ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ
ಕೇರಳದ ಚಿಪ್ಸ್, ಹಲ್ವಾ, ಮುರುಕು, ಒಣಹಣ್ಣು ಸೇರಿ ವಿವಿಧ ಸಿಹಿತಿಂಡಿಗಳಲ್ಲಿ ಹಾನಿಕಾರಕ ರಾಸಾಯನಿಕ ಪತ್ತೆ
Team Udayavani, Nov 9, 2024, 7:10 AM IST
ಬೆಂಗಳೂರು: ಆಹಾರ ಸುರಕ್ಷೆ ಹಾಗೂ ಗುಣಮಟ್ಟದ ಇಲಾಖೆಯು ಕೇರಳದಲ್ಲಿ ತಯಾರಿಸಿ, ಕರ್ನಾಟಕದ ಗಡಿ ಜಿಲ್ಲೆಯಲ್ಲಿ ಮಾರಾಟ ಮಾಡುತ್ತಿದ್ದ 90 ಬಗೆಯ ಕುರುಕಲು ತಿಂಡಿಗಳ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, ಈ ಪೈಕಿ 31 ಮಾದರಿಗಳು ಸೇವಿಸಲು ಅಸುರಕ್ಷಿತ ಎನ್ನುವುದು ದೃಢವಾಗಿದೆ.
ಆಹಾರ ಸುರಕ್ಷೆ ಮತ್ತು ಗುಣಮಟ್ಟ ಇಲಾಖೆಯು 3 ತಿಂಗಳುಗಳಿಂದ ಕೇರಳ ರಾಜ್ಯದಲ್ಲಿ ತಯಾರಿಸಲ್ಪಟ್ಟು ಕೊಡಗು ಜಿಲ್ಲೆಯಲ್ಲಿ ಮಾರಾಟವಾಗುತ್ತಿದ್ದ ಖಾರ ಮಿಕ್ಸರ್, ಚಿಪ್ಸ್, ಹಲ್ವಾ, ಮುರುಕು, ಒಣ ಹಣ್ಣು ಸಹಿತ ವಿವಿಧ ಸಿಹಿ ತಿಂಡಿಗಳ ಸುಮಾರು 90 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿತ್ತು.
ಅವುಗಳಲ್ಲಿ ಸುಮಾರು 31 ಮಾದರಿಗಳು ಅಸುರಕ್ಷಿತ ಎನ್ನುವುದು ದೃಢವಾ ಗಿದೆ. ಇದರಲ್ಲಿ ಸನ್‌ಸೆಟ್ ಯೆಲ್ಲೋ, ಅಲ್ಲೂರ ರೆಡ್, ಅಜೋರುಬಿನ್, ಟಾಟ್ರಾìಜಿನ್ ಮತ್ತಿತರ ಕೃತಕ ಬಣ್ಣಗಳನ್ನು ಬಳಸಿರುವುದು ದೃಢವಾಗಿದೆ.
ಇತರ ಜಿಲ್ಲೆಗಳಿಗೂ ಸರಬರಾಜು ಶಂಕೆ
ಕೊಡಗು ಮಾತ್ರವಲ್ಲದೆ ಕಾಸರಗೋಡು, ದಕ್ಷಿಣ ಕನ್ನಡ, ಬೆಂಗಳೂರು ಸೇರಿ ಇತರ ಜಿಲ್ಲೆಗಳಿಗೂ ಕೇರಳದ ಈ ಚಿಪ್ಸ್ ಹಾಗೂ ಇತರ ಕುರುಕಲು ತಿಂಡಿ ಸರಬರಾಜು ಆಗುತ್ತಿದೆ. ಇವುಗಳ ಪರೀಕ್ಷೆ ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ. ಪ್ರಸ್ತುತ ಅಸುರಕ್ಷಿತ ಮಾದರಿಗಳಲ್ಲಿ ಪತ್ತೆಯಾದ ಅಲ್ಲೂರ ರೆಡ್ ರಾಸಾಯನಿಕ ಅಂಶ ಮನುಷ್ಯನ ದೇಹ ಸೇರಿದರೆ ಅಲ್ಸರೇಟಿವ್ ಕೊಲೈಟಿಸ್ ಮತ್ತು ಕ್ರಾನ್ಸ್ ನಂತಹ ಕರುಳಿನ ಉರಿಯೂತ ಕಾಯಿಲೆಗಳಿಗೆ ಕಾರಣವಾಗಲಿದೆ.
