Court; ನ್ಯಾಯಾಂಗದ ತೀರ್ಪಿನಲ್ಲಿ ಕನ್ನಡ ಯಾಕೆ ಅನಿವಾರ್ಯ? ಆಗಬೇಕಾದ್ದೇನು?

ನ್ಯಾಯಾಲಯಗಳ ತೀರ್ಪುಗಳು ಕನ್ನಡದಲ್ಲಿ ದೊರೆಯುವಂತಾಗಬೇಕು... ಕನ್ನಡದ ತೀರ್ಪುಗಳಿಂದ ಕಕ್ಷಿದಾರರು, ಜನರಿಗೂ ಹೆಚ್ಚು ಅನುಕೂಲ

Team Udayavani, Nov 12, 2024, 6:50 AM IST

highcourt

ಸರಕಾರದ ಆಡಳಿತ ಭಾಷೆಯಿಂದ ಜನ ಸಾಮಾನ್ಯರ ನಿತ್ಯ ವ್ಯವಹಾರಗಳವರೆಗೆ ಇಂಗ್ಲಿಷ್‌ ಭಾಷೆ ಸಾಕಷ್ಟು ಪ್ರಭಾವಿಸಿದೆ. ಇದಕ್ಕೆ ನ್ಯಾಯಾಂಗವೂ ಹೊರತಾಗಿಲ್ಲ. ಕಾನೂನು ಪರಿಭಾಷೆ­, ತಾಂತ್ರಿಕ ಶಬ್ದಗಳು, ವ್ಯಾವಹಾರಿಕ ಭಾಷೆ ಎಲ್ಲವೂ ಇಂಗ್ಲಿಷ್‌ನಲ್ಲೆ ಹೆಚ್ಚಾಗಿ ನಡೆಯುತ್ತಿದ್ದ ಸಂದರ್ಭದಲ್ಲಿ, ಜನಸಾಮಾನ್ಯರಿಗೆ ಸರಳವಾಗಿ ಅರ್ಥವಾಗಲು ಕನ್ನಡ­ದಲ್ಲಿ ಪ್ರಕರಣಗಳ ತೀರ್ಪು ನೀಡುವ ಕೆಲಸ ಆರಂಭಗೊಂಡಿತು. ಆದರೂ ಕನ್ನಡದಲ್ಲಿ ತೀರ್ಪು ನೀಡಲು ಸಾಕಷ್ಟು ಸವಾಲುಗಳೂ ಇವೆ…

ಕರ್ನಾಟಕ ಏಕೀಕರಣವಾಗಿ, ರಾಜ್ಯದ ಆಡಳಿತ ಭಾಷೆ ಕನ್ನಡವಾಗಿ, ಸರಕಾರದ ಎಲ್ಲ ಇಲಾಖೆಗಳಲ್ಲಿ ಕನ್ನಡ ಜಾರಿಗೆ ಬಂದಿತಾದರೂ, ನ್ಯಾಯಾಂಗದಲ್ಲಿ ಅದರಲ್ಲೂ ಮುಖ್ಯವಾಗಿ ಉಚ್ಚ ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ವ್ಯವಹಾರಿಕ ಭಾಷೆಯಾಗಿ ಕನ್ನಡ ಜಾರಿಗೆ ಬರಲಿಲ್ಲ. ರಾಜ್ಯದಲ್ಲಿ ಸರಕಾರಿ ಇಲಾಖೆಗಳ ವ್ಯವಹಾರಗಳು ಆರಂಭದಿಂದಲೂ ಕನ್ನಡದಲ್ಲೇ ಇರುವುದರಿಂದ ಕನ್ನಡಿಗರಿಗೆ ಯಾವುದೇ ತೊಂದರೆ­ಯಾಗಿಲ್ಲ. ಆದರೆ ನ್ಯಾಯಾಂಗದಲ್ಲಿ ಅನೇಕ ಆದೇಶ, ತೀರ್ಪು­ಗಳು ಇಂಗ್ಲಿಷ್‌ನಲ್ಲಿ ಬರುತ್ತಿದ್ದ ಕಾರಣ, ಕನ್ನಡಿಗರಿಗೆ ಇದನ್ನು ಅರ್ಥೈಸಿಕೊ­ಳ್ಳುವುದು ಕಠಿನವೆನಿಸುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಜಿಲ್ಲಾ ಮಟ್ಟದ ನ್ಯಾಯಾ­ಲಯ­ಗಳಲ್ಲಿ ಕನ್ನಡ ಭಾಷಾ ಬಳಕೆ ಹೆಚ್ಚು­ತ್ತಿರುವುದು, ಕಕ್ಷಿದಾರರಿಗೆ ತಮ್ಮ ಪ್ರಕರಣದ ಕುರಿತು ಬರುವ ಆದೇಶ, ತೀರ್ಪುಗಳನ್ನು ಸರಿಯಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತಿದೆ. 2008ರಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ರಾಜ್ಯಾದ್ಯಂತ ಕನ್ನಡದಲ್ಲಿ ತೀರ್ಪು ನೀಡುವ ಜಿಲ್ಲಾ ಮಟ್ಟದ ನ್ಯಾಯಾಧೀಶರನ್ನು ಗುರುತಿಸಿ ಅವರನ್ನು ಸಮ್ಮಾನಿಸುತ್ತಿರುವುದು ಶ್ಲಾಘ­ನೀಯ ಸಂಗತಿ. ಈ ಮೂಲಕ ನ್ಯಾಯಾಧೀಶರು ಕನ್ನಡದಲ್ಲೇ ತೀರ್ಪು ನೀಡಲು ಪ್ರೋತ್ಸಾಹ ನೀಡಿದಂತಾಗಿದೆ.

