Mangaluru: ಪಿಲಿಕುಳ “ನೇತ್ರಾವತಿ- ಫಲ್ಗುಣಿ” ಜೋಡುಕರೆ ಕಂಬಳ ಮುಂದೂಡಿಕೆ

ಗ್ರಾಮ ಪಂಚಾಯಿತಿ ಉಪಚುನಾವಣೆಯ ನೀತಿಸಂಹಿತೆ ಕಾರಣ

Team Udayavani, Nov 12, 2024, 7:27 AM IST

Pilikulka-Kambala

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ನ.17ರಂದು ನಿಗದಿಯಾಗಿದ್ದ ಬಹು ನಿರೀಕ್ಷಿತ ಪಿಲಿಕುಳ “ನೇತ್ರಾವತಿ- ಫಲ್ಗುಣಿ’ ಜೋಡುಕರೆ ಕಂಬಳವನ್ನು ಮುಂದೂಡಲು ದ.ಕ. ಜಿಲ್ಲಾಡಳಿತ ಸೋಮವಾರ ತೀರ್ಮಾನಿಸಿದೆ.

ರಾಜ್ಯಾದ್ಯಂತ ವಿವಿಧ ಗ್ರಾಮ ಪಂಚಾಯತ್‌ಗಳಿಗೆ ಉಪಚುನಾವಣೆ ಘೋಷಣೆಯಾಗಿ ನೀತಿಸಂಹಿತೆ ಜಾರಿಯಲ್ಲಿರುವ ಕಾರಣದಿಂದಾಗಿ ಪಿಲಿಕುಳ ಸರಕಾರಿ ಪ್ರಾಯೋಜಿತ ಕಂಬಳ ಆಯೋಜನೆಗೆ ತೊಡಕುಂಟಾಗಿದೆ. ಅದರಲ್ಲೂ ಪಿಲಿಕುಳ ಕಂಬಳ ನಡೆಯುವ ಪ್ರದೇಶದಲ್ಲಿರುವ ಮೂಡುಶೆಡ್ಡೆ ಪಂಚಾಯತ್‌ನಲ್ಲಿ ಉಪಚುನಾವಣೆ ಇರುವ ಕಾರಣದಿಂದ ಕಂಬಳ ನಡೆಸಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದ ನ.17ರ ದಿನಾಂಕವನ್ನು ಮುಂದೂಡಲು ತೀರ್ಮಾನಿಸಲಾಗಿದೆ.

“ಉದಯವಾಣಿ’ ಜತೆ ಮಾತನಾಡಿದ ದ.ಕ. ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್‌ ಕುಮಾರ್‌, “ನ.26ರ ವರೆಗೆ ಚುನಾವಣೆ ನೀತಿಸಂಹಿತೆ ಇರುವ ಕಾರಣದಿಂದ ಪಿಲಿಕುಳ ಕಂಬಳವನ್ನು ಮುಂದೂಡುವ ತೀರ್ಮಾನವನ್ನು ಸೋಮವಾರ ಕೈಗೊಳ್ಳಲಾಗಿದೆ. ನೀತಿಸಂಹಿತೆ ಮುಗಿದ ಬಳಿಕ ಕಂಬಳ ದಿನಾಂಕವನ್ನು ಜಿಲ್ಲಾಡಳಿತ ತೀರ್ಮಾನಿಸಲಿದೆ’ ಎಂದು ಹೇಳಿದರು.

ನ. 17ರಂದೇ ಕುದಿ
ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವೀಪ್ರಸಾದ್‌ ಶೆಟ್ಟಿ ಉದಯವಾಣಿಗೆ ಪ್ರತಿಕ್ರಿಯಿಸಿ, “ನ.17ರ ಪಿಲಿಕುಳ ಕಂಬಳಕ್ಕೆ ಕರೆ ನಿರ್ಮಾಣ ಸಹಿತ ಸರ್ವ ತಯಾರಿ ನಡೆಸಲಾಗಿತ್ತು. ಆದರೆ ಚುನಾವಣೆ ನೀತಿಸಂಹಿತೆ ಕಾರಣದಿಂದ ಕಂಬಳವನ್ನು ಮುಂದೂಡಲಾಗಿದೆ. ಜಿಲ್ಲಾಡಳಿತವೇ ಕಂಬಳ ಆಯೋಜಿಸುವ ಕಾರಣದಿಂದ ನೀತಿಸಂಹಿತೆ ಅನುಷ್ಠಾನ ಅನಿವಾರ್ಯವಾಗಿದೆ. ಆದರೆ ನ.17ರಂದು ಸಂಪ್ರದಾಯ ಪ್ರಕಾರ ಕುದಿ ನಡೆಸಲಾಗುವುದು.

ಮುಂದಿನ ಕಂಬಳ ದಿನಾಂಕದ ಬಗ್ಗೆ ಸಮಿತಿಯು ಆ ದಿನದಂದೇ ಚರ್ಚೆ ನಡೆಸಲಿದೆ. ನೀತಿಸಂಹಿತೆ ಮುಗಿದ ಬಳಿಕ ಈಗಾಗಲೇ ನಿಗದಿಯಾದ ಕಂಬಳದಲ್ಲಿ ಕೊಂಚ ಬದಲಾವಣೆ ಸಾಧ್ಯತೆ ಇದ್ದರೆ ನಡೆಸಿಕೊಂಡು ಆಗ ಪಿಲಿಕುಳ ಕಂಬಳ ಆಯೋಜಿಸುತ್ತೇವೆ. ಇಲ್ಲವಾದರೆ ವಾರದ ಮಧ್ಯೆ ಕಂಬಳ ಆಯೋಜನೆ ಬಗ್ಗೆಯೂ ಚಿಂತನೆ ನಡೆಸಲಾಗುವುದು’ ಎಂದು ಹೇಳಿದರು. ನೀತಿಸಂಹಿತೆ ಕಾರಣದಿಂದ “ಪಿಲಿಕುಳ ಕಂಬಳ ಮುಂದೂಡಿಕೆ ಸಾಧ್ಯತೆ’ ಎಂಬ ಶೀರ್ಷಿಕೆಯಲ್ಲಿ “ಉದಯವಾಣಿ’ಯು ನ.11ರಂದೇ ವರದಿ ಪ್ರಕಟಿಸಿತ್ತು.

