Bengaluru: 3 ಲಕ್ಷ ರೂ.ನ ಪ್ರೀಮಿಯಂ ವಿಗ್ ಕೊಡದ ಕ್ಲಿನಿಕ್ಗೆ 4 ಲಕ್ಷ ರೂಪಾಯಿ ದಂಡ
Team Udayavani, Nov 11, 2024, 11:01 AM IST
ಬೆಂಗಳೂರು: ವ್ಯಕ್ತಿಯೊಬ್ಬರಿಗೆ ಸರಿ ಹೊಂದುವ ಒರಿಜಿನಲ್ ಪ್ರೀಮಿಯಂ ಹೇರ್ ವಿಗ್ ನೀಡುವುದಾಗಿ 3 ಲಕ್ಷ ರೂ. ಪಡೆದು, ಸಾಮಾನ್ಯ ವಿಗ್ ನೀಡಿದ ಕ್ಲಿನಿಕ್ವೊಂದಕ್ಕೆ ಗ್ರಾಹಕ ವ್ಯಾಜ್ಯಗಳ ನ್ಯಾಯಾಲಯ 4 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ನಗರದ 36 ವರ್ಷದ ವ್ಯಕ್ತಿಯೊಬ್ಬರು ಹೇರ್ ಕೇರ್ ಕ್ಲಿನಿಕ್ಗೆ 2021ರ ನವೆಂಬರ್ನಲ್ಲಿ ಭೇಟಿ ನೀಡಿದ್ದರು. ಈ ವೇಳೆ ತನಗೆ ಸರಿಹೊಂದುವ ಪ್ರೀಮಿಯಂ ಹೇರ್ ವಿಗ್ ಬೇಡಿಕೆ ಇಟ್ಟಿದ್ದಾರೆ. ಅವರ ಮನವಿ ಸ್ಪಂದಿಸಿದ ಸಂಸ್ಥೆಯು ಪ್ರೀಮಿಯಂ ಗುಣಮಟ್ಟದ ವಿಗ್ ನೀಡುವುದಾಗಿ ಭರವಸೆ ನೀಡಿತ್ತು. ಅದಕ್ಕಾಗಿ 3 ಲಕ್ಷ ವೆಚ್ಚವಾಗುವುದಾಗಿ ತಿಳಿಸಿತ್ತು. ಅದರಂತೆ ದೂರುದಾರ ಪಾವತಿ ಮಾಡಿದ್ದಾರೆ. ನಿಗದಿತ ಸಮಯಕ್ಕೆ ನೈಜ ಹೇರ್ ವಿಗ್ ಬದಲಾಗಿ ಸಾಮಾನ್ಯ ದರ್ಜೆ ವಿಗ್ ನೀಡಿದೆ. ಇದರಿಂದ ಬೇಸೆತ್ತ ಗ್ರಾಹಕ ಬೆಂಗಳೂರು ಒಂದನೇ ಹೆಚ್ಚುವರಿ ಗ್ರಾಹಕ ವ್ಯಾಜ್ಯಗಳ ಕೋರ್ಟ್ಗೆ ದೂರು ನೀಡಿದ್ದರು. ವಾದ ವಿವಾದ ಪರಿಶೀಲನೆ ನಡೆಸಿದ ನ್ಯಾಯಾಲಯವು, 4 ಲಕ್ಷ ರೂ. ಪಾವತಿಸುವಂತೆ ತೀರ್ಪು ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.