ನನ್ನಲ್ಲಿನ ಕನ್ನಡ ಜಾಗೃತವಾಗಿದ್ದು…
ಕಾನೂನು ವ್ಯಾಸಂಗದ ಅನಂತರ ರಾಯಚೂರಿನಲ್ಲಿ ನಾನು ವಕೀಲಿ ವೃತ್ತಿ ಆರಂಭಿಸಿದೆ. ಆಗ ಜಿಲ್ಲಾಮಟ್ಟದ ನ್ಯಾಯಾಲಯಗಳಲ್ಲಿ ಕನ್ನಡದಲ್ಲಿ ವ್ಯವಹಾರ ನಡೆಯುತ್ತಿರಲಿಲ್ಲ. 1993ರಲ್ಲಿ ನಾನು ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶನಾಗಿ ನೇಮಕವಾದೆ. ಬೆಳಗಾವಿಯಲ್ಲಿ ಮೂರನೇ ಹೆಚ್ಚುವರಿ ನ್ಯಾಯಾಧೀಶನಾಗಿ ಕಾರ್ಯನಿರ್ವಹಿಸುವಾಗ ನನ್ನಲ್ಲಿನ ಕನ್ನಡತನ ಜಾಗೃತಗೊಂಡಿತು. ಅಂದಿನಿಂದ ಸಣ್ಣಪುಟ್ಟ ಆದೇಶಗಳನ್ನು ಕನ್ನಡದಲ್ಲಿ ಬರೆಯಲು ಪ್ರಾರಂಭಿಸಿದೆ. ಅನಂತರದ ದಿನಗಳಲ್ಲಿ ಹೆಚ್ಚು ಕ್ಲಿಷ್ಟಕರವಲ್ಲದ ಪ್ರಕರಣಗಳಿಗೆ ಸಂಪೂರ್ಣವಾಗಿ ಕನ್ನಡದಲ್ಲೇ ತೀರ್ಪು ಬರೆಯಲು ಆರಂಭಿಸಿದೆ. ಕನ್ನಡದಲ್ಲಿ ಅರ್ಜಿ ಸಲ್ಲಿಸಲು ಹಾಗೂ ಕನ್ನಡದಲ್ಲಿ ವಾದ ಮಂಡಿಸಲು ವಕೀಲರಿಗೆ ಪ್ರೋತ್ಸಾಹ ನೀಡಲು ಆರಂಭಿಸಿದೆ. ಬೆಳಗಾವಿ ಅನಂತರ ಮಂಗಳೂರು, ವಿಜಯಪುರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ ಇಲ್ಲೆಲ್ಲ ನಾನು ಕರ್ತವ್ಯ ನಿರ್ವಹಿಸಿದೆ. ನನ್ನ ಕಾರ್ಯಾವಧಿಯಲ್ಲಿ ಹೆಚ್ಚಿನ ಪ್ರಕರಣಗಳಿಗೆ ಕನ್ನಡದಲ್ಲೇ ತೀರ್ಪುಗಳನ್ನು ಬರೆಯುತ್ತ ಹೋದೆ.

