Parkala: ಹಿಮ್ಮುಖವಾಗಿ ಚಲಿಸಿ ಗ್ಯಾರೇಜ್ ಗೆ ನುಗ್ಗಿದ ಲಾರಿ… ಹಲವು ವಾಹನಗಳು ಜಖಂ
Team Udayavani, Nov 9, 2024, 3:59 PM IST
ಮಣಿಪಾಲ: ಗ್ರಾನೈಟ್ ತುಂಬಿದ ಲಾರಿಯೊಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿಮ್ಮುಖವಾಗಿ ಚಲಿಸಿ ಗ್ಯಾರೇಜ್ ಡಿಕ್ಕಿ ಹೊಡೆದ ಪರಿಣಾಮ ಹಲವು ದ್ವಿಚಕ್ರ ವಾಹನಗಳು ಜಖಂಗೊಂಡಿರುವ ಘಟನೆ ಶನಿವಾರ (ನ.9) ಮಧ್ಯಾಹ್ನ ಕೆಳ ಪರ್ಕಳದಲ್ಲಿ ಸಂಭವಿಸಿದೆ.
ಘಟನೆಯಿಂದ ಕೆಲಪರ್ಕಳದಲ್ಲಿ ಗಣಪತಿ ನಾಯಕ್ ಅವರ ಮಾಲಕತ್ವದ ಗ್ಯಾರೇಜ್ ನಲ್ಲಿ ನಿಲ್ಲಿಸಿದ್ದ ನಾಲ್ಕೈದು ದ್ವಿಚಕ್ರ ವಾಹನಗಳು ಜಖಂಗೊಂಡಿದೆ.
ಬೆಂಗಳೂರಿನಿಂದ ಗ್ರಾನೈಟ್ ತುಂಬಿಕೊಂಡು ಪರ್ಕಳದ ಹೆರ್ಗಾ ಕಡೆಗೆ ತೆರಳುತ್ತಿದ್ದ ಲಾರಿ ಕೆಳಪರ್ಕಳದ ಹಳೆ ಡಾಮರು ರಸ್ತೆಯ ಏರಿನ ಜಾಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹಿಮ್ಮುಖವಾಗಿ ಚಲಿಸಿ ಗ್ಯಾರೇಜ್ ಗೆ ನುಗ್ಗಿದೆ ಪರಿಣಾಮ ಹಲವು ದ್ವಿಚಕ್ರ ವಾಹನಗಳು ನುಜ್ಜುಗುಜ್ಜಾಗಿದ್ದು ಅಲ್ಲದೆ ಲಾರಿಯಲ್ಲಿದ್ದ ಗ್ರಾನೈನ್ ನೆಲಕ್ಕೆ ಬಿದ್ದಿದೆ. ಲಾರಿ ಹಿಮ್ಮುಖವಾಗಿ ಬರುತ್ತಿದ್ದಂತೆ ಗ್ಯಾರೇಜ್ ನಲ್ಲಿದ್ದವರು ಓಡಿ ತಮ್ಮ ಜೀವ ಉಳಿಸಿಕೊಂಡಿದ್ದಾರೆ.
ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದ ಕಾರಣ ಈ ಭಾಗದಲ್ಲಿ ಘನ ವಾಹನಗಳು ಅಪಘಾತಕ್ಕೆ ಒಳಗಾಗುತ್ತಿವೆ, ಇಲ್ಲಿನ ಏರು ಪ್ರದೇಶ ಹೊಂಡ ಗುಂಡಿಗಳಿಂದ ಕೂಡಿರುವುದರಿಂದ ಘನ ವಾಹನಗಳು ಹಿಮ್ಮುಖವಾಗಿ ಚಲಿಸಿ ಹೆಚ್ಚಿನ ಅವಘಡಗಳು ಈ ಹಿಂದೆಯೂ ಸಂಭವಿಸಿವೆ.
ಇದನ್ನೂ ಓದಿ: Hombale Films: ಪ್ರಭಾಸ್ ಜೊತೆ ಹೊಂಬಾಳೆ ಮೂರು ಸಿನಿಮಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕರಾವಳಿಯ ಹೆದ್ದಾರಿ ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರ ಸಚಿವರನ್ನು ಭೇಟಿಯಾದ ಸಂಸದರ ತಂಡ
Udupi: ಗೀತಾರ್ಥ ಚಿಂತನೆ-113: ತನ್ನ ದೃಷ್ಟಾಂತವನ್ನೇ ಕೊಟ್ಟ ಶ್ರೀಕೃಷ್ಣ
Manipal: ತೋಟಗಳಲ್ಲಿ ಗಾಂಜಾ ಬೆಳೆ: ನಿಗಾ ವಹಿಸಲು ಜಿಲ್ಲಾಧಿಕಾರಿ ಸೂಚನೆ
Kaup: ಜೀರ್ಣೋದ್ಧಾರ ಅತ್ಯದ್ಭುತವಾಗಿ ಕಾಣುತ್ತಿವೆ: ಕಾಳಹಸ್ತೇಂದ್ರ ಶ್ರೀ
Udupi: ನ್ಯಾಯವಾದಿಗಳು ನ್ಯಾಯಾಂಗ ಸೈನಿಕರಂತೆ ಕಾರ್ಯನಿರ್ವಹಿಸಲಿ: ನ್ಯಾ| ಬಿ. ವೀರಪ್ಪ
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್ಗಾಗಿ ಅಡಿಲೇಡ್ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
Bantwal: ತುಂಬೆ ಹೆದ್ದಾರಿಯಲ್ಲಿ ನೀರು; ಪೆರಾಜೆ ರಿಕ್ಷಾ ನಿಲ್ದಾಣಕ್ಕೆ ಹಾನಿ
ಕರಾವಳಿಯ ಹೆದ್ದಾರಿ ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರ ಸಚಿವರನ್ನು ಭೇಟಿಯಾದ ಸಂಸದರ ತಂಡ
Subramanya: ಸಿದ್ಧಗೊಳ್ಳುತ್ತಿವೆ ಬೆತ್ತದ ತೇರು
Thirthahalli: ಡಿ.7 ರಂದು 18ನೇ ವರ್ಷದ ಸುಬ್ರಹ್ಮಣ್ಯ ಷಷ್ಠಿ ದೀಪೋತ್ಸವ, ಜಾತ್ರ ಮಹೋತ್ಸವ
Gundlupete: ಟಿಪ್ಪರ್ ಹರಿದು ಕೇರಳ ಮೂಲದ ಬೈಕ್ ಸವಾರನ ಕಾಲು ನಜ್ಜುಗುಜ್ಜು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.