Tollywood: ‘ಕಣ್ಣಪ್ಪʼ ಚಿತ್ರದ ಫೋಟೋ ಲೀಕ್; 5 ಲಕ್ಷ ರೂ. ಘೋಷಿಸಿದ ಬಳಿಕ ವ್ಯಕ್ತಿ ಪತ್ತೆ
Team Udayavani, Nov 10, 2024, 1:22 PM IST
ಹೈದರಾಬಾದ್: ಟಾಲಿವುಡ್ ನಟ ವಿಷ್ಣು ಮಂಚು (Vishnu Manchu) ಅವರ ಬಿಗ್ ಬಜೆಟ್, ಪ್ಯಾನ್ ಇಂಡಿಯಾ ʼಕಣ್ಣಪ್ಪʼ (Kannappa) ಸಿನಿಮಾದ ಬಗ್ಗೆ ಬಹು ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.
ಕಳೆದ ಕೆಲ ವರ್ಷಗಳಿಂದ ಸಿನಿಮಾಕ್ಕಾಗಿ ಚಿತ್ರತಂಡ ಸಾಕಷ್ಟು ಪರಿಶ್ರಮವನ್ನು ಹಾಕಿದೆ. ʼಕಣ್ಣಪ್ಪʼ ಚಿತ್ರದ ಟೀಸರ್ ಪ್ರತಿಷ್ಠಿತ ಕೇನ್ಸ್ ಚಲನಚಿತ್ರೋತ್ಸವದಲ್ಲಿ ರಿಲೀಸ್ ಆಗಿ, ಆ ಬಳಿಕ ಭಾರತದಲ್ಲಿ ರಿಲೀಸ್ ಆಗಿತ್ತು.
ಕಿರುತೆರೆಯಲ್ಲಿ ʼಮಹಾಭಾರತʼವನ್ನು ನಿರ್ದೇಶನ ಮಾಡಿರುವ ಮುಕೇಶ್ ಕುಮಾರ್ ʼಕಣ್ಣಪ್ಪʼವನ್ನು ನಿರ್ದೇಶನ ಮಾಡಲಿದ್ದಾರೆ.
ಸಿನಿಮಾದ ತಯಾರಿಯ ಕೆಲಸ ಭರದಿಂದ ಸಾಗುತ್ತಿದೆ. ಈ ನಡುವೆ ಚಿತ್ರೀಕರಣ ಸಂದರ್ಭದಲ್ಲಿನ ಪ್ರಭಾಸ್ ಅವರ ಪಾತ್ರದ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ. ವರ್ಷಗಳಿಂದ ಯಾವುದೇ ಫೋಟೋ ಹಾಗೂ ವಿಡಿಯೋಗಳು ಸೆಟ್ ನಿಂದ ಲೀಕ್ ಆಗದೆ ಅದನ್ನು ರಹಸ್ಯವಾಗಿಟ್ಟ ʼಕಣ್ಣಪ್ಪʼ ಚಿತ್ರತಂಡಕ್ಕೆ ಕ್ಯಾರೆಕ್ಟರ್ ವೊಂದರ ಫೋಟೋ ಲೀಕ್ ಆಗಿದ್ದು, ಭಾರೀ ಬೇಸರ ತರಿಸಿದೆ.
Om Namah Shivaya!
We extend our heartfelt gratitude to each one of you for your unwavering support and dedication during this recent challenge. Thanks to your constant vigilance and commitment, we are pleased to inform you that the individual & Company responsible for leaking… pic.twitter.com/DiZoWzYaF3
— Kannappa The Movie (@kannappamovie) November 9, 2024
ಇದಕ್ಕಾಗಿ ಚಿತ್ರತಂಡ ಲೀಕ್ ಮಾಡಿದವರ ಮೇಲೆ ಕ್ರಮಕೈಗೊಳ್ಳಲು ಮುಂದಾಗಿದೆ. ಫೋಟೋ ಲೀಕ್ ಮಾಡಿದವರನ್ನು ಪತ್ತೆ ಮಾಡಿಕೊಟ್ಟವರಿಗೆ 5 ಲಕ್ಷ ರೂ. ನಗದನ್ನು ಘೋಷಿಸಿದೆ.
ಕಳೆದ ಎಂಟು ವರ್ಷಗಳಿಂದ, ನಾವು ʼಕಣ್ಣಪ್ಪʼನಿಗಾಗಿ ಸಾಕಷ್ಟು ಪರಿಶ್ರಮ ಹಾಕಿದ್ದೇವೆ. ಎರಡು ವರ್ಷಗಳ ಪ್ರೊಡಕ್ಷನ್ ಕೆಲಸದ ಬಳಿಕ ಸಿನಿಮಾವನ್ನು ಉತ್ತಮ ಗುಣಮಟ್ಟದೊಂದಿಗೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಇತ್ತೀಚೆಗೆ ಯಾರೋ ಒಬ್ಬರು ಸಿನಿಮಾದ ಕೆಲಸವಾಗುತ್ತಿರುವ ಫೋಟೋವನ್ನು ಚಿತ್ರತಂಡದ ಅನುಮತಿ ಇಲ್ಲದೆ ತೆಗೆದು ಸೋರಿಕೆ ಮಾಡಿದ್ದಾರೆ. ಇದು ನಮಗೆ ತುಂಬಾ ಬೇಸರವನ್ನು ತಂದಿದೆ.
