Pakshikere ಆತ್ಮಹ*ತ್ಯೆ ಪ್ರಕರಣ: ಆರ್ಥಿಕ ಮುಗ್ಗಟ್ಟು, ಶೋಕಿ ಜೀವನವೇ ಮುಳುವಾಯಿತೇ?

ಮೂವರ ಮೃತದೇಹ ಕೆರೆಕಾಡು ರುದ್ರಭೂಮಿಯ ಒಂದೇ ಚಿತೆಯಲ್ಲಿ ದಹನ

Team Udayavani, Nov 11, 2024, 7:05 AM IST

Pakshikere ಆತ್ಮಹ*ತ್ಯೆ ಪ್ರಕರಣ: ಆರ್ಥಿಕ ಮುಗ್ಗಟ್ಟು, ಶೋಕಿ ಜೀವನವೇ ಮುಳುವಾಯಿತೇ?

ಕಿನ್ನಿಗೋಳಿ: ಆರ್ಥಿಕ ಮುಗ್ಗಟ್ಟು ಮತ್ತು ಶೋಕಿ ಜೀವನವೇ ಪಕ್ಷಿಕೆರೆಯ ಕಾರ್ತಿಕ್‌ ಭಟ್‌ ಕುಟುಂಬದ ಅಂತ್ಯಕ್ಕೆ ಕಾರಣವಾಯಿತೇ ಎಂಬ ಸಂಶಯ ಬಲಗೊಳ್ಳುತ್ತಿದೆ. ಕಳೆದ ಸುಮಾರು ಸಮಯದಿಂದ ಕೆಲಸ ಇಲ್ಲದಿದ್ದರೂ ಶೋಕಿ ಜೀವನದಲ್ಲಿಯೇ ಕಾಲ ಕಳೆಯುತ್ತಿದ್ದ ಕಾರ್ತಿಕ್‌ ಭಟ್‌ (32) ಆರ್ಥಿಕ ಸಮಸ್ಯೆಯಿಂದ ಮೇಲೆ ಬರಲಾರದೆ ಪತ್ನಿ ಪ್ರಿಯಾಂಕಾ (28) ಮತ್ತು ಪುಟ್ಟ ಮಗ ಹೃದಯ್‌ (4) ನನ್ನು ನಿರ್ದಯವಾಗಿ ಕೊಲೆ ಮಾಡಿ ಬಳಿಕ ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವಂತೆ ಇಡೀ ಪ್ರಕರಣ ಭಾಸವಾಗುತ್ತಿದೆ.

ಕಾರ್ತಿಕ್‌ ಶುಕ್ರವಾರವೇ ಆತ್ಮಹತ್ಯೆ ಮಾಡಿಕೊಂಡಿದ್ದರೂ ಇಡೀ ಪ್ರಕರಣ ಬೆಳಕಿಗೆ ಬಂದದ್ದು ಶನಿವಾರ ಅಪರಾಹ್ನದ ವೇಳೆಗೆ. ರವಿವಾರ ಬೆಳಗ್ಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಎಲ್ಲ ಮೂವರ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹಗಳನ್ನು ನೇರವಾಗಿ ಕೆರೆಕಾಡಿನ ರುದ್ರಭೂಮಿಗೆ ಕೊಂಡೊಯ್ದು ಜತೆಯಾಗಿ ಅಂತ್ಯಕ್ರಿಯೆ ನಡೆಸಲಾಯಿತು. ಅಂತ್ಯಕ್ರಿಯೆಯನ್ನು ಪತ್ನಿಯ ಮನೆಯವರು ನಡೆಸಲಿ ಎಂದು ಕಾರ್ತಿಕ್‌ ಡೈರಿಯಲ್ಲಿ ಬರೆದಿದ್ದರಿಂದ ರವಿವಾರ ಎರಡೂ ಕುಟುಂಬದವರು ಮಾತನಾಡಿಕೊಂಡು ಇಲ್ಲಿಯೇ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಿದ್ದು, ಅದರಂತೆ ನಡೆಯಿತು.

