Kejriwal ಮನೆಯಲ್ಲಿ 100 ಎಸಿ, 73 ಲಕ್ಷದ ಟಿವಿ: ಬಿಜೆಪಿ ಟೀಕೆ
Team Udayavani, Nov 10, 2024, 6:54 AM IST
ಹೊಸದಿಲ್ಲಿ: “100 ಎಸಿ, 76 ಬಾಷ್ ಸ್ಪೀಕರ್, 73 ಲಕ್ಷ ರೂ. ಮೌಲ್ಯದ ಟಿವಿ’! ಇವು ದಿಲ್ಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸದಲ್ಲಿದ್ದ ಐಷಾರಾಮಿ ವಸ್ತುಗಳು ಎಂದು ಬಿಜೆಪಿ ಆರೋಪಿಸಿದೆ. ಅಲ್ಲದೇ, ಬಾಡಿ ಮಸಾಜರ್, ಬಾತ್ ಟಬ್ಗಳಿಗೆಂದೇ 20 ಲಕ್ಷ ರೂ. ವ್ಯಯಿಸಲಾಗಿತ್ತು. 12 ಕೋಟಿ ರೂ. ಮೌಲ್ಯದ ಕಮೋಡ್ ಅಳವಡಿಸಿದ್ದರ ಜತೆಗೆ ವಿಐಪಿ ಕಲ್ಚರ್ಗೆ ಕೇಜ್ರಿವಾಲ್ ಸೂಕ್ತ ಉದಾಹರಣೆ ಎಂದೂ ಲೇವಡಿ ಮಾಡಿದೆ.
ಕೇಜ್ರಿ ಅವರು ಸಿಎಂ ನಿವಾಸ ಖಾಲಿ ಮಾಡಿದ ಬಳಿಕ ಮನೆಯಲ್ಲಿದ್ದ ವಸ್ತುಗಳು, ಒಳಾಂಗಣ ವಿನ್ಯಾಸಕ್ಕೆ ಬಳಸಿದ ವಸ್ತುಗಳ ಮೌಲ್ಯಗಳನ್ನು ಲೋಕೋಪಯೋಗಿ ಇಲಾಖೆ ಪಟ್ಟಿ ಮಾಡಿದೆ. ಬಿಜೆಪಿ ಐಟಿ ಮುಖ್ಯಸ್ಥ ಅಮಿತ್ ಮಾಳವಿಯ ಪಟ್ಟಿಯಲ್ಲಿರುವ ವಸ್ತುಗಳ ಬಗ್ಗೆ ಟ್ವೀಟ್ ಮಾಡಿ “934 ಲೀಟರ್ನ ಅತ್ಯಾಧುನಿಕ ಫ್ರಿಡ್ಜ್, 73 ಲೀಟರ್ನ ಓವನ್, 57 ಸೀಲಿಂಗ್ ಫ್ಯಾನ್ಸ್, ಒಳ ವಿನ್ಯಾಸಕ್ಕೆ 41 ಲಕ್ಷ ರೂ. ಮೌಲ್ಯದ ಕಂಬಿಗಳು, 12 ಐಷಾರಾಮಿ ತೂಗುದೀಪಗಳು ಸಿಎಂ ನಿವಾಸದಲ್ಲಿತ್ತು. ಇಷ್ಟೆಲ್ಲ ಐಷಾರಾಮಿ ಜೀವನ ನಡೆಸಿ ಕೇಜ್ರಿವಾಲ್ ತಾನು ಜನಸಾಮಾನ್ಯ ಎನ್ನುತ್ತಾರೆ’ ಎಂದಿದ್ದಾರೆ. ಅತ್ಯಂತ ಭ್ರಷ್ಟ ರಾಜಕಾರಣಿ ಎಂದರೆ ಕೇಜ್ರಿವಾಲ್ ಎಂದು ಗೌರವ್ ಭಾಟಿಯಾ ಸಹ ಆರೋಪಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.