Britain PM; ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಹಿಂದೂಗಳ ಆಕ್ರೋಶ
Team Udayavani, Nov 11, 2024, 6:55 AM IST
ಲಂಡನ್: ಭಾರತೀಯ ಹಿಂದುಗಳನ್ನು ಓಲೈಸಲು ಮೊದಲ ಬಾರಿ ಬ್ರಿಟನ್ ಪ್ರಧಾನಿ ಕೀರ್ ಸ್ಟರ್ಮರ್ ಆಯೋಜಿ ಸಿದ್ದ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ ಉಣಬಡಿಸಿದ್ದು ಅವರಿಗೇ ತಿರುಗುಬಾಣವಾಗಿದೆ. ಜತೆಗೆ ಹಿಂದೂ ಗಳ ತೀವ್ರ ಆಕ್ರೋಶಕ್ಕೂ ಕಾರಣವಾಗಿದೆ.
ಅ.29ರಂದು ಪ್ರಧಾನಿಗಳ ಅಧಿಕೃತ ನಿವಾಸದಲ್ಲಿ ದೀಪಾವಳಿ ಪಾರ್ಟಿ ಆಯೋಜಿಸ ಲಾಗಿತ್ತು. ಈ ಪಾರ್ಟಿಯಲ್ಲಿ ಪ್ರಾರ್ಥನೆ, ಹಣತೆಗಳ ಬೆಳಗುವಿಕೆ, ಪ್ರಧಾನಿಗಳ ಭಾಷಣ ಮತ್ತು ಸಾಂಪ್ರದಾಯಿಕ ಭಾರತೀಯ ನೃತ್ಯವನ್ನು ಏರ್ಪಡಿಸಲಾಗಿತ್ತು. ಜತೆಗೆ ಅತಿಥಿಗಳಿಗೆ ಕುರಿ ಕಬಾಬ್, ಮೀನು, ಬಿಯರ್, ವೈನ್ ಬಡಿಸಲಾಗಿದೆ. ಈ ವೇಳೆ ಕೆಲ ಅತಿಥಿಗಳು ತಮ್ಮ ಅಕ್ರೋಶವನ್ನು ಅಲ್ಲಿಯೇ ಕೆಟರಿಂಗ್ ಸಿಬಂದಿ ವಿರುದ್ಧ ತೋರಿಸಿದ್ದಾರೆ. ಆದರೆ ಅವರು ಆರ್ಡರ್ ಮಾಡಿರುವುದನ್ನು ಬಡಿಸಿರುವುದಾಗಿ ಹೇಳಿದ್ದಾರೆ. ದೀಪಾ ವಳಿ ಧಾರ್ಮಿಕ ಮಹತ್ವವನ್ನೂ ಹೊಂದಿದೆ. ಹೀಗಾಗಿ ಸಾತ್ವಿಕ ಆಹಾರ ಬಡಿ ಸಬೇಕಿತ್ತು. ಮುಂದೆ ಮಾಂಸಾಹಾರ, ಮದ್ಯ ಉಣಬಡಿಸುವುದಾದರೆ ದೀಪಾ ವಳಿ ಪಾರ್ಟಿಯನ್ನೇ ಆಯೋಜಿಸುವುದು ಬೇಡ ಎಂದು ಆಕ್ರೋಶ ಹೊರ ಹಾಕಲಾಗಿದೆ. ಇದಕ್ಕೆ ಬ್ರಿಟನ್ ಪ್ರಧಾನಿ ಕಾರ್ಯಾಲಯದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ShivaRajkumar: ʼಘೋಸ್ಟ್ʼ ಬಳಿಕ ಮತ್ತೆ ಶ್ರೀನಿ ಜತೆ ಶಿವಣ್ಣ ಸಿನಿಮಾ; ಟೈಟಲ್ ರಿವೀಲ್
World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ
Sullia: 10 ವರ್ಷದ ಬಳಿಕ ಚಿಂಗಾಣಿ ಗುಡ್ಡೆ ಟ್ಯಾಂಕ್‌ಗೆ ಕೊನೆಗೂ ನೀರು ಬಂತು!
Waqf Board Case: ಆಪ್ ಶಾಸಕ ಅಮಾನತುಲ್ಲಾ ಖಾನ್ ಗೆ ಜಾಮೀನು
Bantwal: ಶಂಭೂರಿನ ಎಂಆರ್‌ಎಫ್ ತಿಂಗಳಲ್ಲಿ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.