Mangaluru Airport: 7,637 ಪ್ರಯಾಣಿಕರನ್ನು ನಿರ್ವಹಿಸಿ ಹೊಸ ದಾಖಲೆ
Team Udayavani, Nov 11, 2024, 12:31 AM IST
ಮಂಗಳೂರು: ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್ ಲಿ. (ಎಎಎಚ್‌ಎಲ್) ನಿರ್ವಹಿಸುವ ಮಂಗಳೂರು ವಿಮಾನ ನಿಲ್ದಾಣವು ನ. 9ರಂದು ಅತೀ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.
ವಿಮಾನ ನಿಲ್ದಾಣವು 7,637 ಪ್ರಯಾಣಿಕರನ್ನು ನಿರ್ವಹಿಸಿರುವುದು 2020ರ ಅ. 31ರ ಎಎಎಚ್‌ಎಲ್‌ನ ವಾಣಿಜ್ಯ ಕಾರ್ಯಾಚರಣೆ (ಸಿಒಡಿ) ಅನಂತರದ ಗರಿಷ್ಠ ಪ್ರಮಾಣವಾಗಿದೆ.ಪ್ರಯಾಣಿಕರಲ್ಲಿ 7,498 ವಯಸ್ಕರು ಮತ್ತು 139 ಶಿಶುಗಳು ಸೇರಿದ್ದಾರೆ.
ಈ ಹಿಂದೆ 2023ರ ಡಿ. 31ರಂದು 51 ಏರ್ ಟ್ರಾಫಿಕ್ ಮೂವ್‌ಮೆಂಟ್‌ನೊಂದಿಗೆ 7,548 ಪ್ರಯಾಣಿಕರು ಪ್ರಯಾಣಿಸಿದ್ದರು. 2023ರ ನ. 25ರಂದು 7,452 ಪ್ರಯಾಣಿಕರು, 2024 ಆ.15ರಂದು 7,406 ಪ್ರಯಾಣಿಕರು, 2023ರ ನ. 19ಂದು 7,399 ಪ್ರಯಾಣಿಕರು ಮತ್ತು ಡಿ. 10ರಂದು 7,350 ಪ್ರಯಾಣಿಕರನ್ನು ಒಂದೇ ದಿನ ನಿರ್ವಹಿಸಲಾಗಿತ್ತು.
ನಿಲ್ದಾಣದಲ್ಲಿ ಒಂದೇ ದಿನದಲ್ಲಿ 7,000ಕ್ಕೂ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸುವುದು ವಿಶೇಷ ಸಾಧನೆಯಾಗಿದೆ ಎಂದು ವಿಮಾನ ನಿಲ್ದಾಣದ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಗಳೂರು: ಭಾರತ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲು ಪರಿಣಾಮಕಾರಿ ನಾಯಕತ್ವ ಕಾರಣ: ನಿರ್ಮಲಾ
Pakshikere Case: ಚಿನ್ನಾಭರಣ ಕಳೆದುಕೊಂಡವರಿಂದ ಪೊಲೀಸರಿಗೆ ದೂರು
Mangaluru: ಕಾಲೇಜಿನಲ್ಲಿ ಕುಸಿದು ಬಿದ್ದಿದ್ದ ಉಪನ್ಯಾಸಕಿ ಸಾ*ವು
Mangaluru: ಯಾವುದೇ ರಾಜ್ಯಕ್ಕೂ ಕೇಂದ್ರ ಮಲತಾಯಿ ಧೋರಣೆ ಮಾಡಿಲ್ಲ: ನಿರ್ಮಲಾ ಸೀತಾರಾಮನ್
Padil ಹೆದ್ದಾರಿಗೆ ಡಾಮರು, ಜಂಕ್ಷನ್‌ಗೆ ಇಲ್ಲ !
MUST WATCH
ಹೊಸ ಸೇರ್ಪಡೆ
IPL 2025: ಸಾತಂತ್ರ್ಯ ನೀಡುವ ತಂಡವೇ ನನ ಆದ್ಯತೆ: ಕೆ.ಎಲ್.ರಾಹುಲ್
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Shimoga: ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ನಾಪತ್ತೆಯಾಗಿದ್ದ ಮೂವರ ಶವ ಪತ್ತೆ
Sandalwood: ಮುಹೂರ್ತದಲ್ಲಿ ‘ದಿ ಟಾಸ್ಕ್’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.