Ajekaru: ಕಾಡುಪ್ರಾಣಿ ಬೇಟೆಯಾಡಲು ಹೋದ ಆರೋಪಿಗಳ ಬಂಧನ
Team Udayavani, Nov 9, 2024, 8:08 PM IST
ಅಜೆಕಾರು: ಕೆರ್ವಾಶೆ ಗ್ರಾಮದ ನಡ್ವಾಲು ಎಂಬಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಮೀಸಲು ಅಭಯಾರಣ್ಯದಲ್ಲಿ ನಾಡಕೋವಿಯಿಂದ ಕಾಡುಪ್ರಾಣಿಗಳನ್ನು ಬೇಟೆಯಾಡಲು ಹೋಗಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಅಂಡಾರು ವನ್ಯಜೀವಿ ಘಟಕ ಉಪ ವಲಯ ಅರಣ್ಯಾಧಿಕಾರಿ ಅಭಿಲಾಷ್ ಎಸ್.ಬಿ. ನೇತೃತ್ವದ ಅರಣ್ಯ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ಬಂದಿಸಿದ್ದಾರೆ.
ಕೆರ್ವಾಶೆ ಗ್ರಾಮದ ನಡ್ವಾಲು ಎಂಬಲ್ಲಿ ಅ. 31ರಂದು ರಾತ್ರಿ ಅಂಡಾರು ವನ್ಯಜೀವಿ ಘಟಕದ ಉಪವಲಯ ಅರಣ್ಯಾಧಿಕಾರಿ ಅಭಿಲಾಷ್ ಎಸ್.ಬಿ. ತಮ್ಮ ಸಿಬಂದಿ ಜತೆ ರಾತ್ರಿ ಗಸ್ತು ತಿರುಗುತ್ತಿದ್ದಾಗ ಆರೋಪಿಗಳಾದ ವಸಂತ, ಜಯ, ರಾಕೇಶ್ ಹಾಗೂ ಸಂತೋಷ್ ಎಂಬವರು ಕಾಡುಪ್ರಾಣಿಗಳನ್ನು ಬೇಟೆಯಾಡಲು ಅಕ್ರಮ ನಾಡಕೋವಿಯೊಂದಿಗೆ ಸಂಚರಿಸುತ್ತಿದ್ದರು.
ಈ ಸಂದರ್ಭ ಮೂವರು ಆರೋಪಿಗಳಾದ ವಸಂತ, ಜಯ ಮತ್ತು ರಾಕೇಶ್ ಎಂಬವರನ್ನು ಬಂಧಿಸಿದ್ದು ಮತೋರ್ವ ಆರೋಪಿ ಸಂತೋಷ್ ಪರಾರಿಯಾಗಿದ್ದಾನೆ.
ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿಗಳಿಂದ ಅಕ್ರಮ ನಾಡಕೋವಿಯನ್ನು ವಶಪಡಿಸಿಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಕಾರ್ಕಳದ ಅಭಿವೃದ್ಧಿಗೆ ಕಾಂಗ್ರೆಸ್ ಅಡ್ಡಗಾಲು… ಸುನಿಲ್ ಆರೋಪ
ಮಂಗಳೂರು: ಭಾರತ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲು ಪರಿಣಾಮಕಾರಿ ನಾಯಕತ್ವ ಕಾರಣ: ನಿರ್ಮಲಾ
Udupi: ಸಂಭ್ರಮದ ಲಕ್ಷದೀಪೋತ್ಸವ ಆರಂಭ
Arjun Tendulkar: 5 ವಿಕೆಟ್ ಕೆಡವಿದ ಅರ್ಜುನ್ ತೆಂಡುಲ್ಕರ್ ಐಪಿಎಲ್ ಆಯ್ಕೆಗೆ ಸಜ್ಜು
Ranking: ಐಸಿಸಿ ನೂತನ ರ್‍ಯಾಂಕಿಂಗ್ ಪ್ರಕಟ: ಶಾಹೀನ್ ಅಫ್ರಿದಿ ಮತ್ತೆ ನಂ.1
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.