ಗೆಳೆಯರಲ್ಲಿ ಸಾಲ ಮಾಡಿದ್ದ
ಪಕ್ಷಿಕೆರೆಯಲ್ಲಿ ತನ್ನ ಸಂಬಂಧಿಯ ಮಾಲಕತ್ವದ ಫ್ಲ್ಯಾಟ್‌ನಲ್ಲಿ ಕಾರ್ತಿಕ್‌ ಮತ್ತು ಕುಟುಂಬ ತಂದೆ-ತಾಯಿಯ ಜತೆ ವಾಸಿಸುತ್ತಿದ್ದರು. ವಯೋವೃದ್ಧ ತಂದೆ-ತಾಯಿ ಪಕ್ಷಿಕೆರೆಯಲ್ಲಿ ಸಣ್ಣ ಕ್ಯಾಂಟೀನ್‌ ನಡೆಸುತ್ತಿದ್ದರು. ಒಂದೇ ಮನೆಯಲ್ಲಿದ್ದರೂ ಅವರಲ್ಲಿ ಅನ್ಯೋನ್ಯತೆ ಇರಲಿಲ್ಲ. ಕಾರ್ತಿಕ್‌ ಕುಟುಂಬ ಪ್ರತ್ಯೇಕವಾಗಿ ಒಂದು ಕೋಣೆಯಲ್ಲಿ ಇದ್ದು, ತಂದೆ-ತಾಯಿಯ ಜತೆ ಬೆರೆಯುತ್ತಿರಲಿಲ್ಲ. ಕಳೆದ 2-3 ವರ್ಷಗಳಿಂದ ಇದೇ ರೀತಿಯಲ್ಲಿದ್ದು, ಊಟ-ತಿಂಡಿ ಎಲ್ಲವೂ ಹೊರಗೆ ಹೋಗಿ ಹೊಟೇಲ್‌ನಲ್ಲಿಯೇ ನಡೆಯುತಿತ್ತು. ಬೆಳಗ್ಗೆ ಅಪ್ಪ-ಅಮ್ಮ ಎದ್ದು ಕ್ಯಾಂಟೀನ್‌ಗೆ ಹೋಗುವ ವೇಳೆ ಚಹಾ ಮಾಡಿಟ್ಟು ಹೋಗುತ್ತಿದ್ದು ಅದನ್ನು ಸೇವಿಸುತ್ತಿದ್ದರು. ಅನಂತರ ತಿಂಡಿ, ಊಟ ಎಲ್ಲವೂ ಹೊರಗೆ ಮಾಡುತ್ತಿದ್ದರು.

ಹಿಂದೆ ಮಂಗಳೂರಿನ ಸೊಸೈಟಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ತಿಕ್‌ ಕೆಲವು ಸಮಯದಿಂದ ಕೆಲಸಕ್ಕೂ ಹೋಗುತ್ತಿರಲಿಲ್ಲ. ಹೆಚ್ಚಿನ ಸಮಯವನ್ನು ಮನೆಯಲ್ಲಿಯೇ ಕಳೆಯುತ್ತಿದ್ದರೂ ಶೋಕಿ ಜೀವನ ಬಯಸುತ್ತಿದ್ದ. ಇದಕ್ಕಾಗಿ ಹಲವು ಮಂದಿ ಗೆಳೆಯರಲ್ಲಿ ಸಾಲ ಕೂಡ ಮಾಡಿದ್ದ ಎಂದು ತಿಳಿದುಬಂದಿದೆ. ಆತನ ರೂಮಿಗೆ ಎಸಿ ಅಳವಡಿಸಿದ್ದು, ಮನೆಯ ವಿದ್ಯುತ್‌ ಬಿಲ್‌ ಅನ್ನು ತಂದೆಯೇ ಪಾವತಿಸುತ್ತಿದ್ದರು.

