Abishek Ambareesh: ಗಂಡು ಮಗುವಿಗೆ ಜನ್ಮ ನೀಡಿದ ಅವಿವಾ; ಅಂಬಿ ಮನೆಯಲ್ಲಿ ಸಂಭ್ರಮ
Team Udayavani, Nov 12, 2024, 10:34 AM IST
ಬೆಂಗಳೂರು: ಅಂಬಿ ಪುತ್ರ ಅಭಿಷೇಕ್ ಹಾಗೂ ಅವಿವಾ ಬಿದ್ದಪ್ಪ ತಂದೆ- ತಾಯಿಯಾದ ಸಂತಸದಲ್ಲಿದ್ದಾರೆ. ಮುದ್ದಾದ ಗಂಡು ಮಗುವಿಗೆ ಅವಿವಾ ಜನ್ಮ ನೀಡಿದ್ದಾರೆ.
ಮಂಗಳವಾರ (ನ.12ರಂದು) ಮುಂಜಾನೆ ಅವಿವಾ ಮಗುವಿಗೆ ಜನ್ಮ ನೀಡಿದ್ದಾರೆ. ಮೊಮ್ಮಗನನ್ನು ಎತ್ತಿಕೊಂಡು ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರು ಮುದ್ದಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
2023ರಲ್ಲಿ ಅಭಿಷೇಕ್(Abishek Ambareesh) – ಅವಿವಾ (Aviva Bidapa) ಮದುವೆ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನೆರವೇರಿತ್ತು. ಆ ಬಳಿಕ ರಿಸೆಪ್ಷನ್ ಕಾರ್ಯಕ್ರಮ ನಂತರ ಮಂಡ್ಯದಲ್ಲಿ ಬೀಗರ ಊಟವನ್ನು ಆಯೋಜಿಸಿದ್ದರು. ಇದೀಗ ಅಂಬಿ ಕುಟುಂಬ ತಮ್ಮ ಮನೆಗೆ ಮುದ್ದಾದ ಪುಟ್ಟ ಸದಸ್ಯನನ್ನು ಬರ ಮಾಡಿಕೊಂಡಿದೆ.
ಅವಿವಾ ಅವರ ಸೀಮಂತ ಶಾಸ್ತ್ರದ ಫೋಟೊಗಳು ವೈರಲ್ ಆಗಿತ್ತು. ಹಸಿರು ಸೀರೆ ಉಟ್ಟು ಅವಿವಾ ಪತಿಯ ಜತೆ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಮಂಗಳವಾರ ಬೆಳಗ್ಗೆ 8:30ರ ಹೊತ್ತಿಗೆ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅಂಬಿ ಮನೆಯ ಸಂಭ್ರಮದ ಸುದ್ದಿ ವೈರಲ್ ಆಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.