Rahul Gandhi ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ: ಅಮಿತ್ ಶಾ
Team Udayavani, Nov 10, 2024, 2:17 AM IST
ರಾಂಚಿ/ಪಲಮು: “ಸಂವಿಧಾನದ ನಕಲಿ ಪ್ರತಿಯನ್ನು ತೋರಿಸುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.
ಶನಿವಾರ ಝಾರ್ಖಂಡ್‌ನ ರಾಂಚಿ ಮತ್ತು ಪಲಮುವಿನಲ್ಲಿ ಚುನಾವಣ ರ್ಯಾಲಿ ನಡೆಸಿ ಮಾತನಾಡಿದ ಅವರು, “ಮಹಾರಾಷ್ಟ್ರ ದಲ್ಲಿ ರಾಹುಲ್ ಗಾಂಧಿ ವಿತರಿಸಿದ ಸಂವಿ ಧಾನ ಪ್ರತಿಯನ್ನು ಕೆಲವರ ಪಡೆದುಕೊಂಡಿ ದ್ದರು. ಮೊದಲ ಪುಟದಲ್ಲಿ ಮಾತ್ರ ಸಂವಿ ಧಾನದ ಪ್ರಸ್ತಾವನೆಯನ್ನು ಅಚ್ಚು ಹಾಕಿದ್ದು, ಉಳಿದೆಲ್ಲ ಪುಟವನ್ನು ಖಾಲಿ ಬಿಡಲಾಗಿತ್ತು. ಈ ರೀತಿ ಮಾಡುವ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನಕ್ಕೆ ರಾಹುಲ್ ಅವಮಾನ ಮಾಡಿದ್ದಾರೆ. ಸಂವಿಧಾನವನ್ನು ಲೇವಡಿ ಮಾಡದಿರಿ, ಇದು ಹಲವರ ನಂಬಿಕೆಯ ಪ್ರಶ್ನೆ ಎಂದು ಎಚ್ಚರಿಸಿದ್ದಾರೆ.
ಇದೇ ವೇಳೆ ಯಾವುದೇ ಕಾರಣಕ್ಕೂ ಅಲ್ಪಸಂಖ್ಯಾಕ ಮೀಸಲಾತಿಯನ್ನು ಜಾರಿ ಮಾಡುವುದಕ್ಕೆ ನಾವು ಕಾಂಗ್ರೆಸ್‌ಗೆ ಅವಕಾಶ ನೀಡುವುದಿಲ್ಲ. ಎಸ್ಸಿ, ಎಸ್ಟಿ, ಒಬಿಸಿಗಳ ಮೀಸಲಾತಿ ಕಿತ್ತು ಅಲ್ಪಸಂಖ್ಯಾಕರಿಗೆ ನೀಡಲು ಕಾಂಗ್ರೆಸ್ ಯೋಜಿಸುತ್ತಿದೆ. ಆದರೆ ಅದಕ್ಕೆ ನಾವು ಅವಕಾಶ ನೀಡೆವು ಎಂದಿದ್ದಾರೆ.
ಇದೇ ವೇಳೆ, ಗಾಂಧಿ ಕುಟುಂಬದ 4ನೇ ತಲೆಮಾರು ಬಂದರೂ ಕಾಶ್ಮೀರದಲ್ಲಿ 370ನೇ ವಿಧಿಯನ್ನು ಮರುಜಾರಿ ಮಾಡಲು ಸಾಧ್ಯವಾಗದು ಎಂದು ಸವಾಲೆಸೆದಿದ್ದಾರೆ.
ಅಮಿತ್ ವಾಗ್ಧಾಳಿ
ರಾಹುಲ್ ಅವರೇ, ನಿಮ್ಮ 4ನೇ ತಲೆಮಾರು ಬಂದ್ರೂ 370ನೇ ವಿಧಿ ಮರುಸ್ಥಾಪನೆ ಸಾಧ್ಯವಿಲ್ಲ
ಮೋದಿ ಸರಕಾರವು ಹೈಟೆನ್ಶನ್ ಪವರ್ ಲೈನ್ ಇದ್ದಂತೆ.
ಝಾರ್ಖಂಡ್‌ನ ಕಾಂಗ್ರೆಸ್ ಸರಕಾರ ಸುಟ್ಟುಹೋದ ಟ್ರಾನ್ಸ್‌ಫಾರ್ಮರ್ ಇದ್ದಂತೆ.
ಸೊರೇನ್ ಸರಕಾರ ನುಸುಳುಕೋರರಿಗೆ ಕೆಂಪು ಹಾಸಿನ ಸ್ವಾಗತ ನೀಡುತ್ತಿದೆ
ಬಿಜೆಪಿ ಅಧಿಕಾರಕ್ಕೆ ಬಂದೊಡನೆ ಒಂದೇ ಒಂದು ಪಕ್ಷಿಯೂ ಗಡಿ ದಾಟಿ ಬರದಂತೆ ನೋಡಿಕೊಳ್ಳಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.