ಕಾರ್ತಿಕ್‌ ಬಾಲ್ಯದಿಂದಲೂ ಉತ್ತಮ ಗುಣನಡತೆಯವನಾಗಿದ್ದ. ಆದರೆ ಮದುವೆ ಅನಂತರ ಬದಲಾಗಿದ್ದಾನೆ ಎನ್ನಲಾಗುತ್ತಿದೆ. ನೆರೆಕರೆಯವರು ಹೇಳುವ ಪ್ರಕಾರ ಸರಿಯಾದ ಕೆಲಸವಿಲ್ಲದ ಕಾರ್ತಿಕ್‌, ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ. ಅಲ್ಲದೆ ತನ್ನ ಆರ್ಥಿಕ ಸಮಸ್ಯೆಯನ್ನು ಸರಿದೂಗಿಸಲು ಆನ್‌ಲೈನ್‌ ಆಟದಲ್ಲಿ ನಿರತನಾಗಿ ಅಲ್ಲೂ ಸಾಕಷ್ಟು ಹಣ ಕಳೆದುಕೊಂಡಿದ್ದ ಎಂದು ಹೇಳಲಾಗುತ್ತಿದೆ.

ಮಗನನ್ನು ಸ್ವತಃ ಶಾಲೆಗೆ ಕರೆದೊಯ್ಯುತ್ತಿದ್ದ
ಕಾರ್ತಿಕ್‌ ತನ್ನ ಮಗನನ್ನು ಸುರತ್ಕಲ್‌ನ ಶಾಲೆಗೆ ಸೇರಿಸಿದ್ದ ಪ್ರತೀ ದಿನ ಬೆಳಗ್ಗೆ ತಾನೇ ಮಗನನ್ನು ಶಾಲೆಗೆ ಕರೆದೊಯ್ಯುತ್ತಿದ್ದ. ಮಧ್ಯಾಹ್ನ ವಾಪಸ್‌ ಕರೆದುಕೊಂಡು ಬಂದು ಅನಂತರ ಪತ್ನಿ ಜತೆ ಹೊಟೇಲ್‌ಗೆ ಹೋಗಿ ಊಟ ಮಾಡಿ ಬರುತ್ತಿದ್ದರು. ಇಷ್ಟೊಂದು ಪ್ರೀತಿ ತೋರುತ್ತಿದ್ದ ಮಗನನ್ನು ನಿರ್ದಯವಾಗಿ ಕೊಲ್ಲುವ ಮನಃಸ್ಥಿತಿ ಹೇಗೆ ಬಂತು ಎಂಬುದೇ ಗೊತ್ತಾಗುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು.

ಪತ್ನಿ ಜತೆ ಜಗಳ ಇಲ್ಲ
ಪ್ರಿಯಾಂಕಾ ಅವರ ತಾಯಿ ಸಾವಿತ್ರಿ ಮಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿ, ಅಳಿಯ ಕಾರ್ತಿಕ್‌ಗೆ ವಿದೇಶಕ್ಕೆ ಹೋಗುವಂತೆ ಅವರ ತಾಯಿ ತುಂಬಾ ಒತ್ತಾಯ ಮಾಡುತ್ತಲಿದ್ದರು. ನನ್ನ ಮಗಳು ಕೆಲಸಕ್ಕೆ ಹೋಗಲಿ ಎಂದು ಅವಳ ಅತ್ತೆ ಹೇಳುತ್ತಿದ್ದರು. ಕಾರ್ತಿಕ್‌ ಪತ್ನಿ ಜತೆ ಜಗಳ ಮಾಡಲು ಸಾಧ್ಯವಿಲ್ಲ, ಗುರುವಾರ ಬೆಳಗ್ಗೆ ಮಗಳು ಪ್ರಿಯಾಂಕಾ ನನಗೆ ಕರೆ ಮಾಡಿ ಮಾತನಾಡಿದ್ದಳು. ಆವಾಗ ಡಿಸೆಂಬರ್‌ನಲ್ಲಿ ಶಿವಮೊಗ್ಗಕ್ಕೆ ಬರುವುದಾಗಿ ಹೇಳಿಕೊಂಡಿದ್ದಳು ಎಂದಿದ್ದಾರೆ.

