Mangaluru: ನಗರದ ಪೆಟ್ರೋಲ್ ಪಂಪ್ ಬಳಿಯೇ ಹೊತ್ತಿ ಉರಿದ ಕಾರು!
ಬೆಂಕಿ ನಂದಿಸಿದ ಪೆಟ್ರೋಲ್ ಪಂಪ್ ಸಿಬಂದಿ
Team Udayavani, Nov 10, 2024, 5:21 PM IST
ಮಂಗಳೂರು: ಪೆಟ್ರೋಲ್ ಬಂಕ್ ಆವರಣದೊಳಗೆ ಕಾರು ಬೆಂಕಿಗಾಹುತಿಯಾದ ಘಟನೆ ನಗರದ ಲೇಡಿಹಿಲ್‌ನಲ್ಲಿ ರವಿವಾರ ಅಪರಾಹ್ನ ಸಂಭವಿಸಿದ್ದು, ಪೆಟ್ರೋಲ್ ಬಂಕ್ ಸಿಬಂದಿಯ ಸಮಯಪ್ರಜ್ಞೆಯ ಕಾರ್ಯಾಚರಣೆಯಿಂದ ಸಂಭಾವ್ಯ ಭಾರೀ ಅನಾಹುತ ತಪ್ಪಿ ಹೋಗಿದೆ.
ಬಜಪೆ ನಿವಾಸಿ ಪಾರ್ಶ್ವನಾಥ್ ಅವರು ರವಿವಾರ ಅಪರಾಹ್ನ ಮಂಗಳೂರು ನಗರದಲ್ಲಿ 3.15ಕ್ಕೆ ಮದುವೆ ಮುಗಿಸಿ ಬಜಪೆಗೆ ವಾಪಸಾಗುವ ಮೊದಲು ಪೆಟ್ರೋಲ್ ಹಾಕಿಸಿಕೊಳ್ಳಲು ಲೇಡಿಹಿಲ್‌ನ ಪೆಟ್ರೋಲ್ ಬಂಕ್‌ಗೆ ಬಂದಿದ್ದರು. ಕಾರಿನಲ್ಲಿ ಅವರ ಇಬ್ಬರು ಸಂಬಂಧಿಕರು ಕೂಡ ಇದ್ದರು. ಅವರ ಕಾರಿನ ಎದುರು ಬೇರೆ ಎರಡು ಕಾರುಗಳಿಗೆ ಪೆಟ್ರೋಲ್ ಹಾಕುತ್ತಿದ್ದ ಕಾರಣ ತಮ್ಮ ಕಾರನ್ನು ಸರತಿ ಸಾಲಿನಲ್ಲಿ ನಿಲ್ಲಿಸಿದ್ದರು. ಆಗ ಏಕಾಏಕಿ ಕಾರಿನ ಮುಂಭಾಗದಲ್ಲಿ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿತು.
ಕಾರಿನಲ್ಲಿದ್ದವರು ಕೂಡಲೇ ಹೊರಗೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನೋಡನೋಡುತ್ತಿದ್ದಂತೆ ಕಾರಿಗೆ ಬೆಂಕಿ ವ್ಯಾಪಿಸಿ ಸುಟ್ಟು ಹೋಯಿತು. ಕೆಲಕಾಲ ಭಾರೀ ಆತಂಕ ಸೃಷ್ಟಿಸಿತ್ತು.
ಸಿಬಂದಿಯ ಸಮಯಪ್ರಜ್ಞೆ
ಕೂಡಲೇ ಪೆಟ್ರೋಲ್ ಬಂಕ್ ಸಿಬಂದಿ ಅಗ್ನಿಶಾಮಕ ಯಂತ್ರ, ಮರಳು, ನೀರು ಬಳಸಿ ಅಗ್ನಿನಂದಿಸುವ ಕಾರ್ಯಾಚರಣೆ ನಡೆಸಿದರು. ಆ ವೇಳೆಗ ಕದ್ರಿ ಅಗ್ನಿಶಾಮಕ ದಳದವರು ಕೂಡ ಆಗಮಿಸಿ ಕಾರ್ಯಾಚರಣೆ ನಡೆಸಿದರು. ಇದರಿಂದಾಗಿ ಬೆಂಕಿ ವ್ಯಾಪಿಸಲಿಲ್ಲ. ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಆದರೆ ಕಾರು ಸುಟ್ಟು ಹೋಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಗಳೂರು: ಭಾರತ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲು ಪರಿಣಾಮಕಾರಿ ನಾಯಕತ್ವ ಕಾರಣ: ನಿರ್ಮಲಾ
Pakshikere Case: ಚಿನ್ನಾಭರಣ ಕಳೆದುಕೊಂಡವರಿಂದ ಪೊಲೀಸರಿಗೆ ದೂರು
Mangaluru: ಕಾಲೇಜಿನಲ್ಲಿ ಕುಸಿದು ಬಿದ್ದಿದ್ದ ಉಪನ್ಯಾಸಕಿ ಸಾ*ವು
Mangaluru: ಯಾವುದೇ ರಾಜ್ಯಕ್ಕೂ ಕೇಂದ್ರ ಮಲತಾಯಿ ಧೋರಣೆ ಮಾಡಿಲ್ಲ: ನಿರ್ಮಲಾ ಸೀತಾರಾಮನ್
Padil ಹೆದ್ದಾರಿಗೆ ಡಾಮರು, ಜಂಕ್ಷನ್‌ಗೆ ಇಲ್ಲ !
MUST WATCH
ಹೊಸ ಸೇರ್ಪಡೆ
Shimoga: ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ನಾಪತ್ತೆಯಾಗಿದ್ದ ಮೂವರ ಶವ ಪತ್ತೆ
Sandalwood: ಮುಹೂರ್ತದಲ್ಲಿ ‘ದಿ ಟಾಸ್ಕ್’
Mumbai: ಬಾಬಾ ಸಿದ್ದೀಕಿ ಸಾವು ದೃಢೀಕರಿಸಲು ಆಸ್ಪತ್ರೆ ಬಳಿ 30 ನಿಮಿಷ ಕಾದು ಕುಳಿತಿದ್ದ ಹಂತಕ
Bengaluru: ಮಾವನ ಮಗನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ
Road mishap: ಗೂಡ್ಸ್ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ; ಸಿಎಆರ್ ಕಾನ್‌ಸ್ಟೇಬಲ್ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.