INDvsSA: ಸೆಂಚುರಿಯನ್‌ನಲ್ಲೂ ಕ್ವಿಕ್, ಬೌನ್ಸಿ ಟ್ರ್ಯಾಕ್?: ಸುಧಾರಿಸಬೇಕಿದೆ ಬ್ಯಾಟಿಂಗ್
Team Udayavani, Nov 13, 2024, 7:20 AM IST
ಸೆಂಚುರಿಯನ್: ಮೊದಲ ಟಿ20 ಪಂದ್ಯವನ್ನು ಗೆದ್ದು, ಎರಡನೇ ಮುಖಾಮುಖಿಯಲ್ಲೂ ಗೆಲುವಿನ ಸಾಧ್ಯತೆ ಯೊಂದನ್ನು ತೆರೆದಿರಿಸಿದ್ದ ಭಾರತ, ಆತಿ ಥೇಯ ದಕ್ಷಿಣ ಆಫ್ರಿಕಾಕ್ಕೆ ಸರಣಿ ಸಮಬಲದ ಅವಕಾಶವೊಂದನ್ನು ಮಾಡಿಕೊಟ್ಟಿದೆ. ಇದೀಗ ಬುಧವಾರ ಸೆಂಚುರಿಯನ್‌ನಲ್ಲಿ ನಿರ್ಣಾಯಕ ಪಂದ್ಯವನ್ನು ಆಡಲಿದೆ.
ಸರಣಿಯಲ್ಲಿನ್ನೂ 2 ಪಂದ್ಯ ಬಾಕಿ ಇದೆಯಾದರೂ ಬುಧವಾರದ ಮುಖಾ ಮುಖೀಯೇ ಹೆಚ್ಚು ಮಹತ್ವದ್ದಾಗಿದೆ. ಕಾರಣ, ಇದನ್ನು ಗೆದ್ದವರಿಗೆ ಸರಣಿ ಸೋಲಿನ ಅಪಾಯ ಎದುರಾಗದು. 4ನೇ ಹಾಗೂ ಅಂತಿಮ ಪಂದ್ಯ ಶುಕ್ರವಾರ ಜೊಹಾನ್ಸ್‌ಬರ್ಗ್ ನಲ್ಲಿ ನಡೆಯಲಿದೆ.
ಚಕ್ರವರ್ತಿ ಸ್ಪಿನ್ ಯಶಸ್ಸು
ಸೆಂಚುರಿಯನ್ ಮೂಲದ ಪ್ರಕಾರ ಇಲ್ಲಿನ “ಸೂಪರ್ ಸ್ಪೋರ್ಟ್ಸ್ ಪಾರ್ಕ್’ ಪಿಚ್ ಕೂಡ ಗೆಬೆರಾದಂತೆ ಕ್ವಿಕ್ ಮತ್ತು ಬೌನ್ಸಿಯಾಗಿದೆ. ಹೀಗಾಗಿ ದೊಡ್ಡ ಮೊತ್ತವನ್ನು ನಿರೀಕ್ಷಿಸುವುದು ತಪ್ಪಾಗುತ್ತದೋ ಏನೋ. ಎರಡೂ ಪಂದ್ಯಗಳಿಂದ ಅರಿವಾದ ಸಂಗತಿಯೆಂದರೆ, ಆಫ್ರಿಕಾ ಟ್ರ್ಯಾಕ್ ಬೌನ್ಸಿಯಾಗಿದ್ದರೂ ಸ್ಪಿನ್ ಮ್ಯಾಜಿಕ್ ನಡೆಯುತ್ತದೆ ಎಂಬುದು. ಆತಿಥೇಯ ಬ್ಯಾಟರ್ ವರುಣ್ ಚಕ್ರವರ್ತಿ ಅವರ ಸ್ಪಿನ್ ಎಸೆತಗಳನ್ನು ನಿಭಾಯಿಸಲುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.