ದೀಪಾವಳಿ ಆಚರಿಸಿದ್ದರು
ಕಾರ್ತಿಕ್‌ ಮತ್ತು ಕುಟುಂಬ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದರು. ಪಟಾಕಿ ತಂದಿದ್ದ ಕಾರ್ತಿಕ್‌ ಪತ್ನಿ ಮತ್ತು ಮಗುವಿನೊಂದಿಗೆ ಫ್ಲ್ಯಾಟ್‌ನ ಕೆಳಗೆ ಬಂದು ಅದನ್ನು ಸಿಡಿಸಿ ಸಂಭ್ರಮಿಸಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ ಅಚಾನಕ್‌ ಇಂತಹ ಘಟನೆ ಏಕೆ ಸಂಭವಿಸಿತು ಎಂದೇ ತಿಳಿಯುತ್ತಿಲ್ಲ ಎಂದಿದ್ದಾರೆ.

ನಿದ್ದೆಯಲ್ಲಿದ್ದಾಗಲೇ
ಕುತ್ತಿಗೆಗೆ ಇರಿದು ಕೊಲೆ?
ಪತ್ನಿ ಮತ್ತು ಮಗು ಇಬ್ಬರಿಗೂ ಕುತ್ತಿಗೆಗೆ ಇರಿದ ಗಾಯಗಳಾಗಿವೆ. ಇದರಿಂದ ಆದ ರಕ್ತಸ್ರಾವದಿಂದಲೇ ತಾಯಿ-ಮಗು ಮೃತಪಟ್ಟಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ತಾಯಿ ಹೋರಾಡಿದ ಯಾವುದೇ ಕುರುಹು ಪತ್ತೆಯಾಗಿಲ್ಲ. ಆದುದರಿಂದ ಅವರು ನಿದ್ದೆಯಲ್ಲಿದ್ದಾಗಲೇ ಕೊಲೆ ನಡೆಸಿರುವ ಸಾಧ್ಯತೆ ಕಾಣಿಸುತ್ತಿದೆ. ಮೊದಲು ತಾಯಿಯನ್ನು ಕೊಂದು ಅನಂತರ ಮಗುವನ್ನು ಕೊಲೆಗೈದು ಅಲ್ಲೇ ಕಾರ್ತಿಕ್‌ ಆತ್ಮಹತ್ಯೆಗೆ ಯತ್ನಿಸಿರುವುದೂ ಗೊತ್ತಾಗಿದೆ. ಕೊಠಡಿಯಲ್ಲಿದ್ದ ಫ್ಯಾನ್‌ಗೆ ಸೀರೆ ಕಟ್ಟಿ ಆತ್ಮಹತ್ಯೆ ಯತ್ನ ನಡೆಸಿ ಅದರಲ್ಲಿ ವಿಫ‌ಲವಾದ ಬಳಿಕ ಕೋಣೆಗೆ ಬೀಗ ಹಾಕಿ ಹೊರಗೆ ಹೋಗಿ ರೈಲಿಗೆ ತಲೆ ಕೊಟ್ಟಿರುವ ಸಾಧ್ಯತೆಗಳಿವೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮೊಬೈಲ್‌ ಎಲ್ಲಿದೆ?
ಕಾರ್ತಿಕ್‌ ಭಟ್‌ ಮತ್ತು ಆತನ ಪತ್ನಿ ಪ್ರಿಯಾಂಕಾ ಅವರ ಮೊಬೈಲ್‌ ಮಾತ್ರ ನಾಪತ್ತೆಯಾಗಿದೆ. ಅದು ಇನ್ನೂ ಮನೆಯವರಿಗಾಗಲಿ ಅಥವಾ ಪೊಲೀಸರಿಗಾಗಲಿ ಸಿಕ್ಕಿಲ್ಲ ಎಂದು ತಿಳಿದುಬಂದಿದೆ. ಇದರಲ್ಲಿಕಾರ್ತಿಕ್‌ಗೆ ಸಂಬಂಧಿಸಿದ ಸಾಲ ಸಹಿತ ಕೆಲವು ಮಾಹಿತಿಗಳಿರುವ ಸಾಧ್ಯತೆಗಳಿವೆ.

