Kalaburagi: ವಕ್ಫ್ ರದ್ದುಗೊಳಿಸಿ ಸನಾತನ ಮಂಡಳಿ ರಚಿಸುವಂತೆ ಆಗ್ರಹಿಸಿ ಬೀದಿಗಿಳಿದ ಮಠಾಧೀಶರು


Team Udayavani, Nov 11, 2024, 4:11 PM IST

Kalaburagi: ವಕ್ಫ್ ರದ್ದುಗೊಳಿಸಿ ಸನಾತನ ಮಂಡಳಿ ರಚಿಸುವಂತೆ ಆಗ್ರಹಿಸಿ ಬೀದಿಗಿಳಿದ ಮಠಾಧೀಶರು

ಕಲಬುರಗಿ: ರೈತರ ಜಮೀನು ಹಾಗೂ ಮಠ ಮಂದಿರಗಳ ಆಸ್ತಿಯಲ್ಲಿ ವಕ್ಫ್ ನಮೂದನೆ ಮಾಡುತ್ತಿರುವುದು ಸಮಾಜದಲ್ಲಿ ಅಶಾಂತಿ ಹಾಗೂ ತಲ್ಲಣ ನಿರ್ಮಾಣ ಮಾಡುವುದು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ವಕ್ಫ್ ಮಂಡಳಿ ರದ್ದುಗೊಳಿಸಿ ಹಿಂದೂ ನಾಗರೀಕರ ವೇದಿಕೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನಾ‌ಡಿನ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು. ‌

ಕಲಬುರಗಿ ಜಿಲ್ಲೆಯಲ್ಲಿ ನೂರಾರು ವರ್ಷಗಳಿಂದ ಉಳುಮೆ ಮಾಡುತ್ತಿರುವ ಜಮೀನು, ಮಠ, ಮಂದಿರಗಳ ಆಸ್ತಿಗಳ ಮೇಲೆ ವಕ್ಫ್ ಮಂಡಳಿ ತನ್ನ ಹೆಸರಿಗೆ ಬದಲಾವಣೆ ಮಾಡುತ್ತಿರುವುದನ್ನು ತಕ್ಷಣ ತಡೆಹಿಡಿದು ಹಿಂದುಗಳಿಗೂ ಕೂಡಾ ಸನಾತನ ಮಂಡಳಿ ರಚನೆ ಮಾಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.‌

ರಾಜ್ಯಾದ್ಯಂತ ರೈತರು ಉಳುಮೆ ಮಾಡುತ್ತಿರುವ ಜಮೀನು, ಹಿಂದುಗಳ ಮಠ, ಮಂದಿರಗಳ ಮೇಲೆ ಹಾಗು ಸಂರಕ್ಷಿತ ಸ್ಮಾರಕಗಳ ಮೇಲೆ ವಕ್ಫ್ ಮಂಡಳಿ ಹೆಸರಿಗೆ ಅಸ್ತಿ ವರ್ಗಾವಣೆ ಮಾಡುತ್ತಿರುವುದು ಮತ್ತು ಪ್ರಕರಣಗಳನ್ನು ದಾಖಲಿಸುತ್ತಿರುವುದು ನಿಜಕ್ಕೂ ಖಂಡನೀಯವಾಗಿದೆಯಲ್ಲದೇ ಸಮಸ್ತ ಹಿಂದೂಗಳ ಸ್ವಾಭಿಮಾನಕ್ಕೆ ಧಕ್ಕೆ ತರುವಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಮಠಾಧೀಶರ ಒಕ್ಕೂಟದ ನೇತೃತ್ವದಲ್ಲಿ ನಾಡಿನ ವಿವಿಧ ಮಠಾಧೀಶರು ಸಹ ಪಾಲ್ಗೊಂಡು, ಈಗಾಗಲೇ ಸುಮಾರು ಹಿಂದುಗಳ ಆಸ್ತಿಗಳ ಪಹಣಿಯಲ್ಲಿ ವಕ್ಷ್ ಬೋರ್ಡ್ ಎಂದು ಬಂದಿದ್ದು, ಅದನ್ನು ಈ ಕೂಡಲೇ ತೆಗೆದುಹಾಕಿ ಹಿಂದೂಗಳಿಗೆ ಮಾರಕವಾಗಿರುವ ವಕ್ಫ್ ಬೋರ್ಡ್ ರದ್ದುಗೊಳಿಸಿ ಎಲ್ಲಾ ಹಿಂದೂಗಳಿಗಾಗಿ ಸನಾತನ ಮಂಡಳಿ ರಚಿಸುವಂತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಬೆಕೆಂದು ಆಗ್ರಹಿಸಿದರು.‌

