Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಮಗುಚಿ ಬಿದ್ದ ಕ್ರೇನ್; ತಪ್ಪಿದ ಅನಾಹುತ
Team Udayavani, Nov 8, 2024, 9:20 PM IST
ಉಡುಪಿ: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ವೇಳೆ ಗರ್ಡರ್ ಎಳೆಯುತ್ತಿದ್ದ ಕೇನ್ ಮಗುಚಿ ಬಿದ್ದ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ಸ್ಟೀಲ್ ಬ್ರಿಡ್ಜ್ ನಿರ್ಮಾಣ ಸಂಬಂಧ ಗರ್ಡರ್‌ಗಳನ್ನು ಜೋಡಿಸುವ ಹಾಗೂ ವೆಲ್ಡಿಂಗ್ ಕಾರ್ಯ ಹಗಲಿರುಳು ನಡೆಯುತ್ತಿದೆ. ಟನ್‌ಗಟ್ಟಲೆ ಭಾರ ಇರುವ ಗರ್ಡರ್‌ಗಳನ್ನು ಸುಲಭದಲ್ಲಿ ಎತ್ತಲು ಸಾಧ್ಯವಿಲ್ಲ. ಇದನ್ನು ಎತ್ತಲಿಕ್ಕಾಗಿಯೇ ಎರಡು ಕೇನ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಗುರುವಾರ ರಾತ್ರಿ ಗರ್ಡರ್ ಎತ್ತುವ ಸಂದರ್ಭದಲ್ಲಿ ಒಂದು ಕ್ರೇನ್ ಭಾರ ತಡೆಯಲಾದರೆ ರೋಪ್ ತುಂಡಾಗಿ ರಸ್ತೆ ಮಧ್ಯದಲ್ಲಿಯೇ ಮಗುಚಿ ಬಿದ್ದಿದೆ. ಈ ವೇಳೆ ಕಾರ್ಮಿಕರು ಯಾರೂ ಸಮೀಪ ಇಲ್ಲದೇ ಇದ್ದುದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ತತ್‌ಕ್ಷಣವೇ ಅಲ್ಲೇ ಸಮೀಪವಿದ್ದ ಇನ್ನೊಂದು ಕ್ರೇನ್ ಮೂಲಕ ಬಿದ್ದಿದ್ದ ಕೇನ್ ಅನ್ನು ಎತ್ತಲಾಯಿತು. ಅನಂತರ ಕಾಮಗಾರಿ ಪ್ರಕ್ರಿಯೆ ಮುಂದುವರಿಯಿತು.
ರಾತ್ರಿ ವೇಳೆ ಆಗಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಹಗಲು ವೇಳೆ ಇಂತಹ ಕಾಮಗಾರಿ ನಡೆಸುವಾಗ ಎಚ್ಚರ ವಹಿಸುವುದು ಅತೀ ಅವಶ್ಯಕ. ವಾಹನ ಸವಾರರು, ಪಾದಚಾರಿಗಳು ಹೆಚ್ಚಾಗಿ ಈ ರಸ್ತೆಯಲ್ಲಿ ಸಂಚಾರ ಮಾಡುತ್ತಿರುತ್ತಾರೆ. ಬದಿಯಲ್ಲೇ ಪೆಟ್ರೋಲ್ ಬಂಕ್ ಕೂಡ ಇರುವುದರಿಂದ ಹೆಚ್ಚು ಎಚ್ಚರ ವಹಿಸಬೇಕಾಗುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಅರ್ಹರಿಗಷ್ಟೇ ಬಿಪಿಎಲ್ ಕಾರ್ಡ್: ಸಿಎಂ ಸಿದ್ದರಾಮಯ್ಯ
Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ
Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್
Eden Gardens; ‘ಬಿ’ ಬ್ಲಾಕ್‌ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
Karnataka Lokayukta: ನಾಲ್ವರಿಗೆ ಲೋಕಾ ಶಾಕ್: 27 ಕೋಟಿ ರೂ. ಆಸ್ತಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.