Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
ಗ್ರಾಹಕರಿಗೆ ಖುಷಿ, ಮೀನುಗಾರರಿಗೆ ನಷ್ಟ
Team Udayavani, Nov 9, 2024, 7:20 AM IST
ಮಂಗಳೂರು: ತಿಂಗಳ ಹಿಂದೆ ಕಿಲೋಗೆ 200-250 ರೂ. ದರವಿದ್ದ ಬಂಗುಡೆ ಮೀನು ಈಗ ಬಹಳಷ್ಟು ಅಗ್ಗ ವಾಗಿದ್ದು, 100-150 ರೂ.ಗಳಲ್ಲಿ ದೊರೆಯುತ್ತಿದೆ. ಕೆಲವು ದಿನಗಳ ಹಿಂದೆ ಮಂಗಳೂರಿನ ಕೇಂದ್ರ ಮೀನು ಮಾರುಕಟ್ಟೆಯಲ್ಲಿ 80 ರೂ.ಗೆ ಮಾರಾಟ ಆಗಿರುವುದೂ ಇದೆ! ವಿದೇಶಗಳಲ್ಲಿ ಬಂಗುಡೆ ಮೀನಿಗೆ ಬೇಡಿಕೆ ಕಡಿಮೆಯಾಗಿ ಸ್ಥಳೀಯ ಮಾರುಕಟ್ಟೆಗೆ ಹೆಚ್ಚು ಪ್ರಮಾಣದಲ್ಲಿ ಪೂರೈಕೆ ಆಗುತ್ತಿರುವುದು ಇದಕ್ಕೆ ಮುಖ್ಯ ಕಾರಣ.
ಹೌದು, ಮೀನುಪ್ರಿಯರ ನೆಚ್ಚಿನ ಬಂಗುಡೆ ಮೀನು ಪ್ರಸ್ತುತ ಮಾರುಕಟ್ಟೆಯಲ್ಲಿ ಬಹಳ ಕಡಿಮೆ ದರಕ್ಕೆ ಲಭ್ಯವಾಗುತ್ತಿದೆ. ಹೆದ್ದಾರಿ ಬದಿ ಅಲ್ಲಲ್ಲಿ ವ್ಯಾಪಾರಿಗಳು ಬಂಗುಡೆಯನ್ನೇ ಮಾರಾಟ ಮಾಡು ತ್ತಿರುವ ದೃಶ್ಯಗಳು ಕಂಡುಬರುತ್ತಿವೆ.
ದೊಡ್ಡ ಗಾತ್ರದ ಬಂಗುಡೆಗಳೂ ಮಾರುಕಟ್ಟೆಗೆ ಬಂದಿವೆ.ವಿದೇಶಿ ಮಾರುಕಟ್ಟೆಯಲ್ಲಿ ಬೇಡಿಕೆ ಇಳಿಕೆ: ಪ್ರಸ್ತುತ ವಿದೇಶಿ ಮಾರುಕಟ್ಟೆಯಲ್ಲಿ ಇತರ ತಳಿಯ ಮೀನಿಗೆ ಬೇಡಿಕೆ ಹೆಚ್ಚಿದ್ದು, ಬಂಗುಡೆಗೆ ಕೆಲವು ಸಮಯದಿಂದ ಬೇಡಿಕೆ ಕಡಿಮೆಯಾಗಿದೆ. ಇದರಿಂದ ಮೀನು ರಫ್ತು ಸಂಸ್ಥೆಗಳು ಬಂಗುಡೆ ನಿರ್ಯಾತ ಪ್ರಮಾಣವನ್ನು ಕಡಿಮೆ ಮಾಡಿವೆ. ಹಾಗಾಗಿ ಬಂಗುಡೆ ಮೀನುಗಳು ಸ್ಥಳೀಯ ಮಾರುಕಟ್ಟೆಗೇ ಬರುತ್ತಿದೆ ಎನ್ನುತ್ತಾರೆ ಮೀನುಗಾರರು.
