WTA Finals: ಕೊಕೊ ಗಾಫ್ ಗೆ ಮೊದಲ ಪ್ರಶಸ್ತಿ
Team Udayavani, Nov 11, 2024, 6:33 AM IST
ರಿಯಾದ್: ಒಲಿಂಪಿಕ್ ಚಾಂಪಿಯನ್, ಚೀನದ ಜೆಂಗ್ ಕ್ವಿನ್ವೆನ್ ಅವರನ್ನು ಪರಾಭವಗೊಳಿಸಿದ ಕೊಕೊ ಗಾಫ್ ಮೊದಲ ಬಾರಿಗೆ ಡಬ್ಲ್ಯುಟಿಎ ಫೈನಲ್ಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಮೆರಿಕನ್ ಆಟಗಾರ್ತಿಯ ಗೆಲುವಿನ ಅಂತರ 3-6, 6-4, 7-6 (2).
ನಿರ್ಣಾಯಕ ಸೆಟ್‌ನಲ್ಲಿ 2-0 ಮುನ್ನಡೆಯಿಂದ 3-5ಕ್ಕೆ ಕುಸಿದ ಕೊಕೊ ಗಾಫ್ಗೆ ಟೈ ಬ್ರೇಕರ್‌ನಲ್ಲಿ ಅದೃಷ್ಟ ಕೈ ಹಿಡಿಯಿತು. ಇಲ್ಲಿ ಮೊದಲ 6 ಅಂಕಗಳನ್ನು ತಮ್ಮದಾಗಿಸಿಕೊಂಡರು.
ಕೊಕೊ ಗಾಫ್ 2014ರ ಬಳಿಕ ಈ ಪ್ರಶಸ್ತಿ ಗೆದ್ದ ಅಮೆರಿಕದ ಮೊದಲ ಆಟಗಾರ್ತಿ. ಅಂದು ಸೆರೆನಾ ವಿಲಿಯಮ್ಸ್ ಚಾಂಪಿಯನ್ ಆಗಿದ್ದರು. 2004ರಲ್ಲಿ ಮರಿಯಾ ಶರಪೋವಾ ಗೆದ್ದ ಬಳಿಕ ಈ ಪ್ರಶಸ್ತಿಯನ್ನೆತ್ತಿದ ಕಿರಿಯ ಆಟಗಾರ್ತಿಯೂ ಹೌದು. ಆ ವರ್ಷವೇ ಕೊಕೊ ಗಾಫ್ ಜನನವಾಗಿತ್ತು!
ಪ್ರಶಸ್ತಿ ಹಾದಿಯಲ್ಲಿ ಕೊಕೊ ಗಾಫ್ ವಿಶ್ವದ ಇಬ್ಬರು ಅಗ್ರಮಾನ್ಯ ಆಟಗಾರ್ತಿಯರನ್ನು ಸೋಲಿಸಿದ್ದರು. ಗಾಫ್ಗೆ ಶರಣಾದವರೆಂದರೆ ಅರಿನಾ ಸಬಲೆಂಕಾ ಮತ್ತು ಇಗಾ ಸ್ವಿಯಾಟೆಕ್.
ವನಿತಾ ಡಬಲ್ಸ್ ಪ್ರಶಸ್ತಿ
ವನಿತಾ ಡಬಲ್ಸ್ ಪ್ರಶಸ್ತಿ ಗ್ಯಾಬ್ರಿ ಯೇಲಾ ಡಾಬ್ರೋವ್‌ಸ್ಕಿ (ಕೆನಡಾ)-ಎರಿನ್ ರೌಟಿಫ್ (ನ್ಯೂಜಿ ಲ್ಯಾಂಡ್) ಪಾಲಾಯಿತು. ಇವರು ಜೆಕ್ ಗಣರಾಜ್ಯದ ಕ್ಯಾಥರಿನಾ ಸಿನಿಯಕೋವಾ-ಅಮೆರಿಕದ ಟೇಲರ್ ಟೌನ್ಸೆಂಡ್ ವಿರುದ್ಧ 7-5, 6-3 ಅಂತರದಿಂದ ಗೆದ್ದು ಬಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025: ಸಾತಂತ್ರ್ಯ ನೀಡುವ ತಂಡವೇ ನನ್ನ ಆದ್ಯತೆ: ಕೆ.ಎಲ್.ರಾಹುಲ್
INDvsSA: ಭುವನೇಶ್ವರ್ ಕುಮಾರ್ ರ ಟಿ20ಐ ದಾಖಲೆ ಮುರಿದ ವೇಗಿ ಅರ್ಶದೀಪ್ ಸಿಂಗ್
Arjun Tendulkar: 5 ವಿಕೆಟ್ ಕೆಡವಿದ ಅರ್ಜುನ್ ತೆಂಡುಲ್ಕರ್ ಐಪಿಎಲ್ ಆಯ್ಕೆಗೆ ಸಜ್ಜು
Ranking: ಐಸಿಸಿ ನೂತನ ರ್‍ಯಾಂಕಿಂಗ್ ಪ್ರಕಟ: ಶಾಹೀನ್ ಅಫ್ರಿದಿ ಮತ್ತೆ ನಂ.1
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
MUST WATCH
ಹೊಸ ಸೇರ್ಪಡೆ
ShivaRajkumar: ʼಘೋಸ್ಟ್ʼ ಬಳಿಕ ಮತ್ತೆ ಶ್ರೀನಿ ಜತೆ ಶಿವಣ್ಣ ಸಿನಿಮಾ; ಟೈಟಲ್ ರಿವೀಲ್
World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ
Sullia: 10 ವರ್ಷದ ಬಳಿಕ ಚಿಂಗಾಣಿ ಗುಡ್ಡೆ ಟ್ಯಾಂಕ್‌ಗೆ ಕೊನೆಗೂ ನೀರು ಬಂತು!
Waqf Board Case: ಆಪ್ ಶಾಸಕ ಅಮಾನತುಲ್ಲಾ ಖಾನ್ ಗೆ ಜಾಮೀನು
Bantwal: ಶಂಭೂರಿನ ಎಂಆರ್‌ಎಫ್ ತಿಂಗಳಲ್ಲಿ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.