Manipur; ಹಿಂಸಾಚಾರದ ಬಳಿಕ ಕೇಂದ್ರದಿಂದ 20 CAPF ತುಕಡಿಗಳ ರವಾನೆ
Team Udayavani, Nov 13, 2024, 12:39 PM IST
ಇಂಫಾಲ್: ಮಣಿಪುರದಲ್ಲಿ ಹೊಸ ದಾಳಿಗಳು ಮತ್ತು ಕಾನೂನು ಸುವ್ಯವಸ್ಥೆ ಸಮಸ್ಯೆಗಳ ಹಿನ್ನೆಲೆಯಲ್ಲಿ ಕೇಂದ್ರವು ಸುಮಾರು 2,000 ಸಿಬಂದಿಗಳನ್ನು ಒಳಗೊಂಡ 20 ಹೆಚ್ಚುವರಿ ಸಿಎಪಿಎಫ್ ತುಕಡಿಗಳನ್ನು ಮಣಿಪುರಕ್ಕೆ ರವಾನಿಸಿದೆ ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ.
ಈ ಘಟಕಗಳ ಏರ್ಲಿಫ್ಟಿಂಗ್ ಮತ್ತು ತತ್ ಕ್ಷಣದ ನಿಯೋಜನೆಗಾಗಿ ಗೃಹ ಸಚಿವಾಲಯ ಮಂಗಳವಾರ ರಾತ್ರಿ ಆದೇಶ ಹೊರಡಿಸಿದೆ. ಸೋಮವಾರ ಸಿಆರ್ಪಿಎಫ್ ಜತೆಗಿನ ಭೀಕರ ಗುಂಡಿನ ಚಕಮಕಿಯಲ್ಲಿ ಕನಿಷ್ಠ 10 ಶಂಕಿತ ಉಗ್ರಗಾಮಿಗಳು ಹತರಾಗಿದ್ದಾರೆ. ಸೇನಾ ಸಮವಸ್ತ್ರದಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಶಸ್ತ್ರಸಜ್ಜಿತವಾದ ಬಂಡುಕೋರರು ಬೊರೊಬೆಕ್ರಾ ಪೊಲೀಸ್ ಠಾಣೆ ಮತ್ತು ಪಕ್ಕದ ಸಿಆರ್ಪಿಎಫ್ ಶಿಬಿರದ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದರು.
ಜಿರಿಬಾಮ್ನಲ್ಲಿ ಮತ್ತೆ ಸುತ್ತಿನ ಹಿಂಸಾಚಾರದಿಂದಾಗಿ ಕಳೆದ ವಾರದಿಂದ ಮಣಿಪುರದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ. ಸೋಮವಾರದ ಘಟನೆಯ ನಂತರ, ಇಂಫಾಲ್ ಕಣಿವೆಯ ಅನೇಕ ಸ್ಥಳಗಳಿಂದ ಹಿಂಸಾಚಾರಗಳ ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.