Udupi: ಆನ್ಲೈನ್ ಉದ್ಯೋಗ ಭರವಸೆ; ಯುವತಿಗೆ ವಂಚನೆ
Team Udayavani, Nov 10, 2024, 10:58 PM IST
ಉಡುಪಿ: ಆನ್ಲೈನ್ ಬ್ಯಾಂಕ್ ಉದ್ಯೋಗ ನೀಡುವುದಾಗಿ ನಂಬಿಸಿ, ಹಣ ಪಡೆದು ವಾಪಸ್ ನೀಡದೆ ವಂಚಿಸಿದ ಕುರಿತು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೆಂಕನಿಡಿಯೂರು ಗ್ರಾಮ ನಿವಾಸಿ ಅಂಜಲಿ ಅವರಿಗೆ ನ. 14ರಂದು ಅಪರಿಚಿತರು ಫೋನ್ ಮಾಡಿ ಉದ್ಯೋಗಾವಕಾಶದ ಬಗ್ಗೆ ಮಾಹಿತಿ ನೀಡಿ, ಪರೀಕ್ಷೆ ಹಾಗೂ ಸಂದರ್ಶನದ ಬಗ್ಗೆ ಹಣ ಪಾವತಿ ಮಾಡಲು ತಿಳಿಸಿದ್ದರು.
ಅಂಜಲಿಯವರು ಗೂಗಲ್ ಪೇ ಮೂಲಕ 2 ಸಾವಿರ ರೂ. ಪಾವತಿ ಮಾಡಿದ್ದು, ಬಳಿಕ ವಿವಿಧ ಕಾರಣ ನೀಡಿ ಗೂಗಲ್ ಪೇ ಹಾಗೂ ಯುಪಿಐ ಮೂಲಕ 4,34,808 ಲಕ್ಷ ರೂ., 1,97,915 ಲಕ್ಷ ರೂ. ಹೀಗೆ ಹಂತ-ಹಂತವಾಗಿ ಒಟ್ಟು 6,32,723 ಲಕ್ಷ ರೂ. ಜಮೆ ಮಾಡಿದ್ದಾರೆ. ಬಳಿಕ ಉದ್ಯೋಗ ನೀಡದೆ, ಹಣ ವಾಪಸ್ ನೀಡದೆ ಮೋಸಗೊಳಿಸಿದ ಬಗ್ಗೆ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.