Bangladesh; ಶೇಖ್ ಹಸೀನಾ ಪಕ್ಷದ ಬೆಂಬಲಿಗರನ್ನು ಬಂಧಿಸಿದ ಸೇನೆ
Team Udayavani, Nov 11, 2024, 1:13 AM IST
ಢಾಕಾ: ಮಹಮ್ಮದ್ ಯುನೂಸ್ ನೇತೃತ್ವದ ಮಧ್ಯಾಂತರ ಸರಕಾರದ ವಿರುದ್ಧ ಢಾಕಾದಲ್ಲಿ ಪ್ರತಿಭಟನೆಗೆ ಸಜ್ಜಾಗುತ್ತಿದ್ದ ಮಾಜಿ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಪಕ್ಷದ ನೂರಾರು ಕಾರ್ಯಕರ್ತರು, ಬೆಂಬಲಿಗರನ್ನು ಸೇನೆ ಬಂಧಿಸಿದೆ. ಆ.5ರಂದು ಹಸೀನಾ ನೇತೃತ್ವದ ಸರಕಾರ ಪತನಗೊಂಡ ಬಳಿಕ ಮೊದಲ ಬಾರಿಗೆ ವಿದ್ಯಾರ್ಥಿ ವಿಭಾಗದ ನಿಷೇಧ, ಸುಳ್ಳು ಮೊಕದ್ದಮೆ ದಾಖಲಿಸಲಾಗುತ್ತಿರುವು ದನ್ನು ಖಂಡಿಸಿ ಬೃಹತ್ ಪ್ರತಿಭಟನೆ ಆಯೋಜಿಸಲು ಮುಂದಾಗಿತ್ತು.
ಕೂಡಲೇ ಕಾರ್ಯಾಚರಣೆ ನಡೆಸಿದ ಸೇನೆ ಮುಖಂಡರು, ಕಾರ್ಯಕರ್ತರನ್ನು ಬಂಧಿಸಿತು. ಅದಕ್ಕೆ ಪೂರಕವಾಗಿ ವಿದ್ಯಾ ರ್ಥಿ ಗಳ ಗುಂಪು ಕೂಡ ಪ್ರತಿಭಟನೆಗೆ ಅವಕಾಶ ಕೊಡದಂತೆ ಸೇನೆಗೆ ನೆರವು ನೀಡಿದೆ. ಹಲವು ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಇದ್ದರೂ ಅಲ್ಲಲ್ಲಿ ಘರ್ಷಣೆಗಳು ನಡೆದ ಬಗ್ಗೆ ವರದಿಯಾಗಿದೆ.
ಟ್ರಂಪ್ ಗೆಲುವಿನ ಸಂಭ್ರಮಕ್ಕೆ ತಡೆ
ಅಮೆರಿಕ ಚುನಾವಣೆಯಲ್ಲಿ ಟ್ರಂಪ್ ಆಯ್ಕೆಯಾಗಿ ರುವುದಕ್ಕೆ ಹರ್ಷ ವ್ಯಕ್ತಪಡಿಸಿ ಢಾಕಾದಲ್ಲಿ ಆಯೋಜಿಸಲು ಉದ್ದೇ ಶಿ ಸಿದ್ದ ಕಾರ್ಯಕ್ರಮಕ್ಕೆ ಸೈನಿಕರು ತಡೆಯೊಡ್ಡಿದ್ದಾರೆ. ಪ್ಲಕಾರ್ಡ್ ಸಹಿತ ಮೆರವಣಿಗೆ ನಡೆಸುವುದಕ್ಕೆ ನಿಷೇದ ಹೇರಿದ ಅಧಿಕಾರಿಗಳು, ಮೆರವಣಿಗೆ ಆಯೋಜಕ ರನ್ನು ಬಂಧಿಸಿದ್ದಾರೆ. ಕೆಲವು ದಿನಗಳ ಹಿಂದೆ ಟ್ರಂಪ್ ಹಿಂದೂಗಳ ಮೇಲಿನ ದಾಳಿ ಖಂಡಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL 2025: ಸಾತಂತ್ರ್ಯ ನೀಡುವ ತಂಡವೇ ನನ ಆದ್ಯತೆ: ಕೆ.ಎಲ್.ರಾಹುಲ್
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Shimoga: ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ನಾಪತ್ತೆಯಾಗಿದ್ದ ಮೂವರ ಶವ ಪತ್ತೆ
Sandalwood: ಮುಹೂರ್ತದಲ್ಲಿ ‘ದಿ ಟಾಸ್ಕ್’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.