Loan facility: ಕೇಂದ್ರ ಸರಕಾರದ ಯೋಜನೆಗಳಡಿ ಸಾಲ ಮಂಜೂರು ಹೆಚ್ಚಿಸಿ: ನಿರ್ಮಲಾ
ಪಿಎಂ ಮುದ್ರ, ವಿಶ್ವಕರ್ಮ ಯೋಜನೆಗೆ ಒತ್ತು ನೀಡಲು ಕೇಂದ್ರ ಹಣಕಾಸು ಸಚಿವೆ ಸೂಚನೆ
Team Udayavani, Nov 10, 2024, 7:25 AM IST
ಬೆಂಗಳೂರು: ದಕ್ಷಿಣ ವಲಯಗಳ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು (ಆರ್‌ಆರ್‌ಬಿ) ಪಿಎಂ ಮುದ್ರ, ಪಿಎಂ ವಿಶ್ವಕರ್ಮದಂತಹ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಡಿ ಸಾಲ ಮಂಜೂರಾತಿಯನ್ನು ಹೆಚ್ಚಿಸಬೇಕು ಎಂದು ನಿರ್ದೇಶನ ನೀಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೃಷಿ, ಹೈನುಗಾರಿಕೆ, ಪಶುಸಂಗೋಪನ, ಮೀನುಗಾರಿಕೆಗೂ ಹೆಚ್ಚಿನ ಸಾಲ ಸೌಲಭ್ಯ ನೀಡಿ ಉತ್ತೇಜಿಸುವಂತೆ ಸೂಚಿಸಿದರು.
ಬೆಂಗಳೂರಿನಲ್ಲಿ ದಕ್ಷಿಣ ವಲಯಗಳ 10 ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು. ಪಿಎಂ ಮುದ್ರ, ಪಿಎಂ ವಿಶ್ವಕರ್ಮದಂತಹ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಗಳಡಿ ಸಾಲ ಮಂಜೂರಾತಿಯನ್ನು ಹೆಚ್ಚಳ ಮಾಡುವಂತೆ ನಿರ್ದೇಶನ ನೀಡಿದರು. ಕೃಷಿ ಚಟುವಟಿಕೆಯ ಜತೆಗೆ ಅದಕ್ಕೆ ಹೊಂದಿಕೊಂಡಿರುವ ಹೈನುಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆಗೂ ಉತ್ತೇಜನ ನೀಡಬೇಕು. ಅದರಲ್ಲೂ ಕೇರಳದಲ್ಲಿ ಮೀನುಗಾರಿಕೆಯನ್ನು ಗಮನದಲ್ಲಿ ಇಟ್ಟುಕೊಂಡು ಸಾಲ ಮಂಜೂರಾತಿ ಹೆಚ್ಚಿಸಬೇಕು ಎಂದರು.
ಜನ್‌ಧನ್ ಸಕ್ರಿಯವಾಗಿರಲಿ
ಸುಸ್ಥಿರ ಸಾಲ ಅಭಿವೃದ್ಧಿಗಾಗಿ ಚಾಲ್ತಿ ಖಾತೆ ಉಳಿತಾಯ ಖಾತೆ (ಸಿಎಎಸ್‌ಎ) ಠೇವಣಿಯ ಪ್ರಮಾಣ ಹೆಚ್ಚಳ ಮಾಡುವುದರ ಪ್ರಾಮುಖ್ಯ ವಿವರಿಸಿದ ಸಚಿವೆ ನಿರ್ಮಲಾ, ಪಿಎಂ ಜನ್‌ಧನ್, ಅಟಲ್ ಪಿಂಚಣಿ ಯೋಜನೆಗಳಡಿ ನೀಡಿರುವ ಗುರಿಯನ್ನು ಸಾಧಿಸಬೇಕು. ನಿಷ್ಕ್ರಿಯವಾಗುತ್ತಿರುವ ಪಿಎಂ ಜನ್‌ಧನ್ ಖಾತೆಗಳು ಸಕ್ರಿಯವಾಗಲು ವಿಶೇಷ ಅಭಿಯಾನ ನಡೆಸಬೇಕು ಎಂದು ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.