Udupi: ಆಸ್ತಿ ಕಬಳಿಸಲು ನಕಲಿ ದಾಖಲೆ ಸೃಷ್ಟಿ ಸಂಚು: ದೂರು
Team Udayavani, Nov 9, 2024, 9:07 PM IST
ಉಡುಪಿ: ಆಸ್ತಿ ಕಬಳಿಸಲು ನಕಲಿ ದಾಖಲೆ ಸೃಷ್ಟಿಸಿ ಮೋಸಗೊಳಿಸಲು ಸಂಚು ರೂಪಿಸಿದ ಕುರಿತು ನಗರ ಠಾಣೆಯಲ್ಲಿ ರಾಜ್ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ.
ಮಂಗಳೂರಿನ ಮೋಹನದಾಸ್ ಅವರ ಅಣ್ಣ ಮೃತ ಬಾಲಕೃಷ್ಣ ಅವರ ಪತ್ನಿ ರಾಧಿಕಾ ಅವರು ಸಾಯುವ ಮೊದಲು ಅವರ ಸ್ಥಿರಾಸ್ಥಿ ಸ.ನಂಬ್ರ 93/4 ಮತ್ತು 93/15 ಒಳಳಗೊಂಡಂತೆ ಉಳಿದ 27 ಸೆಂಟ್ಸ್ ಜಮೀನನ್ನು ಗಂಡನ ಸಹೋದರರ ಮಕ್ಕಳಾದ ಮೋಹನದಾಸ್ ಹಾಗೂ ರಾಮರಾಯ, ಲಕ್ಷ್ಮಣ , ಗುರುದತ್ತ, ಯೋಗೀಶ್ ಮತ್ತು ರವೀಂದ್ರ ಅವರನ್ನು ಫಲಾನುಭವಿಗಳನ್ನಾಗಿ ಮಾಡಿ ವಿಲ್ ಮಾಡಿದ್ದರು.
ಮೋಹನದಾಸರ ಮನೆಯಲ್ಲಿ ಕೆಲಸಕ್ಕಿದ್ದ ಲಕ್ಷ್ಮೀ ಯಾನೆ ಸುನೀತಿ ಅವರ ಮಗ (ಪ್ರಕರಣದ ಆರೋಪಿ ) ರಾಜ್ ಕುಮಾರ ಎಂಬಾತ ಸಣ್ಣ ವಯಸ್ಸಿನಿಂದ ಮೋಹನದಾಸರ ಮನೆಯಲ್ಲಿ ಬೆಳೆದಿದ್ದು, ಆತನ ಶಿಕ್ಷಣದ ಖರ್ಚು ಅನ್ನು ಫಿರ್ಯಾದಿದಾರರ ತಂದೆ ನೋಡಿಕೊಂಡಿದ್ದರು. ಆದರೇ ಫಿರ್ಯಾದಿದಾರರು ಹಾಗೂ ಆತನ ಸಂಬಂಧಿಕರ ಹೆಸರಿನಲ್ಲಿ ರಾಧಿಕಾ ಮಾಡಲ್ಪಟ್ಟ ಉಯಿಲಿನ ಆಸ್ತಿಗಳನ್ನು ಕಬಳಿಸುವ ದುರುದ್ದೇಶದಿಂದ ತಾನು ಬಾಲಕೃಷ್ಣ ಮತ್ತು ರಾಧಿಕಾರ ಮಗ ಎಂದು ರಾಜ್ಕುಮಾರ್ ಬೆಂಗಳೂರಿನ ವರ್ತೂರು ಉಪತಹಶೀಲ್ದಾರರಲ್ಲಿ ಸಂತತಿ ನಕ್ಷೆ ಪಡೆದು ದಿ| ರಾಧಿಕಾರಿಂದ ತನ್ನ ಹೆಸರಿಗೆ ಖಾತಾ ಬದಲಾವಣೆಗಾಗಿ ಉಡುಪಿ ನಗರಸಭೆಗೆ ನಕಲಿ ದಾಖಲೆಗಳನ್ನು ಸಲ್ಲಿಸಿರುವುದಾಗಿ ಮೋಹನದಾಸ್ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಕಾರ್ಕಳದ ಅಭಿವೃದ್ಧಿಗೆ ಕಾಂಗ್ರೆಸ್ ಅಡ್ಡಗಾಲು… ಸುನಿಲ್ ಆರೋಪ
ಮಂಗಳೂರು: ಭಾರತ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲು ಪರಿಣಾಮಕಾರಿ ನಾಯಕತ್ವ ಕಾರಣ: ನಿರ್ಮಲಾ
Udupi: ಸಂಭ್ರಮದ ಲಕ್ಷದೀಪೋತ್ಸವ ಆರಂಭ
Arjun Tendulkar: 5 ವಿಕೆಟ್ ಕೆಡವಿದ ಅರ್ಜುನ್ ತೆಂಡುಲ್ಕರ್ ಐಪಿಎಲ್ ಆಯ್ಕೆಗೆ ಸಜ್ಜು
Ranking: ಐಸಿಸಿ ನೂತನ ರ್ಯಾಂಕಿಂಗ್ ಪ್ರಕಟ: ಶಾಹೀನ್ ಅಫ್ರಿದಿ ಮತ್ತೆ ನಂ.1
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.