By Election: ದೇಶವನ್ನೇ ಹಿಂದೂ ಧರ್ಮದ ಪ್ರಯೋಗ ಶಾಲೆ ಮಾಡ್ತೇವೆ: ಶಾಸಕ ಯತ್ನಾಳ್
ಸಿಎಂ ಸಿದ್ದರಾಮಯ್ಯ, ಡಿಸಿಎಂ ಗ್ಯಾರಂಟಿ ಯೋಜನೆ ಬಿಟ್ಟು ಹೊಸದೇನಾದರೂ ಹೇಳಿದ್ದಾರಾ?
Team Udayavani, Nov 10, 2024, 7:15 AM IST
ಹಾವೇರಿ (ಶಿಗ್ಗಾವಿ): ನಮಗಿರುವುದೊಂದೇ ದೇಶ. ಇಡೀ ಭಾರತವನ್ನು ಸನಾತನ ಹಿಂದೂ ಧರ್ಮದ ಪ್ರಯೋಗ ಶಾಲೆ ಮಾಡಿಯೇ ಮಾಡುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಶಿಗ್ಗಾವಿ ಕ್ಷೇತ್ರದ ದುಂಢಸಿಯಲ್ಲಿ ಚುನಾವಣೆ ಪ್ರಚಾರ ನಡೆಸಿ ಮಾತನಾಡಿ, ನಮ್ಮ ಧರ್ಮ, ದೇಶ ಉಳಿಯಬೇಕಾದರೆ ಹಿಂದೂಗಳು ಎಲ್ಲರೂ ಒಟ್ಟಾಗಬೇಕೆಂದರು. ಇನ್ನೂ ಎಷ್ಟು ವರ್ಷ ಇಂದಿರಾ ಗಾಂಧಿ ಅಂತ ಹೇಳುತ್ತೀರಿ. ಜಿಲೇಬಿ ಫ್ಯಾಕ್ಟರಿ ಮಾಡುತ್ತೇನೆ. ಬಟಾಟೆಯಲ್ಲಿ ಬಂಗಾರ ತೆಗೆಯುತ್ತೇನೆ ಅನ್ನುವ ರಾಹುಲ್ ಗಾಂಧಿ ಮಾತು ಕೇಳುತ್ತೀರಾ? ಎಂದು ಪ್ರಶ್ನಿಸಿದ ಅವರು, ಪ್ರಧಾನಿ ಮೋದಿ 10 ವರ್ಷದಲ್ಲಿ ಬಹಳಷ್ಟು ಸುಧಾರಣೆ ಮಾಡಿದ್ದಾರೆ. ಈಗ ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ ಎಂದರು.
ಕಾಂಗ್ರೆಸ್ನವರು ಸೈನ್ಯದಲ್ಲಿ ಎಕೆ-47 ಬಳಕೆ ಮಾಡಲು ಅವಕಾಶ ಕೊಡುತ್ತಿರಲಿಲ್ಲ. ಈಗ ಅದಕ್ಕೆ ಅವಕಾಶ ಸಿಕ್ಕಿದೆ ಎಂದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಗ್ಯಾರಂಟಿ ಯೋಜನೆ ಬಿಟ್ಟು ಹೊಸದೇನಾದರೂ ಹೇಳಿದ್ದಾರಾ ಎಂದು ಪ್ರಶ್ನಿಸಿದ ಅವರು, ವಕ್ಫ್ ಕಾಯ್ದೆ ಎಷ್ಟು ಅಪಾಯಕಾರಿ ಇದೆ ನೋಡಿ, ಅವರ ಜನಸಂಖ್ಯೆ ಶೇ.30 ಆದರೆ ನಮ್ಮವರಾರೂ ಶಾಸಕರಾಗಲು ಸಾಧ್ಯವಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.