ಉಚ್ಚ ನ್ಯಾಯಾಲಯದಲ್ಲಿ ಕನ್ನಡ

ಸಂವಿಧಾನದ ಅನುಚ್ಛೇದ 348ರಲ್ಲಿ ಸಂಸತ್ತು ಅನ್ಯಥಾ ಕಾನೂನು ಮಾಡದ ಹೊರತು ದೇಶದ ಉಚ್ಚ ನ್ಯಾಯಾಲಯ ಹಾಗೂ ಸರ್ವೋಚ್ಚ ನ್ಯಾಯಾಲಯದ ಭಾಷೆ ಇಂಗ್ಲಿಷ್‌ನಲ್ಲೇ ಇರಬೇಕೆಂದು ಉಲ್ಲೇಖೀಸಲಾಗಿದೆ. ಆದರೆ ಯಾವುದೇ ತೀರ್ಪು ಇಂಗ್ಲಿಷ್‌ ಭಾಷೆಯ ಜತೆಗೆ ಪ್ರಾದೇಶಿಕ ಭಾಷೆಯಲ್ಲಿ ಇರಬಾರದು ಎಂದೇನು ನಮೂದಿಸಿರಲಿಲ್ಲ. ಇದನ್ನು ಸರಿಯಾಗಿ ಅರ್ಥೈಸಿಕೊಂಡಿದ್ದ ನಾನು, 2008ರಲ್ಲಿ ನಡೆದ ಒಂದು ರಿಟ್‌ ಅರ್ಜಿ ವಿಚಾರಣೆಯಲ್ಲಿ ತೀರ್ಪನ್ನು ಇಂಗ್ಲಿಷ್‌ ಜತೆಗೆ ಕನ್ನಡದಲ್ಲಿಯೂ ನೀಡಿದೆ. ತೀರ್ಪಿನ ಕೊನೆಯಲ್ಲಿ ಇಂಗ್ಲಿಷ್‌ ಹಾಗೂ ಕನ್ನಡ ಭಾಷೆಗಳಲ್ಲಿ ನೀಡಿದ ಎರಡೂ ತೀರ್ಪು ಮೂಲ ತೀರ್ಪುಗಳೆಂದು ಪರಿಗಣಿಸಬೇಕು. ತೀರ್ಪಿನ ದೃಢೀಕೃತ ಪ್ರತಿ ಕೇಳಿದವರಿಗೆ ಎರಡೂ ಭಾಷೆಯ ಪ್ರತಿ ನೀಡಬೇಕು ಎಂಬುದಾಗಿ ಷರಾ ಬರೆದೆ. ಅಂದು ನಾನು ಕನ್ನಡದಲ್ಲಿ ನೀಡಿದ ತೀರ್ಪು, ಮರುದಿನ ಅನೇಕ ಪತ್ರಿಕೆಗಳಲ್ಲಿ ವರದಿಯಾಯಿತು.

ಸವಾಲು-ಪರಿಹಾರ
ಉಚ್ಚ ನ್ಯಾಯಾಲಯದ ತೀರ್ಪುಗಳನ್ನು ಕನ್ನಡದಲ್ಲಿ ನೀಡುವಲ್ಲಿ ಕೆಲವು ತಾಂತ್ರಿಕ ಅಡಚಣೆಗಳನ್ನು ಕಾಣಬಹುದು. ಉಚ್ಚ ನ್ಯಾಯಾಲಯದ ಮಹತ್ವದ ತೀರ್ಪುಗಳು, ರಾಷ್ಟ್ರಮಟ್ಟದ ಪ್ರತಿಷ್ಠಿತ ಕಾನೂನು ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತವೆ. ಒಂದು ವೇಳೆ ಮಹತ್ವದ ತೀರ್ಪುಗಳನ್ನು ಕನ್ನಡದಲ್ಲಿ ನೀಡಿ­ದಾಗ, ಅವು ರಾಷ್ಟ್ರಮಟ್ಟದ ಪತ್ರಿಕೆಗಳಲ್ಲಿ ಪ್ರಕಟವಾಗದೆ ಹೋಗ­ಬಹುದು. ನ್ಯಾಯಾಂಗದಲ್ಲಿ ಕನ್ನಡ ಎಂದಾಗ ಉಚ್ಚ ನ್ಯಾಯಾಲಯದ ಎಲ್ಲ ತೀರ್ಪು, ಆದೇಶಗಳು ಕಡ್ಡಾಯವಾಗಿ ಕನ್ನಡದಲ್ಲೇ ಇರಲಿ ಎಂದರ್ಥವಲ್ಲ. ಒಂದು ವೇಳೆ, ಯಾವುದಾದರೂ ತೀರ್ಪು, ಇದು ಮಹತ್ವದ್ದು… ರಾಷ್ಟ್ರಮಟ್ಟದ ಕಾನೂನು ಪತ್ರಿಕೆಗಳಲ್ಲಿ ಪ್ರಕಟಿಸಲು ಯೋಗ್ಯವೆನಿಸಿದಾಗ ಅದನ್ನು ನ್ಯಾಯಾಧೀಶರು ಇಂಗ್ಲಿಷ್‌ನಲ್ಲಿ ಬರೆಯಬಹುದು. ಉಳಿದ ಸಾಮಾನ್ಯ ಪ್ರಕರಣಗಳಲ್ಲಿ ಜನರಿಗೆ ಸರಳವಾಗಿ ಅರ್ಥೈಸಲು ಕನ್ನಡದಲ್ಲಿ ತೀರ್ಪು ನೀಡುವುದರಲ್ಲಿ ಯಾವ ಅಡಚಣೆಯೂ ಎದುರಾಗದು.