ಡೈರಿ ಬರೆದದ್ದು ಯಾವಾಗ
ಘಟನೆ ನಡೆದಿರುವ ರೀತಿ ಗಮನಿಸಿದಾಗ ಇದು ಪೂರ್ವ ನಿರ್ಧರಿತದಂತೆ ಕಾಣಿಸುತ್ತಿಲ್ಲ. ಫ್ಲ್ಯಾಟ್‌ನ ಬಾತ್‌ರೂಮಿನಲ್ಲಿದ್ದ ಕಿಟಕಿಯ ಗಾಜಿನ ಗ್ಲಾಸ್‌ ತೆಗೆದು ಅದನ್ನು ತುಂಡರಿಸಿ ಅದರಲ್ಲಿ ತಾಯಿ-ಮಗುವಿಗೆ ಇರಿಯಲಾಗಿದೆ. ಆದುದರಿಂದ ಕಾರ್ತಿಕ್‌ ಏಕಾಏಕಿ ಈ ನಿರ್ಧಾರ ತೆಗೆದುಕೊಂಡಂತಿದೆ.

ಹಿಂದಿನ ರಾತ್ರಿ ಏನಾದರೂ ದಂಪತಿಯ ನಡುವೆ ಜಗಳ ಆಗಿತ್ತೇ ಅಥವಾ ಸಾಲಗಾರರಿಂದ ಬೆದರಿಕೆ ಏನಾದರೂ ಬಂದಿತ್ತೇ … ಇದರಿಂದ ಕಂಗೆಟ್ಟು ಅಚಾನಕ್‌ ಆಗಿ ನಿರ್ಧಾರ ತೆಗೆದುಕೊಂಡು ಡೈರಿಯಲ್ಲಿ ಕೇವಲ ಅಂತ್ಯಕ್ರಿಯೆಗೆ ಸಂಬಂಧಿಸಿ ಮಾತ್ರ ಬರೆದು ಕೃತ್ಯ ಎಸಗಲಾಗಿದೆಯೇ ಎಂಬ ಸಂಶಯವೂ ಇದ್ದು, ಈ ನಿಟ್ಟಿನಲ್ಲಿಯೂ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೊಸ ಸ್ಕೂಟರ್‌ ಖರೀದಿ
ಇತ್ತೀಚೆಗಷ್ಟೇ ಕಾರ್ತಿಕ್‌ ಹೊಸ ಸ್ಕೂಟರ್‌ ಖರೀದಿಸಿದ್ದ. ವಿಶೇಷ ಎಂದರೆ ಅದನ್ನು ತಂದೆಯ ಹೆಸರಿನಲ್ಲಿ ನೋಂದಾಯಿಸಿಕೊಂಡಿದ್ದ. ಇದರ ಮೂಲದಿಂದಲೇ ಅವರ ವಿಳಾಸವನ್ನು ಪತ್ತೆ ಹಚ್ಚಲಾಗಿತ್ತು.

ಟಾಪ್ ನ್ಯೂಸ್

ShivaRajkumar: ʼಘೋಸ್ಟ್‌ʼ ಬಳಿಕ ಮತ್ತೆ ಶ್ರೀನಿ ಜತೆ ಶಿವಣ್ಣ ಸಿನಿಮಾ; ಟೈಟಲ್‌ ರಿವೀಲ್

ShivaRajkumar: ʼಘೋಸ್ಟ್‌ʼ ಬಳಿಕ ಮತ್ತೆ ಶ್ರೀನಿ ಜತೆ ಶಿವಣ್ಣ ಸಿನಿಮಾ; ಟೈಟಲ್‌ ರಿವೀಲ್

World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ

World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ

Waqf Board Case: ಆಪ್ ಶಾಸಕ ಅಮಾನತುಲ್ಲಾ ಖಾನ್ ಗೆ ಜಾಮೀನು

Waqf Board Case: ಆಪ್ ಶಾಸಕ ಅಮಾನತುಲ್ಲಾ ಖಾನ್ ಗೆ ಜಾಮೀನು

5-bantwala

Bantwala: ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಮೃತ್ಯು

Kanguva Movie: ಪ್ರೇಕ್ಷಕರ ಮನದಲ್ಲಿ ಕಂಗೊಳಿಸಿದ ʼಕಂಗುವʼ..ಸಿನಿಮಾ ನೋಡಿದವರು ಹೇಳಿದ್ದೇನು?

Kanguva Movie: ಪ್ರೇಕ್ಷಕರ ಮನದಲ್ಲಿ ಕಂಗೊಳಿಸಿದ ʼಕಂಗುವʼ..ಸಿನಿಮಾ ನೋಡಿದವರು ಹೇಳಿದ್ದೇನು?