ಹಿಂದೂ ನಾಗರಿಕ ಸಮಿತಿಯ ಸಂಚಾಲಕ ಎಂ ಎಸ್ ಪಾಟಾಲ ನರಿಬೋಳ ಮಾತನಾಡಿ ವಕ್ಷ್ ಬೋರ್ಡ್ ತಕ್ಷಣದಿಂದ ಜಾರಿಗೆ ಬರುವಂತೆ ರದ್ದು ಮಾಡಿ ವಕ್ಷ್ ಆಸ್ತಿ ರಾಷ್ಠ್ರೀಕರಣ ಮಾಡಬೇಕು‌, ಇಲ್ಲವೇ ಸನಾತನ ಮಂಡಳಿ ರಚಿಸಿ ಪೇಜಾವರ ಶ್ರೀಗಳು ಹಾಗೂ ಜಗದ್ಗುರು ಪಂಚಾಚಾರ್ಯರು ಸೇರಿ ಹಿರಿಯ ಶ್ರೀಗಳ ಮಾರ್ಗದರ್ಶನ ಮಂಡಳಿ ಮಾಡಿ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಹಿಂದೂಗಳಿಗೆ ನ್ಯಾಯ ಒದಗಿಸಲು ಕೇಂದ್ರ ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು.

ಪಾಳಾದ ಗುರುಮುರ್ತಿ ಶಿವಾಚಾರ್ಯರು ಮಾತನಾಡಿ, ವಕ್ಷ್ ಬೋರ್ಡನಿಂದ ಹಿಂದೂಗಳ ಜಮೀನು,‌ ಮಠ ಮಂದಿರಗಳು ಹಾಗೂ ಮನೆಗಳನ್ನು ಕಬ್ಜಾ ಮಾಡಲು ಹೊರಟಿದೆ.‌ ಒಂದೇ ದೇಶದಲ್ಲಿ ಎರಡೆರಡು ಕಾನೂನು ಒಪ್ಪುವಂತದ್ದಲ್ಲ. ಕೂಡಲೆ ವಕ್ಷ್ ಬೋರ್ಡ ರದ್ದು ಪಡಿಸಿ ಹಿಂದುಗಳ ಆಸ್ತಿ ಕಬಳಿಕೆ ಕುರಿತಾಗಿ ಎದ್ದಿರುವ ಗೊಂದಲ ಸರಿಪಡಿಸಿಬೇಕು. ‌ಇಲ್ಲದಿದ್ದರೆ ಶಾಂತಿಯುತವಾದ ಹೋರಾಟ ಮುಂದೆ ದೇಶದ ಮಠಾಧೀಶರು, ಸಾಧು ಸಂತರು ಹಾಗೂ ಮತ್ತು ಇತರೆಲ್ಲರೂ ಸೇರಿ ಕ್ರಾಂತಿಕಾರಿಗಳಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಹ ಸಂಚಾಲಕ ಲಕ್ಮಿಕಾಂತ ಸ್ವಾದಿ ಸಹ ಮಾತನಾಡಿ, ಹಿಂದೂ ಧರ್ಮಕ್ಕೆ ಖುತ್ತು ಬಂದಾಗ ಹಿಂದೆ ಮುಂದೆ ನೋಡದೆ ಹೋರಾಟಕ್ಕಿಳಿಯುವ ಮಠಾಧೀಶರು ನಮ್ಮ ಹೋರಾಟದಲ್ಲಿದ್ದಾರೆ. ಇನ್ನು ಕೆಲ ಮಠಾಧೀಶರು ಅನಿವಾರ್ಯ ಕಾರಣಗಳಿಂದ ಬರಲಿಕ್ಕಾಗಿಲ್ಲಾ.  ಆದರೆ ಕೆಲ ಮಠಾಧೀಶರು ಹೇಗಿದ್ದಾರೆಂದರೆ ಅವರಿಗೆ ಧರ್ಮ ಹೋರಾಟ ಬೇಕಾಗಿಲ್ಲ. ಶೋಕಿ ಮಾಡುವುದರಲ್ಲಿ ಬಿಜಿ ಇದ್ದಾರೆ. ಮತ್ತು ರಾಜಕಾರಣಿ ಮನೆಗೆ ಕರೆದಾಗ ಹೋಗುತ್ತಾರೆ.‌ ಇದನ್ನು ಭಕ್ತರು ಈಗ ಅವಲೋಕಿಸುವ ಕಾಲ‌ ಬಂದಿದೆ ಎಂದರು.