ಇನ್ನೊಂದು ತಾಂತ್ರಿಕ ಸಮಸ್ಯೆಯೆಂದರೆ, ಉಚ್ಚ ನ್ಯಾಯಾಲಯದ ತೀರ್ಪಿನಿಂದ ಬಾಧಿತರಾದವರು ಸಾಮಾನ್ಯವಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುತ್ತಾರೆ. ಉಚ್ಚ ನ್ಯಾಯಾಲಯದ ತೀರ್ಪು ಕನ್ನಡದಲ್ಲಿ ಇದ್ದಾಗ, ಅಲ್ಲಿನ ನ್ಯಾಯಮೂರ್ತಿ­ಗಳಿಗೆ ಭಾಷಾ ಸಮಸ್ಯೆಯಿಂದ ಅದನ್ನು ತಿಳಿದು­ಕೊಳ್ಳುವುದು ಕಷ್ಟ. ಹಾಗಾಗಿ ಇಂಗ್ಲಿಷ್‌ನಲ್ಲೇ ಉಚ್ಚ ನ್ಯಾಯಾಲಯದ ತೀರ್ಪು ಇರಬೇಕೆಂದು ಹಲವರು ವಾದಿಸುತ್ತಾರೆ. ಆದರೆ ರಾಜ್ಯದಲ್ಲಿನ ಅಪರಾಧ ಪ್ರಕರಣಗಳಲ್ಲಿ ಪೊಲೀಸರು ದಾಖಲಿಸಿ­ಕೊಳ್ಳುವ ದೂರು, ಸಾಕ್ಷಿಗಳ ಹೇಳಿಕೆ, ಪಂಚನಾಮೆ, ಶವ ಪರೀಕ್ಷೆ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಜತೆಗೆ ಸರಕಾರಿ ಇಲಾಖೆಗಳ ದಾಖಲೆ ಪ್ರತಿಗಳು, ನಾಗರಿಕ ಪ್ರಕರಣಗಳಲ್ಲಿ ವಕೀಲರು ಸಲ್ಲಿಸುವ ಅರ್ಜಿಗಳು ಹಾಗೂ ಉಚ್ಚ ನ್ಯಾಯಾಲಯದ ತೀರ್ಪು ಇವೆಲ್ಲ ಶೇ. 80ರಷ್ಟು ಕನ್ನಡದಲ್ಲೇ ಇರುತ್ತವೆ. ಒಂದು ವೇಳೆ ಈ ಪ್ರಕರಣಗಳ ಮೇಲ್ಮ­ನವಿಗಳು ವಿಚಾರಣೆ ಸರ್ವೋಚ್ಚ ನ್ಯಾಯಾಲಯಕ್ಕೆ ಹೋದರೆ, ಸಂಬಂಧಪಟ್ಟ ಎಲ್ಲ ಸಾಕ್ಷಾಧಾರ ದಾಖಲೆಗಳನ್ನು ಇಂಗ್ಲಿಷ್‌ ಭಾಷೆಗೆ ಭಾಷಾಂತರ ಮಾಡಿಸಬೇಕಾಗುತ್ತದೆ. ಹೀಗಿರುವಾಗ ಕನ್ನಡ ಭಾಷೆ­ಯಲ್ಲಿರೋ ತೀರ್ಪುಗಳನ್ನೂ ಭಾಷಾಂತರ ಮಾಡಿಸುವುದು ಕಷ್ಟಕರ ಕೆಲಸವೇನಲ್ಲ. ಹಾಗಾಗಿ ಇದರಿಂದಲೂ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.