ದ್ವಿತೀಯ ಪಂದ್ಯದಲ್ಲಿ ಭಾರತ 6ಕ್ಕೆ 124ರಷ್ಟು ಸಣ್ಣ ಮೊತ್ತವನ್ನು ಗಳಿಸಿಯೂ ಗೆಲುವಿನ ಸಾಧ್ಯತೆಯನ್ನು ತೆರೆದಿರಿಸಿತ್ತು. ಚಕ್ರವರ್ತಿ ದಾಳಿ ವೇಳೆ ಪಂದ್ಯ ಭಾರತದ ಕೈಯಲ್ಲೇ ಇತ್ತು. ರವಿ ಬಿಷ್ಣೋಯಿ ಕೂಡ ಹರಿಣಗಳಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದರು. ಸ್ಪಿನ್ ನಡೆಯುತ್ತದೆಂದು ಗೊತ್ತಿದ್ದೂ ಅಕ್ಷರ್ ಪಟೇಲ್ ಅವರನ್ನು ಒಂದೇ ಓವರ್‌ಗೆ ಸೀಮಿತಗೊಳಿಸಿದ್ದು ಅರ್ಥವಾಗದ ಸಂಗತಿ. ಕೊನೆ ಯಲ್ಲಿ ಪಾಂಡ್ಯ ಸಾಲು ಸಾಲು ವೈಡ್ ಎಸೆದರು, ಅರ್ಷದೀಪ್ ಮತ್ತು ಆವೇಶ್ ಖಾನ್ ಸರಾಗವಾಗಿ ಬೌಂಡರಿ ಬಿಟ್ಟುಕೊ ಟ್ಟರು. ಪಂದ್ಯ ಭಾರತದ ಕೈಯಿಂದ ಜಾರಿತು.
ಅರ್ಷದೀಪ್ ಡರ್ಬನ್‌ನಲ್ಲಿ 25ಕ್ಕೆ ಒಂದು ವಿಕೆಟ್ ಕೆಡವಿದರೆ, ಗೆಬೆರಾದಲ್ಲಿ ಒಂದು ವಿಕೆಟಿಗೆ 41 ರನ್ ನೀಡಿದರು. ಇವರ 3ನೇ ಹಾಗೂ 4ನೇ ಓವರ್‌ಗಳಲ್ಲಿ ಒಟ್ಟು 28 ರನ್ ಸೋರಿ ಹೋಯಿತು. ಸ್ಟಬ್ಸ್ ಒಂದೇ ಓವರ್‌ನಲ್ಲಿ 4 ಬೌಂಡರಿ ಬಾರಿಸಿ ಪಂದ್ಯಕ್ಕೆ ತಿರುವು ಕೊಟ್ಟರು. 3ನೇ ಪಂದ್ಯದಲ್ಲಿ ಯಶ್ ದಯಾಳ್ ಅಥವಾ ವಿಜಯ್‌ಕುಮಾರ್ ವೈಶಾಖ್‌ಗೆ ಅವಕಾಶ ಲಭಿಸೀತು.
ಪಿಚ್ ಹೇಗೇ ಇರಲಿ, ಭಾರತದ ಬ್ಯಾಟಿಂಗ್ ಕ್ಲಿಕ್ ಆಗಬೇಕಾದುದು ಅತೀ ಅಗತ್ಯ. ಮೊದಲ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರ ಶತಕದಿಂದ ಭಾರತದ ಸರದಿಗೊಂದು ಕಳೆ ಬಂದಿತ್ತು. ಆದರೆ ರವಿವಾರ ಸಂಜು ಸೇರಿದಂತೆ ಎಲ್ಲರೂ ವೈಫಲ್ಯ ಅನುಭವಿಸಿ ದರು. ಅಭಿಷೇಕ್, ಸೂರ್ಯ, ತಿಲಕ್, ರಿಂಕು, ಪಾಂಡ್ಯ ಸಿಡಿದರೆ ದೊಡ್ಡ ಮೊತ್ತ ಅಸಾಧ್ಯ ವೇನಲ್ಲ. ಬೇಕಿದ್ದರೆ ಬಿಗ್ ಹಿಟ್ಟರ್ ರಮಣ್‌ದೀಪ್ ಸಿಂಗ್ ಅವರಿಗೂ ಅವಕಾಶ ಕೊಟ್ಟು ನೋಡಬಹುದು.