ಟಾಪ್ ನ್ಯೂಸ್

3-vijayendra

Kalaburagi: ಕಾಂಗ್ರೆಸ್‌ನ ಒಳ ಜಗಳ ಸಾಬೀತುಪಡಿಸಿದ ಸಮಾವೇಶ: ವಿಜಯೇಂದ್ರ

1-vijju

Waqf ವಿರುದ್ಧ ವಿಜಯೇಂದ್ರ ನೇತೃತ್ವದ ಹೋರಾಟಕ್ಕೆ ಚಾಲನೆ

ಕರಾವಳಿಯ ಹೆದ್ದಾರಿ ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರ ಸಚಿವರನ್ನು ಭೇಟಿಯಾದ ಸಂಸದರ ತಂಡ

ಕರಾವಳಿಯ ಹೆದ್ದಾರಿ ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರ ಸಚಿವರನ್ನು ಭೇಟಿಯಾದ ಸಂಸದರ ತಂಡ

Tollywood: ನಾಗಚೈತನ್ಯ – ಶೋಭಿತಾ ವಿವಾಹ; ಇಲ್ಲಿದೆ ಸೆಲೆಬ್ರಿಟಿ ಗೆಸ್ಟ್‌ ಲಿಸ್ಟ್

Tollywood: ನಾಗಚೈತನ್ಯ – ಶೋಭಿತಾ ವಿವಾಹ; ಇಲ್ಲಿದೆ ಸೆಲೆಬ್ರಿಟಿ ಗೆಸ್ಟ್‌ ಲಿಸ್ಟ್

1-104

Bengal; 104 ವರ್ಷದ ವೃದ್ಧನಿಗೆ ಕೊನೆಗೂ ಜೈಲು ವಾಸದಿಂದ ಮುಕ್ತಿ!!

fadnavis

Mahayuti; ಮತ್ತೊಮ್ಮೆ ಮಹಾ ಸಿಎಂ ಆಗಿ ದೇವೇಂದ್ರ ಫಡ್ನವಿಸ್ ಆಯ್ಕೆ

TV Actor: ಕಾಡಿದ ಕ್ಯಾನ್ಸರ್ 45ರ ಹರೆಯದಲ್ಲಿ ಇಹಲೋಕ ತ್ಯಜಿಸಿದ ಜನಪ್ರಿಯ ನಟ

TV Actor: ಕಾಡಿದ ಕ್ಯಾನ್ಸರ್ 45ರ ಹರೆಯದಲ್ಲಿ ಇಹಲೋಕ ತ್ಯಜಿಸಿದ ಜನಪ್ರಿಯ ನಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Bantwal: ತುಂಬೆ ಹೆದ್ದಾರಿಯಲ್ಲಿ ನೀರು; ಪೆರಾಜೆ ರಿಕ್ಷಾ ನಿಲ್ದಾಣಕ್ಕೆ ಹಾನಿ

ಕರಾವಳಿಯ ಹೆದ್ದಾರಿ ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರ ಸಚಿವರನ್ನು ಭೇಟಿಯಾದ ಸಂಸದರ ತಂಡ

ಕರಾವಳಿಯ ಹೆದ್ದಾರಿ ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರ ಸಚಿವರನ್ನು ಭೇಟಿಯಾದ ಸಂಸದರ ತಂಡ

4

Subramanya: ಸಿದ್ಧಗೊಳ್ಳುತ್ತಿವೆ ಬೆತ್ತದ ತೇರು

2

Belthangady ಕೊಳಚೆ ಮತ್ತೆ ಸೋಮಾವತಿಗೆ!

1-bangla

Mangaluru;ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

MUST WATCH

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

udayavani youtube

60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

ಹೊಸ ಸೇರ್ಪಡೆ

3-vijayendra

Kalaburagi: ಕಾಂಗ್ರೆಸ್‌ನ ಒಳ ಜಗಳ ಸಾಬೀತುಪಡಿಸಿದ ಸಮಾವೇಶ: ವಿಜಯೇಂದ್ರ

1-vijju

Waqf ವಿರುದ್ಧ ವಿಜಯೇಂದ್ರ ನೇತೃತ್ವದ ಹೋರಾಟಕ್ಕೆ ಚಾಲನೆ

2-gadaga

Gadaga: ಸಂತ ರಾಜಕಾರಣಿ ಡಿ.ಆರ್. ಪಾಟೀಲ ಗ್ರಂಥ ಬಿಡುಗಡೆ

5

Bantwal: ತುಂಬೆ ಹೆದ್ದಾರಿಯಲ್ಲಿ ನೀರು; ಪೆರಾಜೆ ರಿಕ್ಷಾ ನಿಲ್ದಾಣಕ್ಕೆ ಹಾನಿ

ಕರಾವಳಿಯ ಹೆದ್ದಾರಿ ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರ ಸಚಿವರನ್ನು ಭೇಟಿಯಾದ ಸಂಸದರ ತಂಡ

ಕರಾವಳಿಯ ಹೆದ್ದಾರಿ ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರ ಸಚಿವರನ್ನು ಭೇಟಿಯಾದ ಸಂಸದರ ತಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.