Pushpa 2: ಅಲ್ಲು ಅರ್ಜುನ್ ಜತೆ ಡ್ಯಾನ್ಸ್ ನಂಬರ್; ಶ್ರೀಲೀಲಾ ಪಡೆದ ಸಂಭಾವನೆ ಎಷ್ಟು?
Team Udayavani, Nov 12, 2024, 3:22 PM IST
ಹೈದರಾಬಾದ್: ವರ್ಷದ ಬಿಗೆಸ್ಟ್ ಪ್ಯಾನ್ ಇಂಡಿಯಾ (Pushpa 2: The Rule) ಸಿನಿಮಾಗಳಲ್ಲಿ ಒಂದಾಗಿರುವ ಅಲ್ಲು ಅರ್ಜುನ್ (Allu Arjun) ಅವರ ʼಪುಷ್ಪ-2ʼ ಮುಂದಿನ ತಿಂಗಳು ರಿಲೀಸ್ ಆಗಲಿದೆ.
ಟೀಸರ್, ಹಾಡಿನಿಂದ ಗಮನ ಸೆಳೆದ ಬಳಿಕ ಇದೀಗ ಚಿತ್ರ ಟ್ರೇಲರ್ ಮೂಲಕ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಲಿದೆ. ಇದೇ ನವೆಂಬರ್ 17 ರಂದು ಟ್ರೇಲರ್ ರಿಲೀಸ್ ಆಗಲಿದೆ.
ʼಪುಷ್ಪʼ ಸಿನಿಮಾದ ಮೊದಲ ಭಾಗದಲ್ಲಿ ನಟಿ ಸಮಂತಾ (Samantha Ruth Prabhu) ʼಊ ಅಂಟವಾʼ ಹಾಡಿಗೆ ಹೆಜ್ಜೆ ಹಾಕಿದ್ದರು.ʼಪುಷ್ಪ-2ʼ ಸಿನಿಮಾದಲ್ಲಿ ಕೂಡ ಐಟಂ ಹಾಡು ಇರಲಿದೆ. ಬಹುಭಾಷಾ ನಟಿ ಶ್ರೀಲೀಲಾ (Sreeleela) ಡ್ಯಾನ್ಸ್ ನಂಬರ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಅಲ್ಲು ಅರ್ಜುನ್ ಜತೆ ಹೆಜ್ಜೆ ಹಾಕಲಿರುವ ಶ್ರೀಲೀಲಾ ಪಡೆದ ಸಂಭಾವನೆ ಎಷ್ಟು ಎನ್ನುವುದರ ಕುರಿತು ವರದಿಯೊಂದು ಹೊರಬಿದ್ದಿದೆ.
ʼಪುಷ್ಪ-2ʼ ಸಿನಿಮಾದಲ್ಲಿನ ಐಟಂ ಸಾಂಗ್ನಲ್ಲಿ ಹೆಜ್ಜೆ ಹಾಕಲು ಶ್ರೀಲೀಲಾ 2 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ ಎಂದು ʼಸಿಯಾಸತ್ʼ ವರದಿ ಮಾಡಿದೆ.
ಸಮಂತಾ ʼಊ ಅಂಟವಾʼ ಹಾಡಿಗೆ 5 ಕೋಟಿ ರೂ. ಸಂಭಾವನೆಯನ್ನು ಪಡೆದಿದ್ದರು. ಶ್ರೀಲೀಲಾ ಅವರಿಗಿಂತ ಕಡಿಮೆ ಸಂಭಾವನೆಯನ್ನು ಪಡೆಯಲಿದ್ದಾರೆ ಎಂದು ವರದಿ ತಿಳಿಸಿದೆ.
ಈ ಹಿಂದೆ ಹಾಡಿಗಾಗಿ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅವರನ್ನು ಚಿತ್ರತಂಡ ಸಂಪರ್ಕ ಮಾಡಿತ್ತು. ಆದರೆ ಅವರ ಸಂಭಾವನೆ ಹೆಚ್ಚಿದ್ದ ಕಾರಣ ಅವರನ್ನು ಕೈಬಿಡಲಾಗಿತ್ತು ಎಂದು ವರದಿ ಆಗಿತ್ತು.
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಾಹದ್ ಫಾಸಿಲ್ ಮುಂತಾದ ಕಲಾವಿದರು ನಟಿಸಿರುವ ʼಪುಷ್ಪ-2ʼ ಇದೇ ಡಿ.5 ವರ್ಲ್ಡ್ ವೈಡ್ ರಿಲೀಸ್ ಆಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Kollywood: ʼಅಮರನ್ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?
Kollywood: ಧನುಷ್ – ಐಶ್ವರ್ಯಾ ವಿಚ್ಚೇದನ ಪ್ರಕರಣ; ನ.27ಕ್ಕೆ ಅಂತಿಮ ತೀರ್ಪು
Tollywood: ನಾನು ಸಿಂಗಲ್ ಅಲ್ಲ.. ರಶ್ಮಿಕಾ ಜತೆಗಿನ ಸಂಬಂಧ ದೃಢಪಡಿಸಿದ್ರಾ ದೇವರಕೊಂಡ?
MUST WATCH
ಹೊಸ ಸೇರ್ಪಡೆ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.