Ahmedabad: ದೇಶ ವಿರೋಧಿಗಳಿಂದ ಸಮಾಜ ವಿಭಜಿಸಲು ಯತ್ನ: ಮೋದಿ ವಾಗ್ಧಾಳಿ
ವಿಪಕ್ಷಗಳ ವಿರುದ್ಧ ಪ್ರಧಾನಿ ಆಕ್ರೋಶ; ಜಾತಿ, ಧರ್ಮದ ಹೆಸರಲ್ಲಿ ವಿಭಜನೆ ಯತ್ನ
Team Udayavani, Nov 11, 2024, 10:23 PM IST
ಅಹಮದಾಬಾದ್:ಕೆಲ ದೇಶ ವಿರೋಧಿಗಳು ತಮ್ಮ ಸ್ವಹಿತಾಸಕ್ತಿಗಾಗಿ ಸಮಾಜವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದು ಜನರು ಅವರ ಉದ್ದೇಶದ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ಒಗ್ಗಟ್ಟಾಗಿ ಸೋಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ. ಜಾರ್ಖಂಡ್ ಮತ್ತು ಮಹಾರಾಷ್ಟ್ರ ಚುನಾವಣಾ ಪ್ರಚಾರದಲ್ಲಿ ದೇಶ ವ್ಯಾಪಿ ಜಾತಿ ಗಣತಿ ನಡೆಸಬೇಕು ಎಂಬ ಬೇಡಿಕೆಯನ್ನು ಪ್ರಬಲವಾಗಿ ಮಂಡಿಸುತ್ತಿರುವಂತೆಯೇ ಪ್ರಧಾನಿ ಈ ಮಾತುಗಳನ್ನಾಡಿದ್ದಾರೆ.
ಗುಜರಾತ್‌ನ ವಡ್ತಾಲ್‌ನಲ್ಲಿ ಶ್ರೀ ಸ್ವಾಮಿ ನಾರಾಯಣ ದೇಗುಲದ 200ನೇ ವಾರ್ಷಿಕೋತ್ಸವದಲ್ಲಿ ಸೇರಿದ ಭಕ್ತರನ್ನು ಉದ್ದೇಶಿಸಿ ವಚ್ಯುವಲ್ ಮೂಲಕ ಮಾತನಾಡಿದ ಪ್ರಧಾನಿ, “2047ಕ್ಕೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲು ಒಗ್ಗಟ್ಟು ಮತ್ತು ಐಕ್ಯತೆ ಅಗತ್ಯ. ಆದರೆ ಕೆಲವರು ಸಮಾಜವನ್ನು ಜಾತಿ, ಧರ್ಮ, ಭಾಷೆ, ಹಳ್ಳಿ-ನಗರದ ಸಾಲಿನಲ್ಲಿ ತಮ್ಮ ಸ್ವಹಿತಾಸಕ್ತಿಗಾಗಿ ಒಡೆಯಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಅವರ ಸಂಕುಚಿ ಮನೋಭಾವ ಕೂಡ ಕಾರಣ. ಆದರೆ, ನಾವು ಇದಕ್ಕೆ ಅವಕಾಶ ನೀಡದೆ ಅವರನ್ನು ಸೋಲಿಸಬೇಕು ಎಂದು ಹೇಳಿದ್ದಾರೆ. ಸ್ವಾಮಿ ನಾರಾಯಣ ಪಂಥದ ಸಂತರು, ನಾಗರಿಕರು ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿಸಲು ಪಣ ತೊಡಬೇಕು ಎಂದು ಕರೆ ನೀಡಿದ್ದಾರೆ. ದೇಶವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಮೊದಲು ಸ್ವಾವಲಂಬನೆ ಸಾಧಿಸಬೇಕು. ಅದಕ್ಕಾಗಿ ಎಲ್ಲರೂ ಕೈಜೋಡಿಸಬೇಕು ಎಂದು ಮೋದಿ ಮನವಿ ಮಾಡಿದ್ದಾರೆ.