ಸಾಮಾನ್ಯರಿಗೆ ಅನುಕೂಲ
ಉಚ್ಚ ನ್ಯಾಯಾಲಯದ ಆದೇಶ, ತೀರ್ಪುಗಳು ಇಂಗ್ಲೀಷ್‌ನಲ್ಲೇ ಇರಬೇಕೆಂದು ಸಂವಿಧಾನದಲ್ಲಿ ತಿಳಿಸಲಾಗಿದೆ. ಆದರೆ ಈ ನಿಯಮವನ್ನು ಸಂವಿಧಾನ ತಿದ್ದುಪಡಿ ಮೂಲಕ ಬದಲಿಸುವ ಸಂಪೂರ್ಣ ಅಧಿಕಾರ ಸಂಸತ್‌ಗಿದೆ. ನ್ಯಾಯಾಂಗದಲ್ಲೂ ಪ್ರಾದೇಶಿಕ ಭಾಷೆಯನ್ನು ಹೆಚ್ಚಾಗಿ ಬಳಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಆಸಕ್ತಿ ವಹಿಸಬೇಕಾಗಿದೆ. ಪ್ರಸ್ತುತ ದಿನಮಾನಕ್ಕೆ ಸಂವಿಧಾನದ ತಿದ್ದುಪಡಿ ಅಸಾಧ್ಯದ ಕೆಲಸವೇನಲ್ಲ. ಇತ್ತೀಚಿನ ವರ್ಷಗಳಲ್ಲಿ ಅನೇಕ ವಿದ್ಯಾರ್ಥಿಗಳು ಕನ್ನಡದಲ್ಲೇ ಕಾನೂನು ವ್ಯಾಸಂಗ ಮಾಡಿ, ವಕೀಲಿ ವೃತ್ತಿ ಆರಂಭಿಸುತ್ತಿದ್ದಾರೆ. ತಮ್ಮ ಪ್ರಕರಣಗಳ ಅರ್ಜಿ, ವಾದ-ಪ್ರತಿವಾದಗಳನ್ನು ಕನ್ನಡದಲ್ಲೇ ಮಂಡಿಸುತ್ತಿದ್ದಾರೆ. ಸಾಕಷ್ಟು ಕಾನೂನು ಪುಸ್ತಕಗಳು ಕನ್ನಡ ಭಾಷೆಯಲ್ಲಿ ಲಭ್ಯವಿವೆ. ನ್ಯಾಯಾಂಗದಲ್ಲಿ ಕನ್ನಡಕ್ಕೆ ಇಷ್ಟೆಲ್ಲ ಪೂರಕ ವಾತಾವರಣವಿರುವಾಗ, ಉಚ್ಚ ನ್ಯಾಯಾಲಯದ ತೀರ್ಪು ಸಹ ಕನ್ನಡದಲ್ಲೇ ಬಂದರೆ, ಇಂಗ್ಲಿಷ್‌ ಬರದ ಕಕ್ಷಿದಾರರಿಗೆ, ಸಾಮಾನ್ಯ ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಉಚ್ಚ ನ್ಯಾಯಾಲಯದ ತೀರ್ಪುಗಳನ್ನು ಇಂಗ್ಲಿಷ್‌ ಜತೆಗೆ ಕನ್ನಡದಲ್ಲಿ ಬರೆಯುವ ನಿಟ್ಟಿನಲ್ಲಿ ಸಂವಿಧಾನ ತಿದ್ದುಪಡಿ ಹಾಗೂ ನ್ಯಾಯಾಂಗ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರ ಇಚ್ಛಾಶಕ್ತಿ ಬಹು ಆವಶ್ಯಕವಾಗಿದೆ.

