Court: ಪುರುಷ ಜತೆ ಸ್ತ್ರೀ ಲಾಡ್ಜ್ ಗೆ ಹೋದ್ರೆ ಸೆ*ಕ್ಸ್ಗೆ ಸಮ್ಮತಿಯಲ್ಲ
ಬಾಂಬೆ ಹೈಕೋರ್ಟ್ನ ಗೋವಾ ಪೀಠ ತೀರ್ಪು
Team Udayavani, Nov 12, 2024, 7:35 AM IST
ಮುಂಬಯಿ: ಮಹಿಳೆಯೊಬ್ಬಳು ಪುರುಷನೊಂದಿಗೆ ಹೊಟೇಲ್ ರೂಂ ಕಾಯ್ದಿರಿಸಿ, ಆತನೊಂದಿಗೆ ಹೋದರೆ ಅದು ಲೈಂಗಿಕ ಕ್ರಿಯೆಗೆ ಸಮ್ಮತಿ ಸೂಚಿಸಿದಂತೆ ಅರ್ಥವಲ್ಲ ಎಂದು ಬಾಂಬೆ ಹೈಕೋರ್ಟ್ನ ಗೋವಾ ಪೀಠ ಹೇಳಿದೆ.
ಹೊಟೇಲ್ ರೂಮನ್ನು ಮಹಿಳೆ, ಪುರುಷರಿಬ್ಬರೂ ಸೇರಿಯೇ ಕಾಯ್ದಿರಿಸಿದ ಬಗ್ಗೆ ದಾಖಲೆಗಳಿದ್ದರೂ, ಅದರರ್ಥ ಲೈಂಗಿಕ ಕ್ರಿಯೆ ಬಗ್ಗೆ ಮಹಿಳೆಯ ಸಮ್ಮತಿಯಿದೆ ಎಂದಲ್ಲ ಎಂದು ನ್ಯಾಯಪೀಠ ಹೇಳಿದೆ. 2021ರಲ್ಲಿ ಮಡ್ಗಾಂವ್ನ ಕೋರ್ಟ್ ಅತ್ಯಾಚಾರ ಆರೋಪಿ ಗುಲ್ಶರ್ ಅಹ್ಮದ್ ಎಂಬಾತನ ಬಿಡುಗಡೆಗೆ ಆದೇಶಿಸಿತ್ತು.
ರೂಂ ಕಾಯ್ದಿರಿಸುವಾಗ ಮಹಿಳೆಯೂ ಭಾಗಿಯಾಗಿದ್ದರಿಂದ ಲೈಂಗಿಕ ಕ್ರಿಯೆಗೆ ಸಮ್ಮತಿ ನೀಡಿದ್ದಾಳೆ. ಹಾಗಾಗಿ ವ್ಯಕ್ತಿಯನ್ನು ಅಪರಾಧಿ ಎಂದು ಪರಿಗಣಿಸಲಾಗದು ಎಂದು ಕೋರ್ಟ್ ಆದೇಶಿಸಿತ್ತು.
ತೀರ್ಪಿನ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಕೋರ್ಟ್ “ದೂರು ನೀಡಿದಾಕೆ ಆರೋಪಿಯೊಂದಿಗೆ ತೆರಳಿದ್ದಕ್ಕೆ ಸಂದೇಹವಿಲ್ಲ. ಆಕೆ ಆರೋಪಿಯೊಂದಿಗೆ ರೂಮಿನೊಳಗೆ ತೆರಳಿದ್ದರೂ ಅದು ಲೈಂಗಿಕ ಕ್ರಿಯೆಗೆ ನೀಡಿದ ಸಮ್ಮತಿ ಎಂದು ಅಂಗೀಕರಿಸಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ
Kasturi Shankar: ನಟಿ ಕಸ್ತೂರಿ ಶಂಕರ್ ಜಾಮೀನು ಅರ್ಜಿ ವಜಾ; ಶೀಘ್ರ ಬಂಧನ ಸಾಧ್ಯತೆ
Rajasthan: ಚುನಾವಣ ಅಧಿಕಾರಿ ಮೇಲೆ ಹಲ್ಲೆ; ಪ್ರತಿಭಟನೆ ನಡುವೆ ನರೇಶ್ ಮೀನಾ ಬಂಧನ!
ಎಡ ಕಣ್ಣಿನ ಬದಲು ಬಲ ಕಣ್ಣಿಗೆ ಶಸ್ತ್ರಚಿಕಿತ್ಸೆ… ಮನೆಗೆ ಬಂದಾಗಲೇ ಗೊತ್ತು ವೈದ್ಯರ ಯಡವಟ್ಟು
Waqf Board Case: ಆಪ್ ಶಾಸಕ ಅಮಾನತುಲ್ಲಾ ಖಾನ್ ಗೆ ಜಾಮೀನು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.