ಜಾರ್ಖಂಡ್ ಮತ್ತು ಮಹಾರಾಷ್ಟ್ರಗಳಲ್ಲಿ ವಿಧಾನಸಭೆ ಚುನಾವಣಾ ರ್‍ಯಾಲಿಗಳಲ್ಲಿ ಮಾತನಾಡಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ವಿಪಕ್ಷಗಳು ಸಮಾಜವನ್ನು ಜಾತಿ ಆಧರಿತವಾಗಿ ಒಡೆಯಲು ಮುಂದಾಗಿವೆ ಎಂದು ಆರೋಪಿಸಿದ್ದರು. ಹೀಗಾಗಿಯೇ ಅವರು “ಒಂದಾಗಿದ್ದರೆ ಎಲ್ಲರೂ ಸುರಕ್ಷಿತರಾಗಿರುತ್ತಾರೆ’ ಎಂಬ ಘೋಷ ವಾಕ್ಯವನ್ನು ಪ್ರಚಾರದ ವೇಳೆ ಪ್ರಸ್ತಾಪಿಸಿದ್ದರು.
ಮೋದಿ ಹೇಳಿದ್ದೇನು?
– 2047ಕ್ಕೆ ದೇಶ ಅಭಿವೃದ್ಧಿ ಹೊಂದಲು ಎಲ್ಲರ ಒಗ್ಗಟ್ಟು ಅಗತ್ಯ
– ಕೆಲವರಿಂದ ಸ್ವಹಿತಾಸಕ್ತಿಗಾಗಿ ದೇಶ ವಿಭಜಿಸಲು ಯತ್ನ
– ಸಂಕುಚಿತ ಮನೋಭಾವನೆ ಕೂಡ ಇಂಥ ಪ್ರಯತ್ನಗಳಿಗೆ ಕಾರಣ
– ಹೀಗಾಗಿ ನಾಗರಿಕರು ಎಚ್ಚರಿಕೆಯಿಂದ ಇರಬೇಕು
– ದೇಶ ಸ್ವಾವಲಂಬನೆ ಸಾಧಿಸಲು ಎಲ್ಲರ ಸಹಕಾರ ಅಗತ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kasturi Shankar: ನಟಿ ಕಸ್ತೂರಿ ಶಂಕರ್ ಜಾಮೀನು ಅರ್ಜಿ ವಜಾ; ಶೀಘ್ರ ಬಂಧನ ಸಾಧ್ಯತೆ
Rajasthan: ಚುನಾವಣ ಅಧಿಕಾರಿ ಮೇಲೆ ಹಲ್ಲೆ; ಪ್ರತಿಭಟನೆ ನಡುವೆ ನರೇಶ್ ಮೀನಾ ಬಂಧನ!
ಎಡ ಕಣ್ಣಿನ ಬದಲು ಬಲ ಕಣ್ಣಿಗೆ ಶಸ್ತ್ರಚಿಕಿತ್ಸೆ… ಮನೆಗೆ ಬಂದಾಗಲೇ ಗೊತ್ತು ವೈದ್ಯರ ಯಡವಟ್ಟು
Waqf Board Case: ಆಪ್ ಶಾಸಕ ಅಮಾನತುಲ್ಲಾ ಖಾನ್ ಗೆ ಜಾಮೀನು
Mumbai: ಬಾಬಾ ಸಿದ್ದೀಕಿ ಸಾವು ದೃಢೀಕರಿಸಲು ಆಸ್ಪತ್ರೆ ಬಳಿ 30 ನಿಮಿಷ ಕಾದು ಕುಳಿತಿದ್ದ ಹಂತಕ
MUST WATCH
ಹೊಸ ಸೇರ್ಪಡೆ
Yadagiri: ಮನೆ ಮೇಲೆ ಗಾಂಜಾ ಗಿಡ ಬೆಳೆದ ವ್ಯಕ್ತಿ ಬಂಧನ
Kasturi Shankar: ನಟಿ ಕಸ್ತೂರಿ ಶಂಕರ್ ಜಾಮೀನು ಅರ್ಜಿ ವಜಾ; ಶೀಘ್ರ ಬಂಧನ ಸಾಧ್ಯತೆ
Rajasthan: ಚುನಾವಣ ಅಧಿಕಾರಿ ಮೇಲೆ ಹಲ್ಲೆ; ಪ್ರತಿಭಟನೆ ನಡುವೆ ನರೇಶ್ ಮೀನಾ ಬಂಧನ!
Maryade Prashne: ಪ್ರಶ್ನೆ ಕೇಳಲು ಬಂದ ಮರ್ಯಾದಸ್ತರು
CTRavi; ಯಾರು,ಯಾರನ್ನು,ಯಾವಾಗ ಖರೀದಿಸಲು ಪ್ರಯತ್ನಿಸಿದ್ದಾರೆ?: ಸಿಎಂಗೆ ಸಿ.ಟಿ.ರವಿ ಪ್ರಶ್ನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.