ಆಗಬೇಕಾದ್ದೇನು?
1 ಹೈಕೋರ್ಟ್‌ ಆದೇಶ, ತೀರ್ಪುಗಳು ಇಂಗ್ಲಿಷ್‌ನಲ್ಲೇ ಇರಬೇಕೆಂದು ಸಂವಿಧಾನದ ಹೇಳಿದೆ. ಆದರೆ ಈ ನಿಯಮವನ್ನು ಸಂವಿಧಾನ ತಿದ್ದುಪಡಿ ಮೂಲಕ ಬದಲಿಸಬೇಕಾದ ಅಗತ್ಯವಿದೆ.

2 ಕನ್ನಡದಲ್ಲೇ ವಾದ ಮಾಡಲು ನ್ಯಾಯವಾದಿಗಳಿಗೆ ಪ್ರೇರೇಪಿಸಬೇಕು. ಇದರಿಂದ ಕಕ್ಷಿದಾರ ಮತ್ತು ಜನರಿಗೆ ಸುಲಭವಾಗಿ ಅರ್ಥವಾಗಲಿದೆ.

3 ಉಚ್ಚ ನ್ಯಾಯಾಲಯದ ತೀರ್ಪುಗಳನ್ನು ಕನ್ನಡದಲ್ಲಿ ನೀಡುವಾಗ ಕೆಲವು ತಾಂತ್ರಿಕ ಅಡಚಣೆಗಳನ್ನು ಕಾಣಬಹುದು. ಅವುಗಳನ್ನು ನಿವಾರಿಸುವತ್ತ ಮುಂದಾಗಬೇಕು.

4 ಕನ್ನಡದಲ್ಲಿ ತೀರ್ಪು ನೀಡುವ ಜಿಲ್ಲಾ ಮಟ್ಟದ ನ್ಯಾಯಾಧೀಶರನ್ನು ಗುರುತಿಸಿ ಅವರನ್ನು ಸಮ್ಮಾನಿಸುತ್ತಿರುವುದು ಶ್ಲಾಘನೀಯ ಸಂಗತಿ. ಇದು ಹೀಗೆಯೇ ಮುಂದುವರಿಯಬೇಕು.

5 ತೀರ್ಪುಗಳನ್ನು ಇಂಗ್ಲಿಷ್‌ ಜತೆಗೆ ಕನ್ನಡದಲ್ಲಿ ಬರೆಯುವ ನಿಟ್ಟಿನಲ್ಲಿ ಸಂವಿಧಾನ ತಿದ್ದುಪಡಿ ಹಾಗೂ ನ್ಯಾಯಾಂಗ ಕ್ಷೇತ್ರದಲ್ಲಿ ಕಾರ್ಯನಿರ್ವಹಿ ಸುವವರ ಇಚ್ಛಾಶಕ್ತಿ ಬಹು ಆವಶ್ಯಕವಾಗಿದೆ.

*ನ್ಯಾ| ಅರಳಿ ನಾಗರಾಜ್‌, ವಿಶ್ರಾಂತ ನ್ಯಾಯಮೂರ್ತಿ,ಕರ್ನಾಟಕ ಉಚ್ಚ ನ್ಯಾಯಾಲಯ

ಟಾಪ್ ನ್ಯೂಸ್

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Vimana 2

Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

1-kanna

Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ

1-raga

Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ

ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

Belagavi: ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

ಶಾಸ್ತ್ರೀಯ ಸಂಗೀತದಲ್ಲಿ ಕನ್ನಡದ ಕೃತಿಗಳು ಕೇಳಿಬರಲಿ…

ಶಾಸ್ತ್ರೀಯ ಸಂಗೀತದಲ್ಲಿ ಕನ್ನಡದ ಕೃತಿಗಳು ಕೇಳಿಬರಲಿ…

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

1-p-r

US; ಒಬಾಮಾ ಮನೆಯಲ್ಲಿ ಪ್ರೇಯಸಿ ಕರೆಸಿ ಸೆ*ಕ್ಸ್ ಮಾಡಿದ ಸೀಕ್ರೆಟ್ ಸರ್ವಿಸ್ ಏಜೆಂಟ್ ವಜಾ!

POLICE-5

Malpe: ಜುಗಾರಿ ಅಡ್ಡೆಗೆ ದಾಳಿ, ವಶಕ್ಕೆ

POlice

Malpe: ಜೂಜಾಟ; 12 ಮಂದಿ ಅಂದರ್‌; ಪ್ರಕರಣ ದಾಖಲು

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.