IPL 2025: My preference is a team that gives freedom: KL Rahul

IPL 2025: ಸಾತಂತ್ರ್ಯ ನೀಡುವ ತಂಡವೇ ನನ್ನ ಆದ್ಯತೆ: ಕೆ.ಎಲ್‌.ರಾಹುಲ್‌

Maharashtra Election; BJP has nothing but 370: Mallikarjuna Kharge

Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಗಳೂರು: ಭಾರತ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲು ಪರಿಣಾಮಕಾರಿ ನಾಯಕತ್ವ ಕಾರಣ: ನಿರ್ಮಲಾ

ಮಂಗಳೂರು: ಭಾರತ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲು ಪರಿಣಾಮಕಾರಿ ನಾಯಕತ್ವ ಕಾರಣ: ನಿರ್ಮಲಾ

Pakshikere Case: ಚಿನ್ನಾಭರಣ ಕಳೆದುಕೊಂಡವರಿಂದ ಪೊಲೀಸರಿಗೆ ದೂರು

Pakshikere Case: ಚಿನ್ನಾಭರಣ ಕಳೆದುಕೊಂಡವರಿಂದ ಪೊಲೀಸರಿಗೆ ದೂರು

Mangaluru: ಕಾಲೇಜಿನಲ್ಲಿ ಕುಸಿದು ಬಿದ್ದಿದ್ದ ಉಪನ್ಯಾಸಕಿ ಸಾ*ವು

Mangaluru: ಕಾಲೇಜಿನಲ್ಲಿ ಕುಸಿದು ಬಿದ್ದಿದ್ದ ಉಪನ್ಯಾಸಕಿ ಸಾ*ವು

Mangaluru: ಯಾವುದೇ ರಾಜ್ಯಕ್ಕೂ ಕೇಂದ್ರ ಮಲತಾಯಿ ಧೋರಣೆ ಮಾಡಿಲ್ಲ: ನಿರ್ಮಲಾ ಸೀತಾರಾಮನ್‌

Mangaluru: ಯಾವುದೇ ರಾಜ್ಯಕ್ಕೂ ಕೇಂದ್ರ ಮಲತಾಯಿ ಧೋರಣೆ ಮಾಡಿಲ್ಲ: ನಿರ್ಮಲಾ ಸೀತಾರಾಮನ್‌

7(1

Padil ಹೆದ್ದಾರಿಗೆ ಡಾಮರು, ಜಂಕ್ಷನ್‌ಗೆ ಇಲ್ಲ !

MUST WATCH

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

ಹೊಸ ಸೇರ್ಪಡೆ

ShivaRajkumar: ʼಘೋಸ್ಟ್‌ʼ ಬಳಿಕ ಮತ್ತೆ ಶ್ರೀನಿ ಜತೆ ಶಿವಣ್ಣ ಸಿನಿಮಾ; ಟೈಟಲ್‌ ರಿವೀಲ್

ShivaRajkumar: ʼಘೋಸ್ಟ್‌ʼ ಬಳಿಕ ಮತ್ತೆ ಶ್ರೀನಿ ಜತೆ ಶಿವಣ್ಣ ಸಿನಿಮಾ; ಟೈಟಲ್‌ ರಿವೀಲ್

World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ

World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ

2

Sullia: 10 ವರ್ಷದ ಬಳಿಕ ಚಿಂಗಾಣಿ ಗುಡ್ಡೆ ಟ್ಯಾಂಕ್‌ಗೆ ಕೊನೆಗೂ ನೀರು ಬಂತು!

Waqf Board Case: ಆಪ್ ಶಾಸಕ ಅಮಾನತುಲ್ಲಾ ಖಾನ್ ಗೆ ಜಾಮೀನು

Waqf Board Case: ಆಪ್ ಶಾಸಕ ಅಮಾನತುಲ್ಲಾ ಖಾನ್ ಗೆ ಜಾಮೀನು

1

Bantwal: ಶಂಭೂರಿನ ಎಂಆರ್‌ಎಫ್‌ ತಿಂಗಳಲ್ಲಿ ಸಿದ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.