Thefte Case: ಕೆಲಸಕ್ಕಿದ್ದ ಮನೆಯಲ್ಲೇ ರೂ. 12 ಲಕ್ಷ. ಚಿನ್ನ ಕದ್ದಳು
Team Udayavani, Nov 13, 2024, 11:30 AM IST
ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ ಮಾಡಿದ್ದ ಯುವತಿಯನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬನ್ನೇರುಘಟ್ಟ ರಸ್ತೆಯ ಸಿ.ಕೆ.ಪಾಳ್ಯ ನಿವಾಸಿ ಸೋನಿಯಾ(25) ಬಂಧಿತ ಆರೋಪಿ. ಆಕೆಯಿಂದ 12 ಲಕ್ಷ ರೂ. ಮೌಲ್ಯದ 108 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ದೂರುದಾರರಾದ ಭಾವನಾ ಪತಿ ಹಾಗೂ ಅತ್ತೆ ಜತೆ ಕೋಣನಕುಂಟೆಯ ಅಂಜನಾದ್ರಿ ಲೇಔಟ್ನಲ್ಲಿ ಅಪಾರ್ಟ್ಮೆಂಟ್ ವೊಂದರಲ್ಲಿ ವಾಸವಾಗಿದ್ದಾರೆ. ಭಾವನಾ ಅತ್ತೆ ಅನಾರೋಗ್ಯಕ್ಕೊಳಗಾಗಿದ್ದು, ಅವರನ್ನು ನೋಡಿಕೊಳ್ಳಲು ಸೋನಿಯಾ ಸೇರಿ ಇಬ್ಬರು ಯುವತಿಯನ್ನು ನೇಮಿಸಿಕೊಂಡಿದ್ದರು. ಈ ಮಧ್ಯೆ ಅ.7ರಂದು ದಸರಾ ಹಬ್ಬದ ಪ್ರಯುಕ್ತ ಅನಂತಪದ್ಮನಾಭ ದೇವರ ವ್ರತ ಮಾಡಿದ್ದು, ಬೆಳಗ್ಗೆ ಮನೆಯವರು ಚಿನ್ನಾಭರಣ ಧರಿಸಿ, ಸಂಜೆ ರೂಮಿನ ಪೆಟ್ಟಿಗೆಯಲ್ಲಿ ಇರಿಸಿದ್ದರು. ಅ.31ರಂದು ಪೂಜೆ ಸಲುವಾಗಿ ಪೆಟ್ಟಿಗೆ ತೆರೆದಾಗ ಚಿನ್ನಾಭರಣ ಕಳುವಾಗಿರುವುದು ಗೊತ್ತಾಗಿದೆ.
ಈ ಸಂಬಂಧ ಸೋನಿಯಾ ಮೇಲೆ ಅನುಮಾನಗೊಂಡು ಭಾವನಾ ದೂರು ನೀಡಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.