ದ. ಆಫ್ರಿಕಾ ಬ್ಯಾಟಿಂಗ್ ಕೂಡ ಕ್ಲಿಕ್ ಆಗಿಲ್ಲ. ಮಾರ್ಕ್‌ರಮ್, ಕ್ಲಾಸೆನ್, ಮಿಲ್ಲರ್ ಸಿಡಿದಿಲ್ಲ. ಇವರಲ್ಲಿ ಒಬ್ಬರು ಮುನ್ನುಗ್ಗಿ ಬಾರಿಸಿದರೂ ಭಾರತಕ್ಕೆ ಅಪಾಯ ತಪ್ಪಿದ್ದಲ್ಲ.
ಸೆಂಚುರಿಯನ್‌ನಲ್ಲಿ ಒಂದೇ ಪಂದ್ಯ
ಸೆಂಚುರಿಯನ್‌ನಲ್ಲಿ ಈವರೆಗೆ ಭಾರತ ಆಡಿದ್ದು ಒಂದೇ ಟಿ20 ಪಂದ್ಯ. 2018ರ ಈ ಸೆಣಸಾಟದಲ್ಲಿ ದಕ್ಷಿಣ ಆಫ್ರಿಕಾ 6 ವಿಕೆಟ್‌ಗಳಿಂದ ಭಾರತವನ್ನು ಮಣಿಸಿತ್ತು. ಕೊಹ್ಲಿ ಪಡೆ 4ಕ್ಕೆ 188 ರನ್ ಮಾಡಿದರೆ, ದಕ್ಷಿಣ ಆಫ್ರಿಕಾ 18.4 ಓವರ್‌ಗಳಲ್ಲಿ 4ಕ್ಕೆ 189 ರನ್ ಬಾರಿಸಿತ್ತು. ಅಂದು ಆಡಿದ, ಇಂದೂ ಭಾರತ ತಂಡದಲ್ಲಿರುವ ಏಕೈಕ ಆಟಗಾರನೆಂದರೆ ಹಾರ್ದಿಕ್ ಪಾಂಡ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shikhar Dhawan: ನೇಪಾಳದಲ್ಲಿ ಟಿ20 ಕ್ರಿಕೆಟ್ ಲೀಗ್ ಆಡಲಿದ್ದಾರೆ ಶಿಖರ್ ಧವನ್
Ekamra: ನ.23ರಂದು ದೆಹಲಿಯಲ್ಲಿ ಏಷ್ಯಾದ ಅತಿದೊಡ್ಡ ಕ್ರೀಡಾ ಸಾಹಿತ್ಯಕೂಟ
IPL 2025: ಸಾತಂತ್ರ್ಯ ನೀಡುವ ತಂಡವೇ ನನ್ನ ಆದ್ಯತೆ: ಕೆ.ಎಲ್.ರಾಹುಲ್
INDvsSA: ಭುವನೇಶ್ವರ್ ಕುಮಾರ್ ರ ಟಿ20ಐ ದಾಖಲೆ ಮುರಿದ ವೇಗಿ ಅರ್ಶದೀಪ್ ಸಿಂಗ್
Arjun Tendulkar: 5 ವಿಕೆಟ್ ಕೆಡವಿದ ಅರ್ಜುನ್ ತೆಂಡುಲ್ಕರ್ ಐಪಿಎಲ್ ಆಯ್ಕೆಗೆ ಸಜ್ಜು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.