ಅತನೂರಿನ ಗುರುಬಸವ ಶಿವಾಚಾರ್ಯರು, ತೊನಸನಳ್ಳಿ  ರೆವಣಸಿದ್ದ ಚರಂತೇಶ್ವರ ಶಿವಾಚಾರ್ಯರು, ಚಂದನಕೇರ ರನಚೆಟ್ಟಿ ಶಿವಾಚಾರ್ಯರು, ನಿಡಗುಂದಾ, ಕರುಣೆಶ್ವರ ಶಿವಾಚಾರ್ಯರು, ಸೂಗುರ ಚನ್ನರುದ್ರ ಮುನಿಸ್ವಾಮಿಗಳು, ಶಹಾಬಾದ್ ಬಾಲ ಬ್ರಹ್ಮಚಾರಿ ರಾಜ ಶಿವಯೋಗಿ ಮಹಾಸ್ವಾಮಿಗಳು, ಕೇದಾರಲಿಂಗ ದೇವರು, ಬಾಬುರಾವ್ ಪೂಜಾರಿ, ಪ್ರಮುಖರಾದ ಅನುದೀಪ್ ದಂಡೋತಿ, ಮಹೇಶ ಕೆಂಬಾವಿ ಸಿದ್ರಾಮಯ್ಯಾ ಹಿರೆಮಠ, ಸಿದ್ದು ಕಂದಗಲ್, ರವೀಂದ್ರ ಕುಲಕರ್ಣಿ, ಭೀಮಸನರಾವ ಕುಲಕರ್ಣಿ, ವೆಂಕಟೇಶ ಕುಲಕರ್ಣಿ, ನಂದು ಕಟ್ಟಿ ರಾಜೇಶ್ವರಿ ದೇಶಮುಖ್, ಸುಮಾ ಕವಲ್ದಾರ ಮಹಾದೇವಿ ಕೆಸರಟಗಿ, ದಯಾನಂದ ಪಾಟೀಲ, ಆದಿನಾಥ ಹಿರಾ, ಕಲ್ಯಾಣರಾವ ಪಾಟೀಲ, ಶ್ರವಣಕುಮಾರ ನಾಯಕ ಸಿದ್ರಾಮಪ್ಪಾ ಅಲಗೂಡಕರ್ ವಿರಣ್ಣಾ ಬೇಲೂರೆ,  ಸಂತೋಷ ಸೋನಾವಣೆ, ಸಿದ್ದು ಕಂದಗಲ್, ಸಂಗಮೇಶ್ ಕಾಳನೂರ್, ಚಿದಾನಂದ್ ಸ್ವಾಮಿ, ವಿಜಯಲಕ್ಷ್ಮಿ ಎಮ್ಮಿಗನೂರ್, ಮಹಾದೇವಿ ಪಾಟೀಲ, ಪ್ರಸನ್ನ ದೇಶಪಾಂಡೆ, ಶಿವು ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಡಿಸಿ ವಿರುದ್ಧ ಆಕ್ರೋಶ: ಪ್ರತಿಭಟನೆ ನಡೆಸಿ ಗಂಟೆಗಟ್ಟಲೆ ಘೋಷಣೆಗಳನ್ನು ಕೂಗುತ್ತಿದ್ದರೂ ಯಾವ ಅಧಿಕಾರಿಗಳು ಮನವಿ ಪತ್ರ ಸ್ವಿಕರಿಸಲು ಬಾರದೆ ಇದ್ದಿದ್ದರ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಹೋರಾಟಗಾರರು ಹಿಂದೂ ವಿರೋಧಿ ಜಿಲ್ಲಾದಿಕಾರಿಗೆ ಧಿಕ್ಕಾರ ಜಿಲ್ಲಾಧಿಕಾರಿ ವರ್ಗಾವಣೆ ಮಾಡಿ ಎಂದು ಘೋಷ ಎನ್ನುವ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಿಸಿದ ಪ್ರಸಂಗ ಇದೇ ಸಂದರ್ಭದಲ್ಲಿ ನಡೆಯಿತು.

