ ಸಿಕ್ಕಿಹಾಕಿಕೊಂಡರೋ, ಯಾವತ್ತು ಬೆಂಗಳೂರಿನಿAದ ಮೈಸೂರುವರೆಗೆ ಪಾದಯಾತ್ರೆ ಪ್ರಾರಂಭವಾಯಿತೋ, ಯಾವತ್ತು ಜನಪ್ರತಿನಿಧಿಗಳ ನ್ಯಾಯಾಲಯದಿಂದ ಅವರ ವಿರುದ್ಧ ತೀರ್ಪು ಬಂತೋ ಆವತ್ತಿನಿಂದಲೇ ದ್ವೇಷದ ರಾಜಕಾರಣ ಪ್ರಾರಂಭಿಸಿದ್ದಾರೆ ಎಂದ ಅವರು, ರಾಜಕೀಯವಾಗಿ ಯಾರ ಮೇಲೆ ದ್ವೇಷದ ರಾಜಕಾರಣ ಮಾಡಿದರೂ ಎದುರಿಸುವ ಶಕ್ತಿ ಇರುತ್ತದೆ. ಆದರೆ ರೈತರ ಮೇಲೆ ಮಾಡಬಾರದು ಎಂದರು.
ಜಮೀರಅಹ್ಮದ್ ವಕ್ಫ್ ಬೋರ್ಡನ ಅಧಿಕಾರ ಹೊಂದಿರುವ ಮಂತ್ರಿ. ಯಾವತ್ತು ವಿಜಯಪುರಕ್ಕೆ ಬಂದು ವಕ್ಫ್ನ ಮೀಟಿಂಗ್ ಮಾಡಿದರೋ ಆವತ್ತೇ ಜಿಲ್ಲಾಧಿಕಾರಿಗೆ ಸೂಚಿಸಿ ಮುಖ್ಯಮಂತ್ರಿ ಆದೇಶ ಇದೆ. ರೈತರ ಆಸ್ತಿಗಳೇ ಇರಲಿ, ಮಠಗಳೇ ಇರಲಿ, ದೇವಸ್ಥಾನಗಳೇ ಇರಲಿ, ಶಾಲೆಗಳೇ ಇರಲಿ ಮುಲಾಜಿಲ್ಲದೆ ನೀವು ವಕ್ಫ್ ಬೋರ್ಡ, ಕರ್ನಾಟಕ ಸರ್ಕಾರ ಎಂದು ಎಂಟ್ರಿ ಮಾಡಿ ಎಲ್ಲ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆದೇಶ ಮಾಡಿದ್ದು ಷಡ್ಯಂತ್ರಕ್ಕೆ ಕನ್ನಡಿ ಹಿಡಿದಂತಿದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ರಚಿಸಿರುವ ಸಂಸದ ಗೋವಿಂದ ಕಾರಜೋಳ ನೇತೃತ್ವದ ಸತ್ಯಶೋಧನಾ ಸಮಿತಿ ವಿಜಯಪುರ ಡಿಸಿಯನ್ನು ಭೇಟಿ ಮಾಡಿದ್ದಾಗ ಆ ಡಿಸಿಯೇ ಮಂತ್ರಿಗಳ ಆದೇಶದ ಪ್ರತಿ ಕೊಟ್ಟಿದ್ದಾರೆ. ಇದನ್ನು ಜಾರಿಗೊಳಿಸದಿದ್ದರೆ ನಿಮ್ಮ ಮೇಲೆ ಕ್ರಮ ಜರುಗಿಸ್ತೇವೆ ಎಂದು ಬೆದರಿಸಿದ್ದಾರೆ. ಹೀಗಾಗಿ ಅಧಿಕಾರಿಗಳು ಈ ಕೆಲಸ ಮಾಡಿದ್ದಾರೆ ಎಂದರು.
ಸಿದ್ದರಾಮಯ್ಯನವರೇ ಇದನ್ನು ಸಚಿವರ ಮೂಲಕ ಮಾಡಿಸಿದ್ದಾರೆ. ಕೇವಲ ಎರಡೇ ತಿಂಗಳಲ್ಲಿ ರಾಜ್ಯದ ಶೇ.38 ರೈತರ ಆಸ್ತಿ ವಕ್ಫ್ಗೆ ಎಂಟ್ರಿ ಆಗಿದೆ. ಯಾವಾಗ ಬಿಜೆಪಿ ರಾಜ್ಯಾದ್ಯಂತ ಹೋರಾಟ ಪ್ರಾರಂಭಿಸಿತೋ ಆವಾಗ ಸಿದ್ದರಾಮಯ್ಯ ಎಚ್ಚರಗೊಂಡು ನಾನು ಹಾಗೇ ಹೇಳಿಲ್ಲ. ರೈತರ ಹೊಲಗಳಲ್ಲಿ ವಕ್ಫ್ ಎಂಟ್ರಿ ಆಗಿದ್ದರೆ ರದ್ದು ಮಾಡಲು ಹೇಳುತ್ತೇನೆ ಎಂದಿದ್ದರು. ಹೀಗಿದ್ದರೂ ಜಿಲ್ಲಾಧಿಕಾರಿ, ತಹಶೀಲ್ದಾರ್ ಏನೂ ಮಾಡುತ್ತಿಲ್ಲ ಎಂದು ಹರಿಹಾಯ್ದರು.
ರಾಜ್ಯದಲ್ಲಿರುವುದು ಜನವಿರೋಧಿ ಸರ್ಕಾರ. ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಂಬಿಕಾ ಪಾಲ್ ಅವರು ರೈತರ ಮನವಿ ಆಲಿಸಿ ದಾಖಲೆ ಸಮೇತ ದೆಹಲಿಗೆ ಹೋಗಿದ್ದು ಸಂಸತ್ತಿನಲ್ಲಿ ವರದಿ ಮಂಡಿಸಿ ರೈತರಿಗೆ ನ್ಯಾಯ ಕೊಡಿಸಲಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವುದು ನಿಶ್ಚಿತ. ರೈತರು ಹೆದರುವ ಅವಶ್ಯಕತೆ ಇಲ್ಲ ಎಂದು ರೈತರಿಗೆ ಧೈರ್ಯ ತುಂಬಿದರು.
ಕುಂಟೋಜಿಯ ರೈತ ಮಾಜಿ ಸೈನಿಕ ನಾಗಲಿಂಗಯ್ಯ ಮಠ, ಜಿಪಂ ಮಾಜಿ ಸದಸ್ಯ ಮುನ್ನಾಧಣಿ ನಾಡಗೌಡ ಮಾತನಾಡಿದರು. ಕುಂಟೋಜಿ ಗ್ರಾಮದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Kasaragod: ಫ್ಯಾಶನ್ ಗೋಲ್ಡ್ ವಂಚನೆ ಪ್ರಕರಣ: ಪೂಕೋಯ ತಂಙಳ್ ಮತ್ತೆ ಬಂಧನ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.