Game Changer Teaser: ಬಲ್ಯಾಢ್ಯರ ಮುಂದೆ ತೋಳ್ಬಲ..ಟೀಸರ್‌ನಲ್ಲಿ ಮಿಂಚಿದ ಗ್ಲೋಬಲ್ ಸ್ಟಾರ್
Team Udayavani, Nov 9, 2024, 6:32 PM IST
ಹೈದರಾಬಾದ್: ರಾಮ್ ಚರಣ್ (Ram Charan) ಅಭಿನಯದ , ಶಂಕರ್ ನಿರ್ದೇಶನದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ʼಗೇಮ್ ಚೇಂಜರ್ʼ (Game Changer) ಸಿನಿಮಾದ ಟೀಸರ್ ಶನಿವಾರ (ನ.9ರಂದು) ರಿಲೀಸ್ ಆಗಿದೆ.
ಲಕ್ನೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿನಿಮಾದ ಟೀಸರ್ ರಿಲೀಸ್ ಮಾಡಲಾಗಿದೆ. ಈ ಸಂದರ್ಭದಲ್ಲಿ ಚಿತ್ರತಂಡದ ಪ್ರಮುಖ ಭಾಗಿಯಾಗಿದ್ದರು.
ರಾಮ್ ಚರಣ್ ಅವರನ್ನು ʼಕಿಂಗ್ʼ ನಂತೆ ತೋರಿಸಲಾಗಿದೆ. ಸ್ಟೊಡೆಂಟ್ ಲೈಫ್, ಪಾಲಿಟಿಕ್ಸ್ ಹಾಗೂ ಜಮೀನುದಾರನಂತೆ ಗ್ಲೋಬಲ್ ಸ್ಟಾರ್ ವಿವಿಧ ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ರಾಜಕೀಯ ಸಮಾವೇಶ ಹಾಗೂ ಸಂಚಿನ ಸುತ್ತ ಸಿನಿಮಾದ ಕಥೆ ಸಾಗುತ್ತದೆ ಎನ್ನುವುದನ್ನು ಟೀಸರ್ ಝಲಕ್‌ನಲ್ಲಿ ತೋರಿಸಲಾಗಿದೆ.
ತಮ್ಮವರ ಉಳಿವಿಗಾಗಿ, ಉಳ್ಳವರನ್ನು ಎದುರಿಗೆ ಹಾಕಿಕೊಳ್ಳುವ ಸನ್ನಿವೇಶಗಳು ಟೀಸರ್‌ನಲ್ಲಿದೆ. ಆತ ಏನು ಮಾಡುತ್ತಾನೆ ಎನ್ನುವ ಹೀರೋಯಿಸಂ ಡೈಲಾಗ್ಸ್ ಗಳೊಂದಿಗೆ ಆ್ಯಕ್ಷನ್ ಸೀನ್ಸ್‌ಗಳನ್ನು ತೋರಿಸಲಾಗಿದೆ.
ಟೀಸರ್ ಸ್ವಲ್ಪ ಡಲ್ ರೀತಿ ಅನ್ನಿಸಿದರೂ, ರಾಮ್ ಚರಣ್ ತಮ್ಮ ಪಾತ್ರದಲ್ಲಿ ಮಿಂಚಿದ್ದಾರೆ. ಎಸ್ ಜೆ ಸೂರ್ಯ, ಕಿಯಾರ ಅವರ ಪಾತ್ರದ ಝಲಕ್ ತೋರಿಸಲಾಗಿದೆ.
ಇದೇ ವರ್ಷದ ಕ್ರಿಸ್ಮಸ್ ಹಬ್ಬಕ್ಕೆ ರಿಲೀಸ್ ಆಗಬೇಕಿದ್ದ ʼಗೇಮ್ ಚೇಂಜರ್ʼ ಮುಂದಿನ ವರ್ಷದ ಜನವರಿ 10 ರಂದು ಅದ್ದೂರಿಯಾಗಿ ತೆರೆಗೆ ಬರಲಿದೆ.
ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ, ಅಂಜಲಿ, ಸಮುದ್ರಕನಿ, ಎಸ್‌ಜೆ ಸೂರ್ಯ, ಶ್ರೀಕಾಂತ್, ಸುನಿಲ್ ಮುಂತಾದವರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನು ಮಂಜೂರು
Marco: ಕೋಟಿ ಕೋಟಿ ಗಳಿಕೆ ಕಾಣುತ್ತಿರುವ ʼಮಾರ್ಕೊʼಗೆ ಪೈರಸಿ ಕಾಟ; ಹೆಚ್ ಡಿ ಪ್ರಿಂಟ್ ಲೀಕ್
ಕೋಮಾದಲ್ಲಿದ್ದ ನನ್ನ ಮಗನ ನೆನಪಿನ ಶಕ್ತಿ ಮರಳಲು ದಳಪತಿ ವಿಜಯ್ ಕಾರಣವೆಂದ ಖ್ಯಾತ ನಟ
Mollywood: 13 ವರ್ಷದ ಬಳಿಕ ರೀ- ರಿಲೀಸ್ ಆಗಲಿದೆ ಸೂಪರ್ ಹಿಟ್ ʼಉಸ್ತಾದ್ ಹೊಟೇಲ್ʼ
Malayalam; ಹೋಟೆಲ್ ರೂಂನಲ್ಲಿ ಶ*ವವಾಗಿ ಪತ್ತೆಯಾದ ಖ್ಯಾತ ನಟ ದಿಲೀಪ್ ಶಂಕರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.