ಟಾಪ್ ನ್ಯೂಸ್

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್‌ ಬಗ್ಗೆ ಸುಪ್ರೀಂ ಹೇಳಿದ್ದೇನು?

Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್‌ ಬಗ್ಗೆ ಸುಪ್ರೀಂ ಹೇಳಿದ್ದೇನು?

Tulu Movie: ಎರಡು ಭಾಗದಲ್ಲಿ ಬರುತ್ತಿದೆ ತುಳು ಸಿನಿಮಾ; ಹೊಸಚಿತ್ರಕ್ಕೆ ಮುಹೂರ್ತ

Tulu Movie: ಎರಡು ಭಾಗದಲ್ಲಿ ಬರುತ್ತಿದೆ ತುಳು ಸಿನಿಮಾ; ಹೊಸಚಿತ್ರಕ್ಕೆ ಮುಹೂರ್ತ

Kollywood: ಧನುಷ್‌ – ಐಶ್ವರ್ಯಾ ವಿಚ್ಚೇದನ ಪ್ರಕರಣ; ನ.27ಕ್ಕೆ ಅಂತಿಮ ತೀರ್ಪು

Kollywood: ಧನುಷ್‌ – ಐಶ್ವರ್ಯಾ ವಿಚ್ಚೇದನ ಪ್ರಕರಣ; ನ.27ಕ್ಕೆ ಅಂತಿಮ ತೀರ್ಪು

ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್

Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್

Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ

Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ

Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ

Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Contracters-Assoi

Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Maharashtra Election; BJP has nothing but 370: Mallikarjuna Kharge

Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ

Kalaburagi: Govt order to investigate KKRDB grant illegality: Complaint to election commission

Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು

MUST WATCH

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

ಹೊಸ ಸೇರ್ಪಡೆ

KMC: New Medical Oncology Outpatient, Chemotherapy Day Care Center inaugurated

KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್‌ ಬಗ್ಗೆ ಸುಪ್ರೀಂ ಹೇಳಿದ್ದೇನು?

Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್‌ ಬಗ್ಗೆ ಸುಪ್ರೀಂ ಹೇಳಿದ್ದೇನು?

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

Tulu Movie: ಎರಡು ಭಾಗದಲ್ಲಿ ಬರುತ್ತಿದೆ ತುಳು ಸಿನಿಮಾ; ಹೊಸಚಿತ್ರಕ್ಕೆ ಮುಹೂರ್ತ

Tulu Movie: ಎರಡು ಭಾಗದಲ್ಲಿ ಬರುತ್ತಿದೆ ತುಳು ಸಿನಿಮಾ; ಹೊಸಚಿತ್ರಕ್ಕೆ ಮುಹೂರ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.