ಮೀನುಗಾರರಿಗೆ ನಷ್ಟ: ಕರಾವಳಿಯ ಮೀನುಗಾರರಿಗೆ ಸಾಮಾನ್ಯವಾಗಿ ಬಂಗುಡೆ ಮೀನು ಹೆಚ್ಚು ಸಿಗುತ್ತದೆ. ಇದಕ್ಕೆ ಉತ್ತಮ ಧಾರಣೆ ಇದ್ದರಷ್ಟೇ ಅನುಕೂಲ. ಧಾರಣೆ ಇಲ್ಲದೆ ಬೋಟ್ ಮಾಲಕರಿಗೆ ನಷ್ಟವಾಗುತ್ತಿದೆ. ಡೀಸೆಲ್‌ಗೆ ಹಾಕಿದ ಹಣವೂ ವಾಪಸು ಬರುತ್ತಿಲ್ಲ ಎನ್ನುತ್ತಾರೆ ಮೀನುಗಾರ ಮುಖಂಡ, ಪರ್ಸಿನ್ ಮೀನುಗಾರರ ಸಂಘದ ಮಾಜಿ ಅಧ್ಯಕ್ಷ ಮೋಹನ್ ಬೆಂಗ್ರೆ.
ಬಂಗುಡೆಗಳಿಗೆ ಅವುಗಳ ಗಾತ್ರ ಮತ್ತು ಗುಣಮಟ್ಟವನ್ನು ಅನುಸರಿಸಿ ಬೆಲೆ ಇರುತ್ತದೆ. ಪಶ್ಚಿಮ ಕರಾವಳಿಯಲ್ಲಿ ಸಿಕ್ಕಿದ
ಬಂಗುಡೆಗಳಿಗೆ ಮುಖ್ಯವಾಗಿ ಚೀನ ಅತೀ ದೊಡ್ಡ ಮಾರುಕಟ್ಟೆ ಯಾಗಿದೆ. ಉಳಿದಂತೆ ಬ್ಯಾಂಕಾಕ್, ಥಾçಲಂಡ್, ವಿಯೆಟ್ನಾಂ ಮೊದಲಾದೆಡೆಗೆ ರಫ್ತಾಗುತ್ತದೆ ಎನ್ನುತ್ತಾರೆ ಮೀನುಗಾರರು.
ಇತರ ಮೀನುಗಳ ದರದಲ್ಲಿ ವ್ಯತ್ಯಾಸವಿಲ್ಲ
ಬಂಗುಡೆ ಬಿಟ್ಟರೆ ಇತರ ಮೀನುಗಳ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಬೂತಾಯಿಗೆ 150 ರೂ. ದರವಿದ್ದರೆ ಮುರು, ಕಲ್ಲೂರು 200 ರೂ. ವರೆಗೆ; ಅಂಜಲ್ 800 ರೂ., ಮಾಂಜಿ 550 -650 ರೂ. ಆಸುಪಾಸಿನಲ್ಲಿದೆ.
ಹೊಟೇಲ್‌ನಲ್ಲಿ ಇಳಿಯದ ದರ
ಮಾರುಕಟ್ಟೆಯಲ್ಲಿ ಬಂಗುಡೆ ಮೀನಿನ ದರ ಕಡಿಮೆ ಯಾದರೂ ಹೊಟೇಲ್ ದರದಲ್ಲಿ ಇಳಿಕೆಯಾಗಿ ಲ್ಲ. ಒಂದು ಬಂಗುಡೆಗೆ 150-200 ರೂ. ದರದಲ್ಲಿಯೇ ಮಾರಾಟ ನಡೆಯುತ್ತಿದೆ. ಇದರಿಂದ ಹೊಟೇಲ್ ಮೀನೂಟ ಮಾಡುವವರಿಗೆ ಬಂಗುಡೆ ದುಬಾರಿಯೇ ಆಗಿದೆ!
ಸರಕಾರ ಬೆಂಬಲ ಬೆಲೆ ಘೋಷಿಸಲಿ
ಕೆಲವು ಸಮಯದಿಂದ ಬಂಗುಡೆ ಮೀನಿಗೆ ನಿರೀಕ್ಷಿತ ಬೆಲೆ ಸಿಗುತ್ತಿಲ್ಲ. ಇತರ ಉತ್ತಮ ಜಾತಿಯ ಮೀನುಗಳೂ ಇಲ್ಲಿನ ಮೀನುಗಾರರಿಗೆ ಸಿಗುತ್ತಿಲ್ಲ. ಇದರ ನೇರ ಪರಿಣಾಮ ಬೀಳುವುದು ಮೀನುಗಾರರ ಮೇಲೆ. ಆದ್ದರಿಂದ ಇಂತಹ ಸಂದರ್ಭದಲ್ಲಿ ಸರಕಾರ ಮೀನುಗಾರರ ನೆರವಿಗೆ ಬರಬೇಕು. ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು ಎಂದು ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಚೇತನ್ ಬೆಂಗ್ರೆ ಆಗ್ರಹಿಸಿದ್ದಾರೆ.
-ಭರತ್ ಶೆಟ್ಟಿಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.