ಈ ಸೋರಿಕೆ ಹೇಗೆ ಸಂಭವಿಸಿದೆ ಎಂಬುದನ್ನು ಪತ್ತೆ ಹಚ್ಚಬೇಕಿದೆ. ಇದಕ್ಕೆ ಜವಾಬ್ದಾರರಾಗಿರುವವರನ್ನು ಪತ್ತೆ ಹಚ್ಚಲು ಪೊಲೀಸ್ ದೂರು ಸಲ್ಲಿಸುವ ಆಯ್ಕೆಗಳನ್ನು ಮೌಲ್ಯಮಾಪನ ಮಾಡುತ್ತೇವೆ. ಈ ಸೋರಿಕೆಯಾದ ಚಿತ್ರ/ತುಣುಕುಗಳನ್ನು ಹಂಚಿಕೊಳ್ಳದಂತೆ ನಾವು ನಿಮ್ಮನ್ನು ಒತ್ತಾಯಿಸುತ್ತೇವೆ. ಏಕೆಂದರೆ ಹಾಗೆ ಮಾಡುವುದರಿಂದ ಕಾನೂನು ಕ್ರಮಕ್ಕೆ ವ್ಯಕ್ತಿಗಳು ಹೊಣೆಗಾರರಾಗುತ್ತಾರೆ. ಈ ಸೋರಿಕೆಯ ಮೂಲವನ್ನು ಪತ್ತೆಹಚ್ಚಲು ನಮಗೆ ಸಹಾಯ ಮಾಡುವವರಿಗೆ ಈ ಮಾಹಿತಿಯನ್ನು ಹೊಂದಿರುವ ಯಾರಾದರೂ ಇದ್ದರೆ ಅವರಿಗೆ 5 ಲಕ್ಷ ರೂಪಾಯಿಗಳನ್ನು ಬಹುಮಾನವಾಗಿ ನೀಡಲಾಗುತ್ತದೆ ಎಂದು ಚಿತ್ರತಂಡ ಪ್ರಕಟಣೆಯಲ್ಲಿ ತಿಳಿಸಿದೆ.
5 ಲಕ್ಷ ರೂ. ಘೋಷಣೆ ಬಳಿಕ ಆರೋಪಿ ಪತ್ತೆ.. ಚಿತ್ರತಂಡ ಫೋಟೋ ಲೀಕ್ ಮಾಡಿದ ವ್ಯಕ್ತಿಯನ್ನು ಪತ್ತೆ ಮಾಡಿದವರಿಗೆ 5 ಲಕ್ಷ ರೂ. ನಗದು ಬಹುಮಾನ ಘೋಷಣೆ ಮಾಡಿದ ಬಳಿಕ ವ್ಯಕ್ತಿಯೊಬ್ಬ ಇದನ್ನು ತಾನೇ ಮಾಡಿದ್ದು ಎಂದು ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಿದ್ದಾನೆ.
ವರ್ಕ್‌ಫ್ಲೋ ಎನ್ನುವ ಕಂಪೆನಿಯಲ್ಲಿ ಕೆಲಸ ಮಾಡುವ ವಿನಯ್ ಬೊಡ್ಡು ಎಂಬಾತ ಇದನ್ನು ಲೀಕ್ ಮಾಡಿ ಇತರೆ ಸ್ನೇಹಿತರಿಗೆ ಹಂಚಿದ್ದಾನೆ ಎಂದು ತಪ್ಪು ಒಪ್ಪಿಕೊಂಡಿದ್ದಾನೆ.
ಪ್ರಸ್ತುತ ಈ ಸಮಗ್ರ ತನಿಖೆ ನಡೆಯುತ್ತಿದೆ. ಪೊಲೀಸರು ಎಲ್ಲಾ ಸೂಕ್ತ ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಿದ್ದಾರೆ ಎಂದು ಚಿತ್ರತಂಡ ಹೇಳಿದೆ.
ದಕ್ಷಿಣ ಭಾರತದ ಖ್ಯಾತ ಕಲಾವಿದರಾಗಿರುವ ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ ಲಾಲ್ ಮತ್ತು ಕಾಜಲ್ ಅಗರ್ವಾಲ್ ಸೇರಿದಂತೆ ಮೋಹನ್ ಬಾಬು, ಶರತ್‌ಕುಮಾರ್, ಮುಖೇಶ್ ರಿಷಿ, ಬ್ರಹ್ಮಾನಂದಂ, ಮಧು ಮತ್ತು ಪ್ರೀತಿ ಮುಕುಂದನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದೇ ಡಿಸೆಂಬರ್ ನಲ್ಲಿ ಸಿನಿಮಾ ತೆರೆಗೆ ಬರಲಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kollywood: ಧನುಷ್ – ಐಶ್ವರ್ಯಾ ವಿಚ್ಚೇದನ ಪ್ರಕರಣ; ನ.27ಕ್ಕೆ ಅಂತಿಮ ತೀರ್ಪು
Tollywood: ನಾನು ಸಿಂಗಲ್ ಅಲ್ಲ.. ರಶ್ಮಿಕಾ ಜತೆಗಿನ ಸಂಬಂಧ ದೃಢಪಡಿಸಿದ್ರಾ ದೇವರಕೊಂಡ?
Malayalam Actor: ಶ್ವಾಸಕೋಶದ ಕಾಯಿಲೆ; ಖ್ಯಾತ ನಟ ಮೇಘನಾಥನ್ ನಿಧನ
Kollywood: ಯೂಟ್ಯೂಬ್ ವಿಮರ್ಶೆ ಬ್ಯಾನ್ ಮಾಡಲು ತಮಿಳು ನಿರ್ಮಾಪಕರ ಸಂಘ ಆಗ್ರಹ
Ram Charan: ಅಯ್ಯಪ್ಪನ ಮಾಲೆ ಧರಿಸಿ ದರ್ಗಾಕ್ಕೆ ಭೇಟಿ ಕೊಟ್ಟ ರಾಮ್ ಚರಣ್; ಭಾರೀ ಟೀಕೆ
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.