ಕಾನೂನು ಕ್ರಮಕ್ಕೆ ಆಗ್ರಹ
ಕೊಡಗು ಜಿಲ್ಲೆಗೆ ಸರಬರಾಜುಗೊಂಡ ಕೇರಳದ ಅಸುರಕ್ಷಿತ ಆಹಾರ ಪದಾರ್ಥಗಳ ಉತ್ಪಾದನೆ ಘಟಕಗಳ ಮೇಲೆ ಕಾನೂನಾತ್ಮಕ ಕ್ರಮ ಜರಗಿಸಲು ಆಹಾರ ಸುರಕ್ಷೆ ಮತ್ತು ಗುಣಮಟ್ಟ ಇಲಾಖೆಯ ಆಯುಕ್ತರು ಕೇರಳ ಸರಕಾರಕ್ಕೆ ಪತ್ರ ರವಾನೆ ಮಾಡಿದ್ದಾರೆ. ಆಹಾರ ಗುಣಮಟ್ಟ ಹಾಗೂ ಸುರಕ್ಷೆ ಇಲಾಖೆ ದೀಪಾವಳಿ ಸಂದರ್ಭದಲ್ಲಿ ಪರೀಕ್ಷೆಗೆ ಒಳಪಡಿಸಿದ 151 ಸಿಹಿ ತಿಂಡಿಗಳ ಮಾದರಿಗಳಲ್ಲಿ 9 ಮಾದರಿಗಳಲ್ಲಿ ಕೃತಕ ಬಣ್ಣ ಬಳಕೆಯಾಗಿದ್ದು, ಸೇವಿಸಲು ಅಸುರಕ್ಷಿತ ಎನ್ನುವುದು ವರದಿಯಾಗಿದೆ.
ಕೃತಕ ಬೆಳ್ಳುಳ್ಳಿ ಮಾರಾಟವಿಲ್ಲ!
ಚೀದದಿಂದ ಕೃತಕ ಹಾಗೂ ನಿಷೇಧಿತ ಬೆಳ್ಳುಳ್ಳಿ ರಾಜ್ಯಾದ್ಯಂತ ಮಾರಾಟವಾ ಗುತ್ತಿರುವ ಬಗ್ಗೆ ದೂರು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ 154 ಬೆಳ್ಳುಳ್ಳಿ ಮಾದರಿ ಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿದ್ದು, ಅವುಗಳಲ್ಲಿ 147 ಮಾದರಿಗಳು ಸುರಕ್ಷಿತವಾಗಿವೆ. ಉಳಿದ 7 ಮಾದರಿಗಳಲ್ಲಿ ಶಿಲೀಂಧ್ರ ಬೆಳವಣಿಯಾಗಿದ್ದು, ಕೊಳೆತಿದ್ದ ಹಿನ್ನೆಲೆಯಲ್ಲಿ ಅಸುರಕ್ಷಿತ ಎಂದು ವರದಿಯಾಗಿರುತ್ತದೆ.
ನಿಷೇಧಿತ ರಾಸಾಯನಿಕ ಬಳಕೆ
ಪ್ರಸ್ತುತ ಕೊಡಗು ಜಿಲ್ಲೆಯಲ್ಲಿ ಮಾರಾಟವಾದ ಕೇರಳದ ಆಹಾರ ಪದಾರ್ಥಗಳ ಮಾದರಿಯನ್ನು ಮಾತ್ರ ವಿಶ್ಲೇಷಣೆ ಮಾಡಲಾಗಿದೆ. ಈ ವೇಳೆ ಕೃತಕ ಬಣ್ಣ ಹಾಗೂ ನಿಷೇಧಿತ ಪದಾರ್ಥಗಳು ಬಳಕೆ ಮಾತ್ರವಲ್ಲದೆ ಹಲವಾರು ಆಹಾರ ಪದಾರ್ಥಗಳ ಪೊಟ್ಟಣಗಳ ಮೇಲೆ ಉತ್ಪಾದನೆ ದಿನಾಂಕ, ಉತ್ಪಾದಕರ ವಿವರಗಳು ಲಭ್ಯವಿಲ್ಲ. ಜತೆಗೆ ಉತ್ಪಾದನೆ ದಿನಾಂಕವನ್ನು ಮುಂಚಿತವಾಗಿ ನಮೂದಿಸಿರುವುದು ಎಫ್ಎಸ್‌ಎಸ್‌ಎಐ ನೋಂದಣಿ ಅಥವಾ ಪರವಾನಿಗೆ ಸಂಖ್ಯೆ ಇಲ್ಲದಿರುವುದು ದೃಢವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ
Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್
Karnataka Lokayukta: ನಾಲ್ವರಿಗೆ ಲೋಕಾ ಶಾಕ್: 27 ಕೋಟಿ ರೂ. ಆಸ್ತಿ ಪತ್ತೆ
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.